/newsfirstlive-kannada/media/post_attachments/wp-content/uploads/2025/06/vijay-rupani-ahmedabad-plane-crash.jpg)
ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ದುರಂತ ನಡೆದು 4 ದಿನಗಳ ಬಳಿಕ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಜೂನ್ 12 ರಂದು ನಡೆದ ವಿಮಾನ ಅಪಘಾತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಅವರು ಸಾವನ್ನಪ್ಪಿದ್ದರು. ಲಂಡನ್‌ನಲ್ಲಿರುವ ಕುಟುಂಬಸ್ಥರನ್ನ ನೋಡಲು ವಿಜಯ್ ರೂಪಾನಿ ಅವರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು.
/newsfirstlive-kannada/media/post_attachments/wp-content/uploads/2025/06/vijay-rupani-ahmedabad-plane-crash-1.jpg)
ವಿಜಯ್ ರೂಪಾನಿ ಅವರ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಗ್ವಿ ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಲಂಡನ್​ನಲ್ಲಿದ್ದ ವಿಜಯ್ ರೂಪಾನಿ ಅವರ ಪತ್ನಿ ಹಾಗೂ ಮಗ ಗಾಂಧಿನಗರಕ್ಕೆ ಆಗಮಿಸಿದ್ದಾರೆ. ಗಾಂಧಿನಗರದಲ್ಲಿರುವ ವಿಜಯ್ ರೂಪಾನಿ ನಿವಾಸಕ್ಕೆ ಸಿಎಂ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಗ್ವಿ ಅವರು ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ದುರಂತದ ಬೆನ್ನಲ್ಲೇ ಏರ್ ಇಂಡಿಯಾದಲ್ಲಿ ಮತ್ತೊಂದು ಯಡವಟ್ಟು.. ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಹಿಳೆ!
ಮಾಜಿ ಸಿಎಂ ವಿಜಯ್ ರೂಪಾನಿ ಅವರು 2016-2021ರವರೆಗೆ ಗುಜರಾತ್ ಸಿಎಂ ಆಗಿದ್ದರು. ರಾಜ್‌ಕೋಟ್ ವಿಧಾನಸಭಾ ಕ್ಷೇತ್ರವನ್ನು ವಿಜಯ್ ರೂಪಾನಿ ಅವರು ಪ್ರತಿನಿಧಿಸುತ್ತಿದ್ದರು. ಹೀಗಾಗಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆಯನ್ನು ರಾಜ್‌ಕೋಟ್ ನಗರದಲ್ಲೇ ನೆರವೇರಿಸಲು ನಿರ್ಧಾರ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us