/newsfirstlive-kannada/media/post_attachments/wp-content/uploads/2025/06/Boeing-787-1.jpg)
ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ( Boeing 787 Dreamliner) ಘೋರ ದುರಂತಕ್ಕೆ ಒಳಗಾಗಿದೆ. ನಿನ್ನೆ ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಘಾನಿನಗರ ಪ್ರದೇಶದ ಬಿಜೆ ಎಂಬಿಬಿಎಸ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿತು. ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್ನಲ್ಲಿದ್ದ 24 ಭಾವಿ ವೈದ್ಯರು ಜೀವಬಿಟ್ಟಿದ್ದಾರೆ. ಇನ್ನು, ವಿಮಾನದಲ್ಲಿದ್ದ ಓರ್ವ ಪ್ರಯಾಣಿಕನ ಅದೃಷ್ಟ ಗಟ್ಟಿ ಇತ್ತು. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರ ಸ್ನೇಹಿಯಾಗಿದ್ದ ರೋಶ್ನಿ.. ಜನಪ್ರಿಯ ಟ್ರಾವೆಲ್ Influencer ಫೋಟೋಗಳು..!
ಘಟನೆ ಬೆನ್ನಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ದುರಂತದ ಬಗ್ಗೆ ಮಾಹಿತಿ ನೀಡಿರುವ ಅವರು.. ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾಗಿದೆ. ಘಟನೆಯಿಂದ ಇಡೀ ದೇಶ ಆಘಾತಕ್ಕೊಳಗಾಗಿದೆ. ದೇಶ ಸಂತ್ರಸ್ತ ಕುಟುಂಬಗಳೊಂದಿಗೆ ನಿಂತಿದೆ ಎಂದರು.
ಘಟನೆ ನಡೆದು 10 ನಿಮಿಷದಲ್ಲಿ ಭಾರತ ಸರ್ಕಾರಕ್ಕೆ ಮಾಹಿತಿ ತಲುಪಿದೆ. ನಾನು ತಕ್ಷಣ ಎಲ್ಲರನ್ನೂ ಸಂಪರ್ಕಿಸಿದೆ. ಪ್ರಧಾನಿ ಮೋದಿಯವರಿಂದಲೂ ಕರೆ ಬಂತು. ವಿಮಾನಯಾನ ಇಲಾಖೆ ತನಿಖೆ ಆರಂಭಿಸಿದೆ. ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು. ಬೆಂಕಿ ಎಷ್ಟು ವೇಗವಾಗಿ ಹೊತ್ತಿಕೊಂಡಿತೆಂದರೆ ಅವರನ್ನು ಉಳಿಸಲು ಯಾವುದೇ ಅವಕಾಶವಿರಲಿಲ್ಲ ಎಂದಿದ್ದಾರೆ. ಇನ್ನು ವಿಮಾನದ ಒಟ್ಟು ಇಂಧನ ಸಾಮರ್ಥ್ಯ 1.26 ಲೀಟರ್ ಆಗಿದೆ. ಗಂಟೆಗೆ 954 ಕಿಲೋ ಮೀಟರ್ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ದೇಹಗಳು ಗುರುತಿಸಲಾಗಷ್ಟು ಸುಟ್ಟು ಭಸ್ಮ.. ಅಚ್ಚರಿ ಮೂಡಿಸಿದ ಭಗವದ್ಗೀತೆ.. VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ