/newsfirstlive-kannada/media/post_attachments/wp-content/uploads/2025/07/Ahmedabad_plane_crash.jpg)
ಗುಜರಾತ್‌ನ ಅಹಮದಾಬಾದ್​​ನಲ್ಲಿ ನಡೆದ ಏರ್ ಇಂಡಿಯಾ ವಿಮಾನದ ದುರಂತದ ಬಗ್ಗೆ ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ ವೆಸ್ಟಿಗೇಷನ್ ಬ್ಯೂರೋ ನಡೆಸಿದ ತನಿಖೆಯ ಪ್ರಾಥಮಿಕ ವರದಿ ಮಾತ್ರ ಈಗ ಬಿಡುಗಡೆ ಆಗಿದೆ. ತನಿಖೆಯ ಅಂತಿಮ ವರದಿ ಬರುವವರೆಗೂ, ಈ ಪ್ರಾಥಮಿಕ ವರದಿ ಆಧಾರದ ಮೇಲೆ ಸಾರ್ವಜನಿಕರು, ಮಾಧ್ಯಮಗಳು ಯಾವುದೇ ಅಂತಿಮ ತೀರ್ಮಾನಕ್ಕೆ ಬರಬಾರದು ಎಂದು ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು ಹೇಳಿದ್ದಾರೆ.
ಅಹಮದಾಬಾದ್ ಏರ್ ಪೋರ್ಟ್​ನಿಂದ ಟೇಕಾಫ್ ಆದ 3 ಸೆಕೆಂಡ್​ಗಳ ನಂತರ ಏರ್ ಇಂಡಿಯಾ ವಿಮಾನದ ಎರಡು ಇಂಜಿನ್​ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು ಎಂಬುದು ಈಗ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಮಾನದ ಇಂಧನ ಸ್ವಿಚ್​ಗಳು ಒಂದು ಸೆಕೆಂಡ್​ನಲ್ಲಿ ರನ್​ನಿಂದ ಕಟ್ ಆಫ್ ಸ್ಥಿತಿಗೆ ಹೋಗಿದ್ದವು. ಕಟ್ ಆಫ್ ಅಂದರೇ, ಇಂಜಿನ್​ಗೆ ಇಂಧನ ಪೂರೈಕೆಯನ್ನು ನಿಲ್ಲಿಸುವುದು.
ಈಗ ವಿಮಾನದ ಪತನದ ಬಗ್ಗೆ ನಡೆಯುತ್ತಿರುವ ತನಿಖೆಯು ಸವಾಲಿನದ್ದು ಎಂದು ಹೇಳಿರುವ ರಾಮ ಮೋಹನ್ ನಾಯ್ಡು, ಇದರಲ್ಲಿ ಹಲವಾರು ತಾಂತ್ರಿಕ ಅಂಶಗಳು ಇವೆ. ಪ್ರಾಥಮಿಕ ವರದಿಯ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಇದು ಸೂಕ್ತ ಕಾಲವಲ್ಲ, ಇದು ಪ್ರಿ ಮೆಚ್ಯೂರ್ ಹಂತವಾಗುತ್ತೆ ಎಂದು ರಾಮ ಮೋಹನ್ ನಾಯ್ಡು ಹೇಳಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾಥಮಿಕ ತನಿಖೆಯನ್ನು ವರದಿಯನ್ನು ಕೂಲಂಕುಷವಾಗಿ ವಿಶ್ಲೇಷಿಸುತ್ತಿದೆ. ಜನರು ಯಾವುದೇ ಅಂತಿಮ ತೀರ್ಮಾನಗಳಿಗೆ ಬರಬಾರದು. ಅಂತಿಮ ವರದಿ ಬಂದ ನಂತರವೇ ನಾವು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಬಹುದು. ಇನ್ನೂ ದೇಶದ ಪೈಲಟ್​ಗಳ ಮೇಲೆ ರಾಮ ಮೋಹನ್ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವದಲ್ಲಿ ನಮ್ಮ ಭಾರತದಲ್ಲಿ ಪೈಲಟ್ ಮತ್ತು ಸಿಬ್ಬಂದಿಯ ವಿಷಯದಲ್ಲಿ ನಮ್ಮಲ್ಲಿ ಅದ್ಭುತವಾದ ಪಡೆಯೇ ಇದೆ. ಏವಿಯೇಷನ್ ಇಂಡಸ್ಟ್ರಿಗೆ ಪೈಲಟ್ ಮತ್ತು ಸಿಬ್ಬಂದಿಯೇ ಬೆನ್ನೆಲಬು ಎಂದು ಹೇಳಿದ್ದಾರೆ.
ಇನ್ನೂ ತನಿಖೆಯ ಪ್ರಾಥಮಿಕ ವರದಿಯಲ್ಲಿ ವಿಮಾನದ ಇಂಜಿನ್‌ನ ಇಂಧನ ಸ್ವಿಚ್ ಬದಲಾವಣೆ ಆಗಿದ್ದು, ಆಕಸ್ಮಿಕವೋ, ಅಜಾಗರೂಕತೆಯಿಂದ ಆಗಿದೆಯೋ, ಉದ್ದೇಶಪೂರ್ವಕವೋ ಎಂಬ ವಿವರ ಇಲ್ಲ. ಕಾಕ್ ಪಿಟ್ ವಾಯ್ಸ್ ರೆಕಾರ್ಡರ್​ನಲ್ಲಿ ಪೈಲಟ್​ಗಳ ಮಾತುಕತೆಯ ವಿವರ ದಾಖಲಾಗಿದೆ. ಒಬ್ಬ ಪೈಲಟ್ ಮತ್ತೊಬ್ಬರನ್ನು, ಇಂಧನ ಸ್ವಿಚ್ ಕಟ್ ಆಫ್ ಮಾಡಿದ್ದು ಏಕೆ ಎಂದು ಕೇಳಿದ್ದಾರೆ. ನಾನು ಹಾಗೇ ಮಾಡಿಲ್ಲ ಎಂದು ಮತ್ತೊಬ್ಬ ಪೈಲಟ್ ಹೇಳಿದ್ದು ವಾಯ್ಸ್ ರೆಕಾರ್ಡರ್​ನಲ್ಲಿ ದಾಖಲಾಗಿದೆ.
ವಿಮಾನದ ಪೈಲಟ್ ಸುಮಿತ್ ಸಬರವಾಲ್, ಬರೋಬ್ಬರಿ 15,638 ಗಂಟೆ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಇನ್ನೂ ಕೋ ಪೈಲಟ್ ಕ್ಲೈವ್ ಕುಂದರ್ 3,403 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಇಬ್ಬರು ಅನುಭವಿ ಪೈಲಟ್​ಗಳು. ಪೈಲಟ್ ಗೊಂದಲದಿಂದಾಗಿಯೇ ವಿಮಾನ ಪತನವಾಯಿತೇ ಎಂಬ ಅನುಮಾನ ಕೂಡ ಬಂದಿದೆ. ಜೊತೆಗೆ ಇಬ್ಬರು ಪೈಲಟ್​ಗಳ ಪೈಕಿ ವಿಮಾನದ ಇಂಜಿನ್​ಗೆ ಇಂಧನ ಪೂರೈಕೆ ಸ್ಥಗಿತಕ್ಕೆ ಇಂಧನ ಸ್ವಿಚ್ ಅನ್ನು ಕಟ್ ಆಫ್ ಮಾಡಿದ್ದು ಯಾರು ಎಂಬ ಪ್ರಶ್ನೆಯೂ ಉದ್ಭವವಾಗಿದೆ.
'ಪೈಲಟ್‌ಗಳ ವಿನಿಮಯ ಸಂಕ್ಷಿಪ್ತವಾಗಿತ್ತು'
ಪೈಲಟ್‌ಗಳ ಸಂಭಾಷಣೆಯನ್ನು ಮಾತ್ರ ಆಧರಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳಲ್ಲ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ (MoS) ಮುರಳೀಧರ್ ಮೊಹೋಲ್ ಹೇಳಿದರು, ಏಕೆಂದರೆ ಇದು ಬಹಳ ಸಂಕ್ಷಿಪ್ತ ವಿನಿಮಯವಾಗಿತ್ತು.
ಇದನ್ನೂ ಓದಿ: ಟೀಮ್ ಇಂಡಿಯಾದ ಮಾನ ಕಾಪಾಡಿದ KL ರಾಹುಲ್.. ಸಿಡಿಲಬ್ಬರದ ಶತಕ ಸಿಡಿಸಿದ ಕನ್ನಡಿಗ
AAIB ಯಾವುದೇ ಹಸ್ತಕ್ಷೇಪವಿಲ್ಲದೆ ತನಿಖೆ ನಡೆಸುತ್ತದೆ. ನಾವು ಕಪ್ಪು ಪೆಟ್ಟಿಗೆಯನ್ನು ವಿದೇಶಕ್ಕೆ ಕಳುಹಿಸಲಿಲ್ಲ. ಅದನ್ನು ನಮ್ಮ ದೇಶದಲ್ಲಿಯೇ ಡಿಕೋಡ್ ಮಾಡಿದ್ದೇವೆ. ಪೈಲಟ್‌ನ ಸಂಭಾಷಣೆಯನ್ನು ಮಾತ್ರ ಆಧರಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ, ಏಕೆಂದರೆ ಅದು ಬಹಳ ಸಂಕ್ಷಿಪ್ತ ವಿನಿಮಯವಾಗಿತ್ತು" ಎಂದು ಮೊಹೋಲ್ ಹೇಳಿದರು.
ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಹಮದಾಬಾದ್‌ನಲ್ಲಿರುವ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದವರು, ಹಾಸ್ಟೆಲ್​ನಲ್ಲಿದ್ದ 24 ಜನರು ಸೇರಿದಂತೆ 274 ಜನರು ಸಾವನ್ನಪ್ಪಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ