ವಿಮಾನ ಪತನದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆ; ಅಹಮದಾಬಾದ್‌ನಲ್ಲಿ ಸಾವಿನ ಸಂಖ್ಯೆ 275ಕ್ಕೆ ಏರಿಕೆ

author-image
admin
Updated On
ಸುಟ್ಟು ಕರಕಲಾದ ದೇಹಗಳ ಗುರುತು ಪತ್ತೆ ಹಚ್ಚೋದೇ ಚಾಲೆಂಜ್.. ಡೆಂಟಲ್ ಫೋರೆನ್ಸಿಕ್ ಹೇಗೆ ಕೆಲಸ ಮಾಡುತ್ತೆ?
Advertisment
  • ವಿಮಾನ ಪತನದ ಸ್ಥಳದಲ್ಲಿ ಇನ್ನೂ ಮೃತರ ಶವಗಳು ಪತ್ತೆಯಾಗುತ್ತಿವೆ
  • ಹಾಸ್ಟೆಲ್ ಮೆಸ್ ಕಟ್ಟಡದಲ್ಲಿ ಶವ ಹೊರ ತೆಗೆಯುವ ಕಾರ್ಯಾಚರಣೆ
  • ವಿಮಾನದ ಹಿಂಭಾಗದಿಂದ ಮೆಸ್ ಕಟ್ಟಡದ ಮೇಲ್ಭಾಗ ಸಂಪೂರ್ಣ ಜಖಂ

ಅಹ್ಮದಾಬಾದ್‌ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏರ್ ಇಂಡಿಯಾದ AI-171 ವಿಮಾನ ಪತನವಾದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಇಂದು ಏರ್ ಇಂಡಿಯಾ ವಿಮಾನ ಪತನವಾದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. NDRF ಅಧಿಕಾರಿಗಳು ವಿಮಾನದ ಹಿಂಭಾಗದಿಂದ ಮತ್ತೊಂದು ಶವವನ್ನು ಹೊರ ತೆಗೆದಿದ್ದಾರೆ. ವಿಮಾನ ಹಾಸ್ಟೆಲ್ ಮೆಸ್ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡದ ಮೇಲ್ಭಾಗದಿಂದ ಶವ ಹೊರಕ್ಕೆ ತೆಗೆಯಲಾಗಿದೆ.

ಸತತ 3ನೇ ದಿನವೂ ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಕಟ್ಟಡದಲ್ಲಿ ಶವ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿಸಲಾಗಿದೆ. ವಿಮಾನದ ಹಿಂಭಾಗ, ರೆಕ್ಕೆಯನ್ನು ಇಂದು ಕಟ್ಟಡದಿಂದ ಕೆಳಕ್ಕೆ ಇಳಿಸಲು NSG, DGCA ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ.

ಇದನ್ನೂ ಓದಿ: ವಿಡಿಯೋ ನೋಡಿ 5 ಪ್ರಶ್ನೆ ಎತ್ತಿದ ತಜ್ಞರು.. ಏರ್​ ಇಂಡಿಯಾ ವಿಮಾನ ಪತನ ಆಗಿದ್ದು ಏಕೆ..? 

ಬಿ.ಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲ್ಭಾಗದಲ್ಲಿ ‌ವಿಮಾನದ ಹಿಂಭಾಗ ಹಾಗೂ ರೆಕ್ಕೆ ಭಾಗಗಳು ಬಿದ್ದಿವೆ. ಮೆಸ್ ಕಟ್ಟಡದ ಮೇಲ್ಭಾಗ ಸಂಪೂರ್ಣ ಜಖಂ ಆಗಿದ್ದು, ವಿಮಾನ ಪತನದ ಸ್ಥಳದಲ್ಲಿ ಡಿಜಿಸಿಎ, NSG ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

publive-image

ಜೂನ್ 12ರ ಮಧ್ಯಾಹ್ನ ಏರ್ ಇಂಡಿಯಾದ AI-171 ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತ್ತು. ಜೂನ್ 13ರಂದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು 29 ಶವಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

ದುರಂತದಲ್ಲಿ ಮೃತಪಟ್ಟವರಲ್ಲಿ 241 ಮಂದಿ ವಿಮಾನದ ಪ್ರಯಾಣಿಕರಾದ್ರೆ 33 ಮಂದಿ ಮೆಡಿಕಲ್ ಹಾಸ್ಟೆಲ್‌ನಲ್ಲಿದ್ದವರು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment