/newsfirstlive-kannada/media/post_attachments/wp-content/uploads/2025/06/planecrashahmedabad-Victim-2.jpg)
ಅಹ್ಮದಾಬಾದ್ ವಿಮಾನ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ರೆ, ಸಾವಿರಾರು ಕುಟುಂಬಸ್ಥರು ಈಗಲೂ ಕಂಗಾಲಾಗಿದ್ದಾರೆ. 275 ಶವಗಳ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಾ ಇದ್ರೆ, ವಿಮಾನ ಹತ್ತಿಸಿ ಟಾಟಾ ಬೈ ಬೈ ಮಾಡಿ ಮನೆಗೆ ಬಂದವರು ಕಣ್ಣೀರು ಹಾಕುತ್ತಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅಮಾಯಕ ಎಷ್ಟೋ ಜನರ ಕನಸು ಬೆಂಕಿಯಲ್ಲಿ ಬೆಂದು ಹೋಗಿದೆ. ಈ ಪಾಯಲ್ ಅನ್ನೋ ಯುವತಿಯ ಕಥೆ ನಿಜಕ್ಕೂ ಕರುಣಾಜನಕವಾಗಿದೆ.
ಇದನ್ನೂ ಓದಿ: ₹2,400 ಕೋಟಿ ವಿಮೆ.. ಅತಿ ದೊಡ್ಡ ಇನ್ಶೂರೆನ್ಸ್ ಕ್ಲೇಮ್; ಏರ್ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಎಷ್ಟು?
ಆಟೋ ಡ್ರೈವರ್ ಸುರೇಶ್ ಅವರು ಹೇಗಾದ್ರು ಮಾಡಿ ನನ್ನ ಮಗಳನ್ನು ಡಾಕ್ಟರ್ ಮಾಡೋ ಕನಸು ಕಂಡಿದ್ದರು. ಗುಜರಾತಿನ ಸಬರಕಾಂತ್ ಜಿಲ್ಲೆಯ ಹಿಮ್ಮತ್ ನಗರದ ಪಾಯಲ್ ಕಟಿಕ್ ಅವರನ್ನು ತಂದೆ-ತಾಯಿ ಮಗಳನ್ನು ಚೆನ್ನಾಗಿ ಓದಿಸಲು ಲಂಡನ್ ವಿಮಾನ ಹತ್ತಿಸಿದ್ದರು. ಆದರೆ ವಿಮಾನ ಟೇಕಾಫ್ ಆದ 8 ನಿಮಿಷದಲ್ಲೇ ಪತನವಾಗಿದೆ.
ಪಾಯಲ್ ಕಟಿಕ್ ತಂದೆ ಸುರೇಶ್ ಕಟಿಕ್ ಆಟೋ ರಿಕ್ಷಾ ಓಡಿಸುತ್ತಾರೆ. ಪಿಯುಸಿ ಮುಗಿಸಿದ ಬಳಿಕ ತಂದೆ, ತಾಯಿ ಜೊತೆಗೆ ವಾಸ ಇದ್ದ ಪಾಯಲ್‌ಗೂ ಡಾಕ್ಟರ್ ಆಗುವ ಆಸೆ ಇತ್ತು. ಮಗಳನ್ನು ಡಾಕ್ಟರ್ ಮಾಡಬೇಕೆಂದು ತಂದೆ ಸುರೇಶ್ ಅವರು ಬ್ಯಾಂಕ್ ಸಾಲ ಪಡೆದು ಲಂಡನ್‌ಗೆ ಕಳಿಸುತ್ತಿದ್ದರು.
ಮಗಳು ಪಾಯಲ್ ವೈದ್ಯೆ ಆದ ಬಳಿಕ ಬ್ಯಾಂಕ್ ಸಾಲ ಮರುಪಾವತಿಗೆ ಆಟೋ ರಿಕ್ಷಾ ಚಾಲಕ ಸುರೇಶ್ ಯೋಚಿಸಿದ್ದರು. ಆದರೆ ಈಗ ಮಗಳೂ ಇಲ್ಲ, ಬ್ಯಾಂಕ್ ಸಾಲ ಮರುಪಾವತಿಗೆ ದಿಕ್ಕೇ ತೋಚುತ್ತಿಲ್ಲ. ಲಂಡನ್‌ನಲ್ಲಿ ಎಂಬಿಬಿಎಸ್ ಓದಲು ಹೋಗುತ್ತಿದ್ದ ಪಾಯಲ್ ಕಟಿಕ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮಗಳನ್ನು ಕಳೆದುಕೊಂಡ ಸುರೇಶ್ ಕಟಿಕ್ ಕುಟುಂಬಸ್ಥರು ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ