/newsfirstlive-kannada/media/post_attachments/wp-content/uploads/2025/01/ROBO.jpg)
ಕೆಲಸ ಮಾಡೋ ರೋಬೋ ನೋಡಾಯಿತು. ಹಾಯ್,​ ಬಾಯ್​ ಹೇಳುವ ರೋಬೋಗಳನ್ನು ಕಂಡಾಗಿದೆ. ಆದ್ರೆ, ಪ್ರೇಯಸಿಯಂತಿರೋ ರೋಬೋ ನೋಡಿದ್ದೀರಾ ಚಾನ್ಸೇ ಇಲ್ಲ. ಹೆಣ್ಣು ಸಿಗ್ತಿಲ್ಲ ಅಂತ ಟೆನ್ಷನ್​ಗೆ ತಲೆ ಕೂದಲು ಹಣ್ಣಾಗ್ತಿರೋ ಹುಡುಗರು ಇಲ್ಲಿ ಸ್ವಲ್ಪ ಗಮನ ಕೊಡಿ. ಟೆನ್ಷನ್​ ಬಿಡಿ, ಇನ್ಮೇಲೆ ರೆಡಿಮೇಡ್​ ಗರ್ಲ್​ಫ್ರೆಂಡ್ ಬರತ್ತಾಳೆ.
ಇದನ್ನೂ ಓದಿ: ಗವಿಗಂಗಾಧರೇಶ್ವರನಿಗೆ ಇಂದು ಸೂರ್ಯ ರಶ್ಮಿ ಸಿಂಚನ.. ಎಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ-ಸಡಗರ
ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ. ಇದು ಹಳೆಯ ಹಾಡು. ದೇಹವೆಂದರೆ ಓ ಮನುಜ. ಮೆಕಾನಿಕ್​ ಮಾಡಿರೋ ರೋಬೋ ರಾಜ ಇದು ಇದು ಈಗಿನ ಟ್ರೆಂಡ್. ಗರ್ಲ್​ ಫ್ರೆಂಡ್ ಕೊಡೋ ಕಾಟ, ಹೆಂಡತಿ ಮಾಡುವ ಹಾರಾಟ ಇದನ್ನೆಲ್ಲಾ ಸಹಿಸ್ಕೊಂಡು ಗಂಡು ಮಕ್ಕಳು ನರಳಾಟ. ಆ ದೇವರಿಗೆ ಕೇಳಿಸಿದೆ ಅನಿಸುತ್ತೆ. ಇದಕ್ಕೆ ಅಂತಾನೇ ಈ ವಿಜ್ಞಾನಿಗಳ ಕೈಯಲ್ಲಿ ಇಂಥದ್ದೊಂದು ಸಾಧನ ರೂಪಗೊಂಡಿದೆ. ಎಐ ರೋಬಾಟ್ ಅನ್ನ ಭೂಮಿಗೆ ತಂದಿದ್ದಾರೆ.
ಬಾಯ್​ ಫ್ರೆಂಡ್​ ಜೊತೆ ಕಿರಿಕ್ ಮಾಡಿಕೊಳ್ಳಲ್ಲ
ಈ ಹೆಣ್ಣು ರೋಬೋದ ಹೆಸರು ​ಆರಿಯಾ. ಅಂದ್ಹಾಗೆ ಆರಿಯಾ, ಹುಡುಗರ ಜೊತೆ ಪ್ರೇಮಿಯಂತೆ ಇರುತ್ತಾಳಂತೆ. ಬಾಯ್​ ಫ್ರೆಂಡ್​ ಜೊತೆ ಯಾವುದೇ ಕಾರಣಕ್ಕೂ ಕಿರಿಕ್ ಮಾಡ್ಕೊಳ್ಳಲ್ಲ. ಬೇಜಾರ್​ ಬೀಳಲ್ಲ. ಅದು ಬೇಕು. ಇದು ಬೇಕು ಅಂತಾನ್ನೂ ಕೇಳಲ್ಲ. ಸ್ವಿಗ್ಗಿ ಝೊಮ್ಯಾಟೋದಲ್ಲಿ ಆರ್ಡರ್​ ಮಾಡು ಅಂತಾ ಟಾರ್ಚರ್ ಇರಲ್ಲ. ಆರಿಯಾಗೆ ಪ್ರೀತಿ ಜೊತೆಗೆ ಸ್ವಲ್ಪ ಕರೆಂಟ್ ಇದ್ರೆ ಸಾಕು. ಫುಲ್​​ ಲವ್​ ಚಾರ್ಜ್​.
ಹುಡುಗಿಯರಂತೆಯೇ ರೊಮ್ಯಾಂಟಿಕ್ ಆಗಿರುವ ಎಐ ರೋಬಾಟ್ ಮಾರುಕಟ್ಟೆಗೆ ಬಂದಿದೆ. ಅಮೆರಿಕ ಮೂಲದ ರಿಯಲ್ ಬೊಟಿಕ್ಸ್ ಕಂಪನಿ ಈ ರೋಬಾಟ್​ ಗರ್ಲ್​ಫ್ರೆಂಡ್​ನ ಡೆವೆಲಪ್​ ಮಾಡಿದೆ. ಜನವರಿ ಮೊದಲ ವಾರದಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ 2025ರ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ರಿಯಲ್ ಬೋಟಿಕ್ಸ್ ಆರಿಯಾಳನ್ನು ಜಗತ್ತಿಗೆ ಪರಿಚಯಿಸಿದೆ. ಅಂದ್ಹಾಗೆ ಈ ರೋಬೋ ಪ್ರಿಯತಮೆಯ ಬೆಲೆ ಕೇವಲ 1.5 ಕೋಟಿ ರೂಪಾಯಿಯಷ್ಟೇ.
ಆರಿಯಾ ಜನ್ಮಕ್ಕೆ ಕಾರಣವೇನು?
ಇನ್ನೂ, ರಿಯಲ್‌ಬೋಟಿಕ್ಸ್ ಸಿಇಒ ಆಂಡ್ರ್ಯೂ ಕಿಗ್ವಾಲ್, ಜಾಗತಿಕ ಮಟ್ಟದಲ್ಲಿ ಪುರುಷರು ಎದುರಿಸುವ ಒಂಟಿತನವನ್ನ ಹೋಗಲಾಡಿಸುವ ಉದ್ದೇಶ ಹೊಂದಿದ್ದಾರಂತೆ. ಅದಕ್ಕಾಗೆ ಇಂಥ ರೋಬೋಟ್ ಅಭಿವೃದ್ಧಿಪಡಿಸಿದರಂತೆ. ಇದು ಆರಿಯಾ ಜನ್ಮಕ್ಕೆ ಕಾರಣ.
ರೋಬೋಟ್​ ರೋಮ್ಯಾಂಟಿಕ್​ ಪಾರ್ಟನರ್​ ಆಗಿರುತ್ತೆ. ನೀವು ಯಾರು ಅನ್ನೋದನ್ನ ಅದು ನೆನಪಿನಲ್ಲಿಟ್ಟುಕೊಂಡಿರುತ್ತೆ. ಅಲ್ಲದೆ, ರೋಬೋ ಗರ್ಲ್​ಫ್ರೆಂಡ್​ ಆಗಿ, ಬಾಯ್​ ಫ್ರೆಂಡ್​ ಆಗಿ ಕೂಡ ಆ್ಯಕ್ಟ್​ ಮಾಡುತ್ತೆ. ಎಐ ರೋಬೋಟ್ ಆರಿಯಾ ಭಾವನೆಗಳನ್ನು ತನ್ನ ಎಕ್ಸ್​ಪ್ರೆಷನ್ ಮೂಲಕ ಎಲ್ಲಾ ವಿಚಾರ ತಿಳಿಸುತ್ತೆ ಅನ್ನೋದು ಮತ್ತೊಂದು ವಿಶೇಷ.
​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ