ಎಐ ಫಾರ್​ ಕೇರ್​ ಸಮಿಟ್​​.. AI ಮೂಲಕ ವೈದ್ಯಕೀಯ ಲೋಕದ ಆವಿಷ್ಕಾರ ಹೇಗೆ? ಅನ್ನೋ ಚರ್ಚೆ!

author-image
Ganesh Nachikethu
Updated On
ಎಐ ಫಾರ್​ ಕೇರ್​ ಸಮಿಟ್​​.. AI ಮೂಲಕ ವೈದ್ಯಕೀಯ ಲೋಕದ ಆವಿಷ್ಕಾರ ಹೇಗೆ? ಅನ್ನೋ ಚರ್ಚೆ!
Advertisment
  • ಕೋರಮಂಗಲದ ಸೆಂಟ್​ ಜಾನ್ಸ್​ ಆಡಿಟೋರಿಯಮ್​ನಲ್ಲಿ ಎಐ ಫಾರ್​ ಲೈಫ್​ ಸಮಿಟ್​​​!
  • ಎಐ ಮೂಲಕ ವೈದ್ಯಕೀಯ ಲೋಕದ ಆವಿಷ್ಕಾರ ಹೇಗೆ ಅನ್ನೋದರ ಬಗ್ಗೆ ಮಹತ್ವದ ಚರ್ಚೆ
  • ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ಭಾಗಿಯಾಗಿದ್ರು

ಇಡೀ ಜಗತ್ತಿನಾದ್ಯಂತ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರೋ ಹೊಸ ಟೆಕ್ನಾಲಜಿ​ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್​. ಈ ಎಐ ಈಗ ಎಲ್ಲಿಲ್ಲ ಹೇಳಿ? ಮಕ್ಕಳ ಸ್ಕೂಲ್​ನಿಂದ ಹಿಡಿದು ವೈದ್ಯಕೀಯ ಕ್ಷೇತ್ರದವರೆಗೂ ಇದರ ಬಳಕೆ ಅಪಾರ. ಹಾಗೇನೆ ವೈದ್ಯಕೀಯ ಕ್ಷೇತ್ರದಲ್ಲಿ ಎಐನ ಬಳಕೆಯಿಂದ ಆಗಬಹುದಾದ ಅನುಕೂಲಗಳೇನು ಎಂಬುದರ ಬಗ್ಗೆ ಸಿಲಿಕಾನ್​ ಸಿಟಿಯಲ್ಲಿ ಹೆಲ್ತ್​​-ಟೆಕ್​ ಸಮ್ಮಿಟ್​ ನಡೆಯಿತು. ಅದುವೇ ಎಐ ಫಾರ್​ ಲೈಫ್.

ರಾಜಧಾನಿಯಲ್ಲಿ ನಡೆದ ಈ ಕಾರ್ಯಕ್ರಮ, ವೈದ್ಯಕೀಯ ಕ್ಷೇತ್ರದಲ್ಲಿ ಎಐ ಬಳಕೆಯ ವಿಸ್ತಾರ ಹಾಗೂ ಉಪಯೋಗ ಎಲ್ಲವನ್ನು ಜನರಿಗಾಗಿ ತೆರೆದಿಟ್ಟಿದೆ. ನಗರದ ಸೆಂಟ್​ ಜಾನ್ಸ್​ ಆಡಿಟೋರಿಯಮ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಸ್ಪೀಕರ್ಸ್‌, ಹಾಸ್ಪಿಟಲ್ಸ್‌, ಸರ್ಕಾರದ ಪ್ರತಿನಿಧಿಗಳು, ಹೆಲ್ತ್ ಇನ್ಶುರೆನ್ಸ್ ಕಂಪನಿಯವ್ರು, ಟೆಕ್ ಸ್ಟಾರ್ಟಪ್ಸ್‌, ಟೆಕ್‌ ಎಂಟರ್‌ಪ್ರೈಸಸ್, ಇನ್‌ವೆಸ್ಟರ್ಸ್‌, ಅನ್ವೇಷಣಾ ತಂಡಗಳು, ಸಂಶೋಧಕರು ಭಾಗಿಯಾಗಿದ್ದರು.

ಎಐ ಟೆಕ್ನಾಲಜಿ ಬಳಸಿಕೊಂಡು ಸಿಟಿಯಲ್ಲಿರೋ ಡಾಕ್ಟ್​ರ್​ಗಳು ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಟೆಲಿ ಐಸಿಯು ಮೂಲಕ ಕಾಪಾಡಬಹುದು ಎಂದು GE ಹೆಲ್ತ್​ಕೇರ್​ನ ರಾಮಕೃಷ್ಣ ರಾವ್ ಹೇಳಿದ್ರು. ಜೊತೆಗೆ THRIVE ಡಿಜಿಟಲ್​ ಹೆಲ್ತ್​ನ ಬಾಲಸುಬ್ರಹ್ಮಣ್ಯಂ ಅವರು ವಿದೇಶದ ವೈದ್ಯಕೀಯ ಟೆಕ್ನಾಲಜಿಯನ್ನು ನಮ್ಮ ದೇಶಕ್ಕೆ ತರೋದ್ರಿಂದ ಇಲ್ಲಿನ ಜನಕ್ಕೆ ಉಪಯೋಗವಾಗುತ್ತೆ ಅಂತ ತಿಳಿಸಿದ್ರು. ಹಾಗೂ ಎಐ ಬಳಸಿದ್ರೆ ಯಾವ ರೀತಿ ಈಗಿನ ವೈದ್ಯಕೀಯ ಕ್ಷೇತ್ರದಲ್ಲಿರುವ ನ್ಯೂನ್ಯತೆಗಳನ್ನು ಪರಿಹರಿಸಬಹುದು ಎಂಬ ಅನೇಕ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

publive-image

ಈ ಬಗ್ಗೆ ಬ್ಯಾಕ್ಸ್​ಟರ್​ ಹೆಲ್ತ್​ಕೇರ್​ನ ಶ್ರೀಧರ್​ ಆಂಜನಪ್ಪ ಏನಂದ್ರು?

ಇನ್ನೂ ಮನುಷ್ಯನ ಡಯಾಲಿಸಿಸ್​ನಲ್ಲೂ ಕೂಡ ಎಐ ಪರಿಣಾಮಕಾರಿ ಆಗುತ್ತೆ. ಯಾವ ರೋಗಿ ಡಯಾಲಿಸಿಸ್​ಗೆ ಒಳಗಾಗಿದ್ದಾರೋ, ಅವರ ದೇಹ ಯಾವ ಮಟ್ಟಿಗೆ ಸ್ಪಂದಿಸ್ತಾ ಇದೆ ಅನ್ನೋದ್ರ ಅಂದಾಜನ್ನು ಈ ಎಐ ಪವರ್ಡ್​ ಮಷೀನ್​ಗಳು ಸಹಕಾರಿಯಾಗುತ್ತೆ ಎಂದು ಬ್ಯಾಕ್ಸ್​ಟರ್​ ಹೆಲ್ತ್​ಕೇರ್​ನ ಶ್ರೀಧರ್​ ಆಂಜನಪ್ಪ ಹೇಳಿದ್ದಾರೆ.

ಇದೆಲ್ಲದರ ಜೊತೆಗೆ ಮನುಷ್ಯನ ದೇಹದ ಸಮಸ್ಯೆಗಳನ್ನ ಗುರುತಿಸಿ, ಅವುಗಳನ್ನು ಕ್ಯೂರ್ ಮಾಡುವ ಸ್ಟಾಲ್​​ಗಳು ಕೂಡ ಎಐ ಫಾರ್​ ಲೈಫ್​ ಸಮ್ಮಿಟ್​ನಲ್ಲಿ ಕಂಡು ಬಂತು. ಇದರ ಕುರಿತಾಗಿ ಅನೇಕ ಸ್ಟಾಲ್​ಗಳನ್ನು ಈ ಸಮ್ಮಿಟ್​ನಲ್ಲಿ ಏರ್ಪಡಿಸಲಾಗಿತ್ತು. ಅದರಲ್ಲಿ ಒಂದು, ‘ಇಕ್ಷಣ’ ಅನ್ನೋ ಮ್ಯಾಜಿಕಲ್ ಪ್ಯಾಂಟ್. ಕೇವಲ ಈ ಪ್ಯಾಂಟ್‌ನ ಧರಿಸಿ ಪೆಲ್ವಿಕ್​​ ಮಾಂಸಖಂಡಗಳ ಸಡಿಲುವಿಕೆ ಸರಿಪಡಿಸಬಹುದು. ಜೊತೆಗೆ ಕೆಲಸ ಮಾಡ್ತಾನೇ ಯಾವುದೇ ಶ್ರಮ ಇಲ್ಲದೇ, ವ್ಯಾಯಾಮ ಮಾಡದೇ, ಈ ಮಾಂಸಖಂಡಗಳನ್ನು ಗಟ್ಟಿಗೊಳಿಸಬಹುದಾದ ಆವಿಷ್ಕಾರವನ್ನು ಇಲ್ಲಿ ಪ್ರಸ್ತುತಪಡಿಸಲಾಗಿತ್ತು.

ಅನೇಕ ಸ್ಟಾಲ್​ಗಳ ಪೈಕಿ ಜನರ ಗಮನಸೆಳೆದ ಮತ್ತೊಂದು ಸ್ಟಾಲ್ ಅಂದ್ರೆ ಅದು ಸ್ಟ್ರೆಸ್​ ಕ್ಯಾಲ್ಕುಲೇಟರ್. ಹೌದು ಮನುಷ್ಯ ದಣಿದಾಗಲೆಲ್ಲ.. ತುಂಬಾ ಸ್ಟ್ರೆಸ್​ ಗುರೂ ಅಂತಾನೆ. ಆದ್ರೆ ಎಷ್ಟರ ಮಟ್ಟಿಗೆ? ಅದಕ್ಕೆ ಉತ್ತರ ಇಲ್ಲ. ಆದ್ರೆ ಸ್ಪಾರ್ಕೊ ಲೈಫ್ ತಯಾರಿಸಿರೋ ಈ ಡಿವೈಸ್​ನಿಂದ ಎಷ್ಟು ಸ್ಟ್ರೆಸ್​ ಆಗಿದೆ ಅನ್ನೋದನ್ನು ಎಐ ಬಳಸಿ, ಲೆಕ್ಕ ಹಾಕಿ, ಅದಕ್ಕೆ ತಕ್ಕಂತ ಮಾನಸಿಕ ಚಿಕಿತ್ಸೆಯನ್ನು ನೀಡಲಾಗುತ್ತೆ. ಹೀಗೆ ಅನೇಕ ಮೈಂಡ್​ಬ್ಲೋಯಿಂಗ್​ ಆವಿಷ್ಕಾರಗಳು, ಎಐ ಫಾರ್ ಲೈಫ್​ ಸಮ್ಮಿಟ್​​ನಲ್ಲಿ ಜನರ ಗಮನ ಸೆಳೆದಿದೆ. ಮುಂದೆ ಈ ಆವಿಷ್ಕಾರಗಳು ಮತ್ತಷ್ಟು ಮುಂದುವರಿದು, ಮನುಕುಲದ ಒಳಿತಿಗಾಗಿ ಸ್ಪಂದಿಸಲಿ ಅನ್ನೋದೇ ಪ್ರತಿಯೊಬ್ಬರ ಆಶಯವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment