/newsfirstlive-kannada/media/post_attachments/wp-content/uploads/2025/06/AIR_INDIA_UK_FAMILY.jpg)
ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಪರನಗೊಂಡಿದೆ. ಇದರಲ್ಲಿ ಒಟ್ಟು 242 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಎರಡು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಕೊನೆಯುಸಿರೆಳೆದಿದ್ದಾರೆ.
ಇಂಗ್ಲೆಂಡ್ ಮೂಲದವರಾದ ಜಾವೇದ್ ಅಲಿ ಸೈಯದ್ (37) ಇವರ ಹೆಂಡತಿ ಮರಿಯಮ್ ಸೈಯದ್ ಹಾಗೂ ಇವರ ಎರಡು ಮಕ್ಕಳು 8 ವರ್ಷದ ಮಗ ಝೈನ್ ಅಲಿ ಹಾಗೂ 4 ವರ್ಷದ ಅಮಾನಿ ಪ್ರಾಣ ಬಿಟ್ಟಿದ್ದಾರೆ. ಇವರು 5 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದರು. ಪ್ರವಾಸ ಮುಗಿದ ಕಾರಣ ಇಂಗ್ಲೆಂಡ್ಗೆ ವಾಪಸ್ ಆಗಲೆಂದು ಅಹಮದಾಬಾದ್ ಏರ್ಪೋರ್ಟ್ನಲ್ಲಿ ವಿಮಾನ ಏರಿದ್ದರು. ಆದರೆ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಇದನ್ನೂ ಓದಿ: Ahmadabad Plane Crash; ತಂಗಿಗೆ ಲಂಡನ್ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ.. ಇಬ್ಬರು ನಿಧನ
ಈ ವಿಮಾನ ದುರಂತದಲ್ಲಿ ಜಾವೇದ್ ಅಲಿ ಸೈಯದ್ ಕುಟುಂಬ ಕಣ್ಮುಚ್ಚಿದೆ. ಜಾವೇದ್ ಅಲಿ ಸೈಯದ್ ಮತ್ತು ಹೆಂಡತಿ ಮರಿಯಮ್ ಇಬ್ಬರು ಇಂಗ್ಲೆಂಡ್ಗೆ ಸೇರಿದವರು ಆಗಿದ್ದರು. ಬೆಸ್ಟ್ ವೆಸ್ಟರ್ನ್ ಕೆನ್ಸಿಂಗ್ಟನ್ ಒಲಿಂಪಿಯಾ ಬಳಿ ಇದ್ದ ಅವಾರ್ಡ್ ವಿನ್ನಿಂಗ್ ಹೋಟೆಲ್‌ನಲ್ಲಿ ಜಾವೇದ್ ಅಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಹೆಂಡತಿ ಮರಿಯಮ್ ಹ್ಯಾರೋಡ್ಸ (Harrods) ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗ್ತಿದೆ.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಪ್ಲೇನ್ ಹೊರಟ್ಟಿತ್ತು. ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ ಟೇಕ್ಆಫ್ ಆಗಿದ್ದ ಏರ್ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ