/newsfirstlive-kannada/media/post_attachments/wp-content/uploads/2025/06/RR_Air_India_crash.jpg)
ಗಾಂಧಿನಗರ: ಅಹಮದಾಬಾದ್​ ಬಳಿ ಏರ್​ ಇಂಡಿಯಾ ವಿಮಾನ ಪತನಗೊಂಡು 242 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ. ಇದರಲ್ಲಿ ರಾಜಸ್ಥಾನ ಮೂಲದ ಸಹೋದರಿ, ಸಹೋದರ ಕೂಡ ಕಣ್ಮುಚ್ಚಿರುವುದು ಗೊತ್ತಾಗಿದೆ.
ರಾಜಸ್ಥಾನದ ಉದಯಪುರ ಮೂಲದ ಶಗುನಾ ಮೋದಿ ಮತ್ತು ಶುಭ್​ ಮೋದಿ ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಾರ್ಬಲ್​ ವ್ಯಾಪಾರಿ ಆಗಿದ್ದ ಸಂಜೀವ್​ ಮೋದಿ ಅವರ ಮಕ್ಕಳಾದ ಈ ಇಬ್ಬರು ಪ್ರವಾಸಕ್ಕೆಂದು ಪ್ರಯಾಣ ಬೆಳೆಸಿದ್ದರು. ಶುಭ್ ಲಂಡನ್​​ನಲ್ಲಿ ಓದಿದ್ದರಿಂದ​ ತನ್ನ ಸಹೋದರಿಗೆ ಲಂಡನ್​ ತೋರಿಸಬೇಕು ಎಂದು ಮಹಾದಾಸೆ ಹೊಂದಿದ್ದನು. ಅಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಅಹಮದಾಬಾದ್​ ಏರ್​ಪೋರ್ಟ್​ನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.
ಈ ಬಗ್ಗೆ ಮಾತನಾಡಿರುವ ಅವರ ಸಂಬಂಧಿ ಸತೀಶ್​ ಭಂಡಾರಿ ಅವರು, ಇದೊಂದು ಯಾರು ಊಹೆ ಮಾಡದಂತ ಹೃದಯ ವಿದ್ರಾವಕ ಘಟನೆ. ತಮ್ಮ ರಜೆ ಕಳೆಯಲೆಂದು ಅಣ್ಣ-ತಂಗಿ ಇಬ್ಬರು ಲಂಡನ್​ಗೆ ತೆರಳುತ್ತಿದ್ದರು. ಯುಕೆಯಲ್ಲೇ ಶುಭ್ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದ್ದರು ಮತ್ತು ಅವರ ಸಹೋದರಿ ಗಾಂಧಿನಗರದ ಪಿಡಿಇಯುನಿಂದ ಬಿಎ-ಬಿಬಿಎ ಅನ್ನು ಪೂರ್ಣಗೊಳಿಸಿದ್ದರು. ಇದೇ ಅವರ ಕೊನೆ ಪ್ರಯಾಣ ಎಂದು ಯಾರಿಗೆ ಗೊತ್ತಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಮೊದಲು ಏನು ಗೊತ್ತಿರಲಿಲ್ಲ ಶಗುನಾ ಮೋದಿ ಮತ್ತು ಶುಭ್​ ಮೋದಿ ಅವರ ಅಜ್ಜಿ ಫೋನ್ ಕಾಲ್ ಮಾಡಿ ನಮಗೆ ಟಿವಿ ನೋಡುವಂತೆ ಹೇಳಿದರು. ಟಿವಿ ನೋಡಿದ ಮೇಲೆಯೇ ಅದರಲ್ಲಿ ಈ ಇಬ್ಬರು ಜೀವಂತವಾಗಿಲ್ಲ ಎಂಬುದು ಖಚಿತ ಪಡಿಸಿಕೊಂಡೆವು. ಈ ಘಟನೆಯಿಂದ ಫುಲ್ ಶಾಕ್ ಆಗಿದೆ ಎಂದು ಸಂಬಂಧಿ ಸತೀಶ್ ಅವರು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ