ಗುಜರಾತ್​ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ 30 ಮಂದಿ.. ಪತನಗೊಳ್ಳುವ ದೃಶ್ಯ ಸೆರೆ VIDEO

author-image
Veena Gangani
Updated On
ಗುಜರಾತ್​ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ 30 ಮಂದಿ.. ಪತನಗೊಳ್ಳುವ ದೃಶ್ಯ ಸೆರೆ VIDEO
Advertisment
  • ಮೇಧಿನಿ ನಗರ್​ದಲ್ಲಿ ಪತನವಾದ ಏರ್ ಇಂಡಿಯಾ ವಿಮಾನ
  • ಟೇಕ್ ಆಫ್ ಆಗುತ್ತಿದ್ದಂತೆ ಪತನವಾಗೊಂಡ ವಿಮಾನ
  • ವಿಮಾನ ಪತನದ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ

ಗುಜರಾತ್​ನ ಅಹಮದಾಬಾದ್​ನಲ್ಲಿ ಏಕಾಏಕಿ ವಿಮಾನ ಪತನಗೊಂಡಿದೆ. ಅಹಮದಾಬಾದ್​ ಏರ್​ಪೋರ್ಟ್ ಬಳಿ ವಿಮಾನ ಪತನಗೊಂಡ ಪರಿಣಾಮ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಇಂದು ಭಾರೀ ಮಳೆ.. ಈ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕಡ್ಡಾಯ ರಜೆ ಘೋಷಣೆ

publive-image

ವಿಮಾನದಲ್ಲಿ ಗುಜರಾತ್​​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ಅಲ್ಲದೇ ಈ ದುರ್ಘಟನೆಯಲ್ಲಿ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ದುರಂತದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿದೆ.


">June 12, 2025

ಮೊಬೈಲ್​ನಲ್ಲಿ ಸೆರೆಯಾದ ದೃಶ್ಯದಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಪತನವಾಗಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment