ಕನಸಿನ ಮನೆಗೆ ಕಾಲಿಡುವ ತವಕದಲ್ಲಿದ್ದ ನರ್ಸ್​ ರಂಜಿತಾ.. ವಿಮಾನ ಪತನದಲ್ಲಿ ದುರಂತ ಅಂತ್ಯ

author-image
Veena Gangani
Updated On
ಕನಸಿನ ಮನೆಗೆ ಕಾಲಿಡುವ ತವಕದಲ್ಲಿದ್ದ ನರ್ಸ್​ ರಂಜಿತಾ.. ವಿಮಾನ ಪತನದಲ್ಲಿ ದುರಂತ ಅಂತ್ಯ
Advertisment
  • ಮನೆಗೆ ಆಸರೆಯಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು
  • ಕೇರಳದ ಪತನಂತಿಟ್ಟ ಜಿಲ್ಲೆಯ ಪುಲ್ಲತ್​ ನಿವಾಸಿಯಾಗಿದ್ದ ರಂಜಿತಾ
  • ಕಳೆದ ನಾಲ್ಕು ದಿನಗಳ‌ ಹಿಂದೆ ಊರಿಗೆ ಮರಳಿದ್ದ ನರ್ಸ್​ ರಂಜಿತಾ

ಗುಜುರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಂಜಿತಾ ಗೋಪಕುಮಾರನ್​ ನಾಯರ್​ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?

publive-image

ರಂಜಿತಾ ಗೋಪಕುಮಾರನ್​ ನಾಯರ್ ಅವರು ಕೇರಳದ ಪತನಂತಿಟ್ಟ ಜಿಲ್ಲೆಯ ಪುಲ್ಲತ್​ ಮೂಲದವರಾಗಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ಲಂಡನ್​ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಗಲ್ಫ ದೇಶಗಳಲ್ಲಿ ಕೆಲಸ ಮಾಡಿದ್ದ ರಂಜಿತಾ ನಂತರ ಲಂಡನ್​ಗೆ ನರ್ಸ್​ ಆಗಿ ಮರಳಿದ್ದರು.

publive-image

ರಜೆಯ ನಿಮಿತ್ತ ನಾಲ್ಕು ದಿನಗಳ‌ ಹಿಂದೆ ಊರಿಗೆ ಬಂದಿದ್ದರು ರಂಜಿತಾ. ರಂಜಿತಾ ಅವರ ಇಬ್ಬರು ಮಕ್ಕಳು ಮತ್ತು ತಾಯಿ ಪುಲ್ಲತ್​ನಲ್ಲಿ ವಾಸವಾಗಿದ್ದಾರೆ. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್​ಗೆ ಕಳುಹಿಸಿ ಲಂಡನ್​ಗೆ ಹೊರಟ್ಟಿದ್ದರು. ಹೀಗಾಗಿ ಬುಧವಾರ ಪತನಂತಿಟ್ಟದಿಂದ ಅಹಮದಾಬಾದ್​ಗೆ ತೆರಳಿದ್ದರು. ಆದ್ರೆ ಅಹಮದಬಾದ್ ಏರ್​ ಪೋರ್ಟ್​ ಬಳಿ ವಿಮಾನ ದುರಂತದಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

publive-image

ಇನ್ನೂ, ಮೃತ ರಂಜಿತಾ ಅವರು ಹೊಸ ಮನೆಗೆ ಕಾಲಿಡುವ ತವಕದಲ್ಲಿದ್ದರು. ಈಗಾಗಲೇ ಹೊಸ ಮನೆಯ ಬಹುತೇಕ ಕೆಲಸ ಕಂಪ್ಲೀಟ್ ಆಗಿತ್ತು. ಮುಂದಿನ ತಿಂಗಳು ಅಂದ್ರೆ ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ಕನಸು ಕಂಡಿದ್ದರು. ಆದ್ರೆ ವಿಮಾನ ಪತನದ ಘೋರ ದುರಂತದಲ್ಲಿ ರಂಜಿತಾ ಅವರು ಮೃತಪಟ್ಟಿದ್ದಾರೆ. ಮನೆಗೆ ಆಸರೆಯಾಗಿದ್ದ ರಂಜಿತಾ ಅವರನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment