Advertisment

AI ನಿಂದಾಗಿ ಭವಿಷ್ಯದಲ್ಲಿ ವಿಶ್ವಕ್ಕೆ ಜಲಕ್ಷಾಮ.. ತಜ್ಞರು ವ್ಯಕ್ತಪಡಿಸುತ್ತಿರುವ ಆತಂಕ ಮತ್ತು ಸತ್ಯಗಳೇನು?

author-image
Gopal Kulkarni
Updated On
AI ನಿಂದಾಗಿ ಭವಿಷ್ಯದಲ್ಲಿ ವಿಶ್ವಕ್ಕೆ ಜಲಕ್ಷಾಮ.. ತಜ್ಞರು ವ್ಯಕ್ತಪಡಿಸುತ್ತಿರುವ ಆತಂಕ ಮತ್ತು ಸತ್ಯಗಳೇನು?
Advertisment
  • ಭವಿಷ್ಯದಲ್ಲಿ ಜಾಗತಿಕ ಭೀಕರ ಜಲಕ್ಷಾಮಕ್ಕೆ ಸಾಕ್ಷಿಯಾದೆಯಾ ಎಐ ತಂತ್ರಜ್ಞಾನ
  • ಜಲಸಂಪನ್ಮೂಲಕ್ಕೂ ಎಐ ತಂತ್ರಜ್ಞಾನಕ್ಕೂ ಏನು ಸಂಬಂಧ ಎಂಬುದು ಗೊತ್ತಾ?
  • ಭವಿಷ್ಯದಲ್ಲಿ ಉಂಟಾಗುವ ಗಂಭೀರ ಸಮಸ್ಯೆ ಬಗ್ಗೆ ಪರಿಣಿತರು ಹೇಳುತ್ತಿರುವುದೇನು?

ಇತ್ತೀಚಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎಂಬುದು ಒಂದು ದೊಡ್ಡ ಟ್ರೆಂಡ್​ ಆಗಿದೆ. ಅತಿಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಮುಂದೊಂದು ದಿನ ಈ ಎಐ ಜಗತ್ತನ್ನೇ ದೊಡ್ಡ ಮಟ್ಟದಲ್ಲಿ ಆಳಲಿದೆ. ಇದರೊಂದಿಗೆ ಮನುಷ್ಯನು ಬೆಸೆದುಕೊಂಡಲ್ಲಿ ಅವನಿಗೆ ದೊಡ್ಡ ಭವಿಷ್ಯವಿದೆ ಎಂಬ ಮಾತುಗಳೆಲ್ಲಾ ಸದ್ಯ ಕೇಳಿ ಬರುತ್ತಿವೆ. ಆದ್ರೆ ಒಂದು ಗೊತ್ತಾ ಎಐ ನಿರ್ವಹಣೆಗೆ ದೊಡ್ಡ ಮಟ್ಟದ ವಿದ್ಯುತ್​ಶಕ್ತಿಯ ಅವಶ್ಯಕತೆ ಇದೆ. ಅದರ ಜೊತೆಗೆ ಎಐ ಸರಿಯಾಗಿ ಕಾರ್ಯನಿರ್ವಹಿಸಲು ಕೂಡ ದೊಡ್ಡ ಮಟ್ಟದ ನೀರಿನ ಅವಶ್ಯಕತೆಯೂ ಕೂಡ ಇದೆ. ಇದು ಮುಂದೊಂದು ದಿನ ವಿಶ್ವಕ್ಕೆ ರಣಭೀಕರ ಜಲಕ್ಷಾಮ ತಂದೊಡ್ಡಲಿದೆ ಎಂಬ ಮಾತುಗಳು ಸದ್ಯ ವೈಜ್ಞಾನಿಕ ಜಗತ್ತಿನಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣಗಳನ್ನು ಕೂಡ ಪರಿಣಿತರು ಬಿಚ್ಚಿಟ್ಟಿದ್ದಾರೆ.

Advertisment

publive-image

ಇದರಲ್ಲಿ ಪ್ರಮುಖವಾದ ಒಂದು ವಿಷಯವನ್ನು ಪರಿಣಿತರು ಹೇಳುತ್ತಿದ್ದಾರೆ. ಎಐ ಡಾಟಾ ಕೇಂದ್ರ ಸರಿಯಾಗಿ ಕಾರ್ಯನಿರ್ಹಹಿಸಬೇಕಾದಲ್ಲಿ ಅದನ್ನು ಸದಾ ಕಾಲ ತಂಪಾಗಿಡುವುದು ಅವಶ್ಯಕತೆ ಇರುತ್ತದೆ. ಅತಿಯಾಗಿ ಡಾಟಾ ಪ್ರಕ್ರಿಯೆಯಿಂದಾಗಿ ಡಾಟಾ ಕೇಂದ್ರ ವಿಪರೀತವಾಗಿ ಹೀಟ್​ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವುಗಳನ್ನು ಕೂಲ್ ಆಗಿ ಇಡುವುದು ಅನಿವಾರ್ಯ. ಹೀಗಾಗಿಯೇ ಅವುಗಳಿಗೆ ಕೂಲಿಂಗ್​ ಸಿಸ್ಟಮ್​ನ್ನು ಅಳವಡಿಸಿಲಾಗಿರುತ್ತದೆ. ಈ ಒಂದು ಕೂಲಿಂಗ್ ಪ್ರೊಸೆಸ್​ನಲ್ಲಿ ಶುದ್ಧ ನೀರಿನ ಪಾತ್ರ ತುಂಬಾ ದೊಡ್ಡದಿದೆ. ಕೂಲಿಂಗ್ ಟವರ್ ಸಹಾಯದಿಂದ ಅಥವಾ ಕೂಲಿಂಗ್ ಸಿಸ್ಟಮ್​ನಿಂದ ನೀರು ಸದಾಕಾಲ ಸರ್ಕ್ಯೂಲೆಟ್​ ಆಗುತ್ತಲೇ ಇರಬೇಕು. ಇದರಿಂದಾಗಿ ಸರ್ವರ್​ನಲ್ಲಿ ಸೃಷ್ಟಿಯಾಗುವ ಹೀಟ್​ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಪವರ್​ ಬ್ಯಾಂಕ್ ಬಳಕೆ ಎಷ್ಟು ಡೇಂಜರ್​..? ನಿಮ್ಮ ಫೋನ್ ಸುರಕ್ಷತೆ ಹೇಗಿರಬೇಕು..?

ಉದಾಹರಣೆಗೆ ಎಐ ಮಾಡೆಲ್​ಗಳ ದೊಡ್ಡ ತರಬೇತಿಗೆ ಕಂಪ್ಯೂಟರ್ ಸಿಸ್ಟಮ್​ಗಳು ನಿರಂತರವಾಗಿ ದಿನಗಗಟ್ಟಲೇ ವಾರಗಟ್ಟಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ವಿಪರೀತ ಶಾಖ ಉತ್ಪನ್ನವಾಗುತ್ತದೆ. ಹೀಗೆ ವಿಪರೀತ ಮಟ್ಟದ ಉತ್ಪನ್ನವಾಗುವ ಶಾಖವನ್ನು ನೀರನ್ನು ಅತಿಯಾದ ಉಪಯೋಗದಿಂದ ನಿಯಂತ್ರಣಕ್ಕೆ ತರಲಾಗುತ್ತದೆ.

Advertisment

publive-image

ಈ ಎಐ ಡಾಟಾ ಕೇಂದ್ರವನ್ನು ನಿರ್ವಹಿಸಲು ಅತಿಯದ ಪ್ರಮಾಣದಲ್ಲಿ ವಿದ್ಯುತ್​ ಮತ್ತು ಅದರ ಜೊತೆಗೆ ನೀರಿನ ಅವಶ್ಯಕತೆಯು ಕೂಡ ಇದೆ. ಅತಿಯಾದ ವಿದ್ಯುತ್​ ಬಳಕೆ ಕೇವಲ ಕಾರ್ಬನ್ ಎಮಿಷನ್​ನ್ನು ಮಾತ್ರ ಹೆಚ್ಚಿಸುವುದಿಲ್ಲ. ಇದು ನೀರಿನ ಬೇಡಿಕೆಯನ್ನು ಕೂಡ ಹೆಚ್ಚಿಸುತ್ತದೆ. ಇದೇ ಕಾರಣಕ್ಕಾಗಿಯೇ ಹಲವು ಉಷ್ಣ ವಿದ್ಯುತ್ ಸ್ಥಾವರಗಳುಗಳನ್ನು ಅತಿಯಾದ ನೀರನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಒಂದು ಬೆಳವಣಿಗೆ ಎಐ ಜಲಸಂಪನ್ಮೂಲಕ್ಕೆ ಮಾತ್ರ ದೊಡ್ಡ ಒತ್ತಡವಾಗುವುದರ ಜೊತೆಗೆ ಹವಾಮಾನ ಬದಲಾವಣೆಗೂ ಕೂಡ ಕಾರಣವಾಗಲಿದೆ ಎಂದು ಪರಿಣಿತರು ಆತಂಕವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಟೆಲಿಗ್ರಾಂ ಬ್ಯಾನ್​ ಆಗುತ್ತಾ? ಇದರ ಬದಲಿಗೆ ಈ ಐದು ಆ್ಯಪ್​ ಬಳಸಬಹುದು!

publive-image

ಒಂದು ವೇಳೆ ಎಐ ತಂತ್ರಜ್ಞಾನ ನಿರಂತರವಾಗಿ ಅದರ ವೇಗವನ್ನು ಹೆಚ್ಚಿಸಲು ಬಳಿಸಿದಲ್ಲಿ. ಭವಿಷ್ಯದ ದಿನಗಳಲ್ಲಿ ಜಲಕ್ಷಾಮ ಎಂಬುದು ಗಂಭೀರ ಮಟ್ಟದಲ್ಲಿ ಎದುರಿಸಬೇಕಾದ ಸಂದರ್ಭ ಬರುತ್ತದೆ. ಅದರಲ್ಲೂ ಪ್ರಮುಖವಾಗಿ ಎಲ್ಲಿ ನೀರಿನ ಅಭಾವ ಇದೆಯೋ ಅಲ್ಲಿ ಎಐಗಳ ಡಾಟಾ ಕೇಂದ್ರಗಲು ಸ್ಥಾಪನೆಯಾದಲ್ಲಿ ಅಲ್ಲಿ ಭೀಕರ ಜಲಕ್ಷಾಮ ಉಂಟಾಗುವ ಸಾಧ್ಯತೆಗಳು ದೊಡ್ಡ ಮಟ್ಟದಲ್ಲಿವೆ. ಪರಿಣಿತರು ಹೇಳುವ ಪ್ರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಮುಂದೆ ಜಾಗತಿಕವಾಗಿ ನೀರಿನ ಅಭಾವ ಸೃಷ್ಟಿಯಾಗಲಿದೆ. ಅದು ಕೂಡ ಇನ್ನೂ ಕೆಲವೇ ವರ್ಷಗಳಲ್ಲಿ ಎಂದು ಹೇಳುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment