/newsfirstlive-kannada/media/post_attachments/wp-content/uploads/2024/11/AI.jpg)
ನಿಮ್ಮ ಕಂಪ್ಯೂಟರ್‌ಗಳಲ್ಲಿ ನಿಮಗಾಗಿ ಕಾರ್ಯ ನಿರ್ವಹಿಸಬಲ್ಲ ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳನ್ನು ಅಭಿವೃದ್ಧಿಪಡಿಸಲು OpenAI ಪ್ಲಾನ್ ಮಾಡಿದೆ. ವರದಿಗಳ ಪ್ರಕಾರ.. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಸಂಶೋಧನೆಗಳು ಶುರುವಾಗಿದ್ದು, ಎಲ್ಲವೂ ಅಂದುಕೊಂಡಂತೆಯಾದರೆ 2025 ಜನವರಿಯಲ್ಲಿ AI ಏಜೆಂಟ್ ತಂತ್ರಜ್ಞಾನ ಜಗತ್ತಿಗೆ ಪ್ರವೇಶ ಮಾಡಲಿದೆ.
ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳನ್ನು ಕ್ರಿಯೇಟ್ ಮಾಡಲು ಡೆವಲಪರ್‌ಗಳು ಬಳಸಬಹುದಾದ ಸ್ಥಳೀಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಮೂಲಕ AI ಏಜೆಂಟ್‌ಗಳನ್ನು ಪ್ರವೇಶಿಸಲು OpenAI ಪ್ಲಾನ್ ಮಾಡಿದೆ.
ಇದನ್ನೂ ಓದಿ:ಹೋಮ್ವರ್ಕ್ ಮಾಡಲು AI ಮೊರೆ ಹೋದ ಯುವಕ; ಗೂಗಲ್ ಚಾಟ್ಬೋಟ್ ಪ್ರತಿಕ್ರಿಯೆ ನೋಡಿ ಕಂಗಾಲು!
ಬ್ಲೂಮ್‌ಬರ್ಗ್ ವರದಿ ಪ್ರಕಾರ.. OpenAI ಹೊಸ AI ಏಜೆಂಟ್ ಅನ್ನು ‘ಆಪರೇಟರ್’ ಎಂದು ಕರೆದಿದೆ. ಅದು ಕಂಪ್ಯೂಟರ್‌ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಅದರ ಆಪರೇಟ್ ಗೊತ್ತಿರೋ ಬಳಕೆದಾರರು AI ಏಜೆಂಟ್‌ಗೆ ಕೋಡ್ ಬರೆಯುವುದು ಅಥವಾ ಟಿಕೆಟ್‌ಗಳನ್ನು ಕಾಯ್ದಿರಿಸುವಂತಹ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯ ಆಗಲಿದೆ. ಇವು ಸೀಮಿತವಾದ ಹಾಗೂ ವಿಶೇಷ ಜ್ಞಾನ ಹೊಂದಿರುವ ಚಿಕ್ಕದಾದ AI ಮಾದರಿಗಳಾಗಲಿವೆ. ಕೀಸ್ಟ್ರೋಕ್ಸ್, ಬಟನ್ ಕ್ಲಿಕ್ಸ್ ಮತ್ತು ಇತರೆ ಕೆಲಸಗಳನ್ನು ಮಾಡಲು ನಿರ್ದಿಷ್ಟ ಸಾಫ್ಟ್‌ವೇರ್ ಬಳಸಬಹುದು ಎನ್ನಲಾಗಿದೆ. ಈ ಮೂಲಕ ನೀವು ಇನ್ನಷ್ಟು ನಿಖರತೆ ಮತ್ತು ವೇಗವಾಗಿ ಕೆಲಸ ಮಾಡಬಹುದಾಗಿದೆ.
ಅಂದರೆ AI ಏಜೆಂಟ್ ಕೇವಲ ಬ್ರೌಸರ್ ನಿಯಂತ್ರಿಸುವುದಲ್ಲದೇ ನಿಮ್ಮ ಕಂಪ್ಯೂಟರ್ ಅನ್ನೂ ಕೂಡ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಲಿದೆ. ನಿಮ್ಮ ಕಂಪ್ಯೂಟರ್ನಲ್ಲಿ ನಿಮಗಾಗಿ ಆಪರೇಟ್ ಮಾಡಬಹುದಾದ ಏಜೆಂಟ್ ಅಭಿವೃದ್ಧಿಪಡಿಸಲು ಕಂಪನಿಗಳು ಪ್ರಯತ್ನಿಸುತ್ತಿವೆ. ಇದರಲ್ಲಿ ಯಶಸ್ವಿಯಾದರೆ ಕಂಪ್ಯೂಟರ್ನಲ್ಲಿ ಎಲ್ಲಾ ಕೆಲಸದ ಅಪ್ಲಿಕೇಶನ್‌ಗಳನ್ನು ತೆರೆಯುವುದು. ಮತ್ತು ಅವುಗಳನ್ನು ಸ್ಕ್ರೀನ್ ಮೇಲೆ ತೋರಿಸಿ ಕಂಪ್ಯೂಟರ್ ಹಾಗೂ ನಿಮ್ಮೊಂದಿಗೆ ಏಜೆಂಟ್ ಆಗಿ ಸಂಹವನ ನಡೆಸಲಿದೆ. ನೀವು ನೀಡಿದ ಟಾಸ್ಕ್ ಆಧಾರದ ಮೇಲೆ ನಿಮ್ಮೆಲ್ಲ ಕೆಲಸವನ್ನು ಕಂಪ್ಯೂಟರ್ನಲ್ಲಿ AI ಏಜೆಂಟ್ ಮಾಡಿಕೊಡಲಿದೆ.
ಇದನ್ನೂ ಓದಿ:10,000 ರೂಪಾಯಿಗಿಂತ ಕಮ್ಮಿ ಬೆಲೆಗೆ 5G ಫೋನ್! ಹೊಸ ಮೊಬೈಲ್ ಯೋಚನೆಯಲ್ಲಿದ್ದೀರಾ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ