/newsfirstlive-kannada/media/post_attachments/wp-content/uploads/2025/07/ahmedabad-plane-crash.jpg)
'ತಾಯಿಗಿಂತ ದೇವರಿಲ್ಲ' ಅನ್ನೋದನ್ನ ಪ್ರೂವ್ ಮಾಡಿದ್ಲು ಈ ಮಾತೆ. ಬಿಗಿದಪ್ಪಿದ್ಲು.. ಓಡಿದ್ಲು.. ಬೆಂಕಿ ಸಾ*ವು ಎರಡನ್ನೂ ಸೋಲಿಸಿದ್ಲು. ದುರಂತದಲ್ಲಿ ಮಗು ರಕ್ಷಿಸಿದ್ದೇ ರೋಚಕ. ಮುಕ್ಕೋಟಿ ದೇವರಿಗಿಂತ ಹೆತ್ತ ತಾಯಿ ಮುಗಿಲು ಅಂತಾರೆ. ಅದು ಅಕ್ಷರಶಃ ಸತ್ಯ. ಯಾಕಂದ್ರೆ, ಆಕೆ ತನ್ನ ಪ್ರಾಣಕ್ಕೆ ಸಂಚಕಾರ ಬಂದ್ರೂ ಸಹಿಸಿಕೊಂಡಾಳು. ಆದ್ರೆ, ಅಪ್ಪಿ ತಪ್ಪಿ ತಾನು ಹೆತ್ತ ಕರುಳ ಕುಡಿಗೆ ಏನಾದ್ರೂ ಅಪಾಯ ಬಂತು ಅಂತಾದ್ರೆ, ಯುದ್ಧ ಭೂಮಿಯಲ್ಲಿ ಹೋರಾಡೋ ಯೋಧೆಯೂ ಆಗ್ತಾಳೆ. ಸಂಹಾರ ಮಾಡೋ ರುದ್ರಕಾಳಿ ರೂಪವನ್ನೂ ತಾಳುತ್ತಾಳೆ. ಪ್ರಾಣ ತ್ಯಾಗಕ್ಕೂ ಸಿದ್ಧಳಾಗಿರ್ತಾಳೆ. ಅಷ್ಟಕ್ಕೂ ತಾಯಿ ಬಗ್ಗೆ ನಾವು ಇಷ್ಟೊಂದು ಹೇಳೋದಕ್ಕೆ ಕಾರಣ ಘನಘೋರ ದುರಂತದಲ್ಲಿ ಬೆಂಕಿಯ ಜ್ವಾಲೆಯಿಂದ ಮಗುವನ್ನ ರಕ್ಷಣೆ ಮಾಡಿರೋ ಮಾತೆ.
ಇದನ್ನೂ ಓದಿ:ಎರಡನೇ ಪಾಯಿಂಟ್ನಲ್ಲೂ ಸಿಕ್ಕಿಲ್ಲ ಯಾವುದೇ ಕುರುಹು.. SIT ಮುಂದಿನ ಪ್ಲಾನ್ ಏನು?
ಧ್ಯಾಂಶ್ ಕೇವಲ 8 ತಿಂಗಳ ಮಗು. ತಾಯಿಯ ಹೆಸರು ಮನೀಷಾ ಕಚ್ಚಡಿಯಾ. ಈಕೆ ತನ್ನ ಮಗುವನ್ನ ರಕ್ಷಣೆ ಮಾಡೋದಕ್ಕೆ ಮಾಡಿದ್ದ ಹೋರಾಟ ತಾಯಿಯೇ ದೇವರು ಅನ್ನೋದನ್ನ ಪದೇ ಪದೇ ಸಾರುವಂತಿದೆ. ಈಕೆಯ ಹೋರಾಟ, ಛಲ ಹೇಗಿತ್ತು ಅಂದ್ರೆ ಯಮರಾಯನನ್ನ ಕರ್ಕೊಂಡ್ ಬಂದಿದ್ದ ಬೆಂಕಿಯೇ ಸೋತು ಹೋಗಿದೆ. ಜೂನ್ 12ನೇ ತಾರೀಕು ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು. ಕಾರಣ, ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಐಸಿ 171 ಟೇಕ್‌ಅಪ್ ಆಗಿ ಒಂದೆರಡು ನಿಮಿಷದಲ್ಲಿ ಬಿಲ್ಡಿಂಗ್‌ವೊಂದಕ್ಕೆ ಅಪ್ಪಳಿಸುತ್ತೆ. ಕ್ಷಣಾರ್ಧದಲ್ಲಿಯೇ ಎಲ್ಲವೂ ಭಸ್ಮವಾಗಿ ಬಿಡುತ್ತೆ. ಫ್ಲೈಟ್‌ನಲ್ಲಿದ್ದ 241 ಮಂದಿ ಸುಟ್ಟು ಭಸ್ಮವಾಗಿದ್ರೆ, ವಿಮಾನ ಯಾವ ಬಿಲ್ಡಿಂಗ್ ಅಪ್ಪಳಿಸಿತ್ತೋ? ಅದೇ ಬಿಜೆ ವೈದ್ಯಕೀಯ ಕಾಲೇಜಿನ ವಸತಿ ಕಟ್ಟಡದಲ್ಲಿದ್ದ 15ಕ್ಕೂ ಹೆಚ್ಚಿನ ಮಂದಿಯೂ ಸುಟ್ಟುಬೂದಿಯಾಗಿದ್ರು. ರಸ್ತೆಯಲ್ಲಿ ನಡ್ಕೊಂಡ್ ಹೋಗ್ತಾ ಇದ್ದ, ಟೀ ಅಂಗಡಿ ಪಕ್ಕ ಮರದಡಿ ಮಲಗಿದ್ದ ಬಾಲಕ ಎಲ್ಲರೂ ಸುಟ್ಟು ಹೋಗಿದ್ರು.
ಆದ್ರೆ, ಅದೇ ಬಿಲ್ಡಿಂಗ್‌ನಲ್ಲಿದ್ದ ಮನೀಷಾ ಅನ್ನೋ ಮಹಿಳೆ ಪವಾಡ ರೂಪದಲ್ಲಿ ತಾನು ಸೇಫ್ ಆಗಿದ್ದು ಅಷ್ಟೇ ಅಲ್ಲ, ತನ್ನ ಮಗುವನ್ನ ರಕ್ಷಣೆ ಮಾಡ್ಕೊಂಡಿದ್ದಾಳೆ. ಆ ಘನಘೋರ ದುರಂತ ಸಂಭವಿಸಿದ ಆದ್ಮೇಲೆ ಆಸ್ಪತ್ರೆಯಲ್ಲಿ ಆ ತಾಯಿ ಮಗುವಿನ ಪುನರ್ಜನ್ಮಕ್ಕೆ ಇನ್ನೊಂದ್ ಯುದ್ಧ ಮಾಡಿ ಗೆದ್ದಿದ್ದಾಳೆ. ಘೋರ ದುರಂತ ನಡೆದ ದಿನ ಮನೀಷಾ ಕಚ್ಚಡಿಯಾ ವಿಮಾನ ಬಂದು ಅಪ್ಪಳಿಸಿರೋ ಬಿಜೆ ವೈದ್ಯಕೀಯ ಕಾಲೇಜು ವಸತಿ ಕಟ್ಟಡದಲ್ಲಿದ್ಲು. ಈಕೆ ಗುಜರಾತ್ ಮೂಲದವಳೇ ಆಗಿದ್ದು. ಈಕೆಯ ಜೊತೆ 8 ತಿಂಗಳ ಪುಟ್ಟ ಮಗು ಧ್ಯಾಂಶ್ ಕೂಡ ಇತ್ತು. ಈಕೆಯ ಪತಿ ಕಪಿಲ್ ಕಚ್ಚಡಿಯಾ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಆ ಸಂದರ್ಭದಲ್ಲಿ ಕಾಲೇಜ್‌ಗೆ ಹೋಗಿದ್ರು. ಮನೆಯಲ್ಲಿದ್ದ ಮನೀಷಾಗೆ ಮಧ್ಯಾಹ್ನ 1.30ರ ವೇಳೆ ಭಾರೀ ಸ್ಫೋಟದ ಸದ್ದು ಕೇಳುತ್ತೆ. ಕ್ಷಣಾರ್ಧದಲ್ಲಿಯೇ ನರಳಾಟ ಕಿರುಚಾಟ ಕಿವಿಗೆ ಬಂದು ಅಪ್ಪಳಿಸುತ್ತೆ. ಏನ್ ಆಗ್ತಿದೆ ಅಂತಾ ಯೋಚಿಸೋದಕ್ಕೆ ಸಮಯ ಇಲ್ಲವಾಗಿತ್ತು. ನೋಡ್ತಾ ನೋಡ್ತಾ ಇರುವಂತೆ ಬೆಂಕಿಯೇ ಕೆನ್ನಾಲಿಗೆ ಈಕೆ ಇದ್ದ ಮನೆಗೆ ನುಗ್ಗಿ ಬಂದು ಬಿಡುತ್ತೆ.
ಮನೆಯೊಳಗೆ ಬೆಂಕಿ ನುಗ್ಗಿ ಬರ್ತಾ ಇದೆ. ಮೈಕೈ ಸುಟ್ಟು ಹೋಗ್ತಿದೆ ಅನ್ನೋದ್ ಅರಿವಿಗೆ ಬರ್ತಾ ಇದಂತೆ ಯಾರೇ ಆದ್ರೂ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣ ಉಳಿಸ್ಕೊಳ್ಳುವ ಪ್ರಯತ್ನ ಮಾಡ್ತಾರೆ. ಆದ್ರೆ, ಆ ಜಾಗದಲ್ಲಿ ತಾಯಿ ಇದ್ರೆ ತನ್ನ ಪ್ರಾಣ ಹೋದ್ರೂ ಪರವಾಗಿಲ್ಲ ತನ್ನ ಮಗುವಿನ ಪ್ರಾಣ ಉಳಿಬೇಕು ಅಂತಾ ಹೋರಾಡೋದು ಪಕ್ಕಾ. ಅದು ಎದುರಿಗೆ ಬೆಂಕಿಯೇ ಅಲ್ಲ, ಮಳೆ ಗಾಳಿ ಏನೇ ಆಗಿರ್ಲಿ, ಆ ಸ್ಥಳದಲ್ಲಿ ತಾಯಿ ಇದ್ದಾಳೆ ಅಂದ್ರೆ ಆಕೆ ತನ್ನ ಮಗುವಿಗಾಗಿ ಕೊನೆಯ ಕ್ಷಣದವರೆಗೂ ಹೋರಾಟ ಮಾಡೋದು ಗ್ಯಾರಂಟಿ. ಅಂದು ಜೂನ್ 12ರಂದು ಆಗಿದ್ದು ಅದೇ ನೋಡಿ. ಮನೀಷಾಗೆ ವಿಮಾನ ಬಂದು ಅಪ್ಪಳಿಸಿದ ಸಂದರ್ಭದಲ್ಲಿ ಏನ್ ಆಗಿದೆ ಅನ್ನೋದ್ ಅರಿವಿಗೆ ಇರ್ಲಿಲ್ಲ. ಆದ್ರೆ, ಬೆಂಕಿ ಬಂದು ನುಗ್ಗಿದ್ದು ನೋಡಿ ಮಗುವನ್ನ ಬಿಗಿದಪ್ಪಿಕೊಳ್ತಾಳೆ. ಯಾವುದೇ ಕಾರಣಕ್ಕೂ ತನ್ನ ಮಗುವನ್ನ ಅಗ್ನಿಗೆ ಆಹುತಿಯಾಗೋದಕ್ಕೆ ಬಿಡೋದಿಲ್ಲ ಅಂತಾ ಪಣತೊಟ್ಟು ನಿಂತುಕೊಳ್ತಾಳೆ. ಆಕೆಯ ಛಲ ದಿಂದಲೇ ಇಂದು ಮಗುವಿಗೆ ಪುನರ್ಜನ್ಮ ಸಿಕ್ಕಿದೆ.
ಇದನ್ನೂ ಓದಿ:ಬಿಸಿಸಿಐ ವಿರುದ್ಧ ತಿರುಗಿಬಿದ್ದ ವಾಷಿಂಗ್ಟನ್ ಸುಂದರ್ ತಂದೆ.. ಇವರ ಆಕ್ರೋಶಕ್ಕೆ ಕಾರಣ ಏನು..?
ಯಮರೂಪಿಯಾಗಿ ಬಂದಿದ್ದ ಬೆಂಕಿ ಮನೀಷಾ ಮೈ ಕೈ, ಕಾಲು ಎಲ್ಲವನ್ನು ಸುಟ್ಟು ಹಾಕಿತ್ತು. ಆದ್ರೂ ತನ್ನ ಮಗುವನ್ನ ರಕ್ಷಣೆ ಮಾಡ್ಬೇಕು ಅಂತ ಪಣತೊಟ್ಟಿದ್ದ ಆಕೆ ಮಗುವನ್ನ ಬಿಗಿದಪ್ಪಿಕೊಂಡು ಹೊರಗೆ ಓಡಿ ಬರ್ತಾಳೆ. ಮೈಮೇಲೆ ಸುಟ್ಟಗಾಯಗಳು ಇದ್ದಾಗ ಮಗುವನ್ನ ಎತ್ತಿಕೊಂಡು ಬಿಲ್ಡಿಂಗ್‌ನಿಂದ ಕೆಳಗೆ ಬರೋದು ಸುಲಭದ ಕೆಲ್ಸ ಆಗಿರ್ಲಿಲ್ಲ. ಆದ್ರೆ, ಆಕೆಗೆ ತಾನು ಬದುಕಬೇಕು ಅನ್ನೋದಕ್ಕಿಂತಲೂ ತನ್ನ ಮಗು ಬದುಕಬೇಕು. ಮಗುವಿನ ಜೀವ ಕಾಪಾಡ್ಬೇಕು ಅನ್ನೋದ್ ಇತ್ತು. ಅದ್ಯಾವಾಗ ಮಗುವನ್ನ ಹಿಡ್ಕೊಂಡ್ ಕೆಳಗೆ ಬರ್ತಾಳೋ ಆವಾಗ ಗೊತ್ತಾಗುತ್ತೆ ವಿಮಾನವೊಂದು ಬಂದು ಬಿಲ್ಡಿಂಗ್‌ಗೆ ಅಪ್ಪಳಿಸಿದೆ ಅನ್ನೋದು. ಅದು ಕೇವಲ 8 ತಿಂಗಳ ಮಗು ಅಷ್ಟೇ. ಆ ಎಳೆಯ ಚರ್ಮಕ್ಕೆ ಬೆಂಕಿ ಅಲ್ಲ, ಬೆಂಕಿಯ ಕೆನ್ನಾಲಿಗೆ ಶಾಖ ತಾಗಿದ್ರೂ ಸಾಕು ಬೆಂದು ಹೋಗುತ್ತೆ. ತಾಯಿ ಮತ್ತು ಮಗುವನ್ನ ಆಸ್ಪತ್ರೆಗೆ ಸೇರಿಸಿದ್ದಾಗ ತಾಯಿಗೆ ಶೇಕಡಾ 25 ರಷ್ಟು ಸುಟ್ಟಗಾಯವಾಗಿತ್ತು. ಆಕೆಯ ಕೈ, ಕಾಲು, ಬೆನ್ನಿನ ಭಾಗ ಸುಟ್ಟು ಹೋಗಿತ್ತು. ಮಗುವಿಗೆ ಶೇಕಡಾ 36 ರಷ್ಟು ಸುಟ್ಟು ಹೋಗಿತ್ತು. ಇಲ್ಲಿಯವರೆಗೂ ತಾಯಿ ಮಾಡಿದ್ದು ಮಹಾಯುದ್ಧವಾಗಿತ್ತು. ತನ್ನ ಮಗುವಿಗಾಗಿ ಬೆಂಕಿಯ ವಿರುದ್ಧವೇ ಹೋರಾಟ ಮಾಡಿ ವಿಜಯ ಸಾಧಿಸಿದ್ಲು. ಆದ್ರೆ, ಅದ್ಯಾವಾಗ ಆಸ್ಪತ್ರೆ ಸೇರ್ತಾಳೋ? ಆವಾಗ ಮಗುವಿಗೆ ಪುನರ್‌ಜನ್ಮ ನೀಡೋದಕ್ಕೆ ಇನ್ನೊಂದ್ ಹೋರಾಟ ಮಾಡ್ಬೇಕಾಗುತ್ತೆ.
ಶೇಕಡಾ 36 ರಷ್ಟು ಸುಟ್ಟು ಹೋಗಿದ್ದ ಮಗು ಬದುಕೋದು ಡೌಟು ಅಂತಾ ವೈದ್ಯರು ಹೇಳಿರ್ತಾರೆ. ಆದ್ರೆ, ತಾಯಿ ತನ್ನ ಮಗುವನ್ನ ಕಾಪಾಡಿಕೊಳ್ಳೋದಕ್ಕೆ ಯಾವ ತ್ಯಾಗಕ್ಕೂ ಸಿದ್ಧಳಾಗಿದ್ದಳು. ಅಂತೂ ಇನ್ನೊಮ್ಮೆ ತ್ಯಾಗ ಮಾಡಿದ್ಲು. ಹಾಗಾದ್ರೆ, ಆಸ್ಪತ್ರೆಯಲ್ಲಿ ತಾಯಿ ತನ್ನ ಕರುಳ ಕುಡಿಯನ್ನ ಉಳಿಸಿಕೊಳ್ಳೋದಕ್ಕೆ ಆ ತಾಯಿ ಮಾಡಿದ್ದ ಹೋರಾಟ ಎಂಥಾದ್ದು ಅನ್ನೋದ್ ಗೊತ್ತಾದ್ರೆ ಇನ್ನೊಮ್ಮೆ ಆಕೆ ತಾಯಿಯಲ್ಲ, ಸಾಕ್ಷಾತ್ ದೇವತೆ ಅನ್ನೋದ್ ಜಗತ್ತಿಗೆ ಗೊತ್ತಾಗುತ್ತೆ.
ಏಕಾಏಕಿ ವಿಮಾನ ಬಂದು ಬಿಲ್ಡಿಂಗ್‌ಗೆ ಅಪ್ಪಳಿಸಿದ್ದಾಗ ಮನೀಷಾಗೆ ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಆಕೆಯ ಕಣ್ಣ ಮುಂದೆ ಇದ್ದಿದ್ದು ತನ್ನ ಮಗುವಿನ ರಕ್ಷಣೆಯಾಗಿತ್ತು. ಹೀಗಾಗಿ ಆಕೆ ಬೆಂಕಿಗೂ ಹೆದರಿಲ್ಲ. ಆದ್ರೆ, ಆಸ್ಪತ್ರೆಗೆ ಕರ್ಕೊಂಡ್ ಹೋದ್ಮೇಲೆ ಅಲ್ಲಿಯೂ ಅಗ್ನಿ ಪರೀಕ್ಷೆ ಎದುರಾಗಿತ್ತು. ಆ ಪರೀಕ್ಷೆಯಿಂದ ತಾಯಿಗೇ ಮಗುವನ್ನ ಪಾರು ಮಾಡುತ್ತಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ