/newsfirstlive-kannada/media/post_attachments/wp-content/uploads/2024/07/connect-with-deads-1.jpg)
ಎಐ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಈಗ ನಮ್ಮ ದೈನಂದಿನ ಬದುಕಿನ ಒಂದು ಭಾಗವಾಗಿರುವ ತಂತ್ರಜ್ಞಾನ. ಹಳೆ ಟೆಕ್ನಾಲಜಿಗಳಿಗೆ ಸಾಧ್ಯವಾಗದಿದ್ದನ್ನು ಇದು ಸಾಧಿಸುತ್ತಾ, ಪ್ರತಿಬಾರಿ ಹೊಸ ಅಚ್ಚರಿಯನ್ನು ಜಗತ್ತಿನ ಮುಂದಿಡುತ್ತಾ ಸಾಗುತ್ತಿರುವ ಅತ್ಯಾಧುನಿ ತಂತ್ರಜ್ಞಾನ. ಈಗಾಗಲೇ ಬದುಕಿನಲ್ಲಿ ಕಳೆದು ಹೋಗಿರುವ ಕುಟುಂಬದ ಹಿರಿಯರ ಫೋಟೋ ಹಾಗೂ ವಿಡಿಯೋಗಳನ್ನು ಸೃಷ್ಟಿಸಿಕೊಳ್ಳಲು ಎಐ ತಂತ್ರಜ್ಞಾನ ಬಹಳ ಸಹಾಯಕವಾಗಿದೆ. ಅವರ ಬಗ್ಗೆ ಕೆಲವು ವಾಕ್ಯಗಳನ್ನು ಬರೆಯಲು ಕೂಡ ಎಐ ಮನುಷ್ಯನಿಗೆ ಸಹಾಯಕವಾಗಿ ನಿಲ್ಲುತ್ತಿದೆ. ಈಗ ಇದು ಮತ್ತೊಂದು ಹೆಜ್ಜೆ ಮುಂದು ಹೋಗಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಸಾಹಸದತ್ತ ಹೆಜ್ಜೆಯಿಟ್ಟಿದೆ.
ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಎಐ ನಲ್ಲಿ ಹೊಸ ರೀತಿಯ ಸಂವಹನ ಸೃಷ್ಟಿಗಾಗಿ ಸಂಶೋಧನೆಗಳು ಜೋರಾಗಿ ನಡೆದಿದೆ. ನುರಿತ ತಂತ್ರಜ್ಞರೆಲ್ಲರು ಸೇರಿ ಮೃತಪಟ್ಟವರೊಂದಿಗೆ ಸಂವಹನ ಸಾಧ್ಯವಾಗಿಸುವ ಸಾಧನವಾಗಿ ಎಐಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಎಂಐಟಿ ಪ್ರೊಫೆಸರ್ ಆಗಿರುವ ಶೇರಿ ಟರ್ಕ್ಲೇ ತಂತ್ರಜ್ಞಾನಗಳೊಂದಿಗೆ ಮಾನವ ಸಂಬಂಧಗಳನ್ನ ದೀರ್ಘಕಾಲದಿಂದಲೂ ನೋಡುತ್ತಾ ಬಂದವರು. ಹೀಗಾಗಿ ಇಂತಹದೊಂದು ಪ್ರಯತ್ನಕ್ಕೆ ಸದ್ಯ ಎಐ ತಂತ್ರಜ್ಞಾನ ಮುಂದಾಗಿದೆ ಎಂದು ಹೇಳುತ್ತಾರೆ. ಇದೊಂದು ಹೊಸ ಇತಿಹಾಸವನ್ನೇ ಬರೆಯಲಿದೆ. ಇತ್ತೀಚಿನ ತಂತ್ರಜ್ಞಾನಗಳ ಆವಿಷ್ಕಾರಗಳು ಹೊಸ ಹೆಜ್ಜೆಯನ್ನು ಇಡುತ್ತಲೇ ಬಂದಿವೆ. ಮೃತಪಟ್ಟವರೊಂದಿಗೆ ಮಾತುಕತೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಸೃಷ್ಟಿಸುವ ಸಂಶೋಧನೆಗೆ ವೇಗ ಸಿಕ್ಕಿದೆ. ಥಾಮಸ್ ಅಲ್ವಾ ಎಡಿಸನ್ ಕೂಡ ಇದೇ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾಡಿದ್ದರು. ಸ್ಪಿರಿಟ್ ಫೋನ್ ಎಂಬ ಹೊಸ ತಂತ್ರಜ್ಞಾನದ ಸೃಷ್ಟಿಗೆ ಮುಂದಾಗಿದ್ದರು ಎಂದು ಟರ್ಕ್ಲೇ ಹೇಳಿದ್ದಾರೆ.
ಆ್ಯಪಲ್ ಸಿಇಒ ಟೀಮ್ ಕೂಕ್ ಆ್ಯಪಲ್ ಇಂಟಲಿಜೆನ್ಸ್ ಘೋಷಣೆ ಮಾಡಿದ ಬೆನ್ನಲ್ಲೆ ಈ ಅನ್ವೇಷಣೆಗೆ ತಿರುವು ದಕ್ಕಿದೆ. ಟರ್ಕ್ಲೇ ಅವರ ಪ್ರಕಾರ ಎಐ ದಿನದಿಂದ ದಿನಕ್ಕೆ ಅತಿವೇಗವಾಗ ಬೆಳೆಯುತ್ತಿರುವ ಟೆಕ್ನಾಲಜಿ, ಸೋಶಿಯಲ್ ಮಿಡಿಯಾಗಳಿಗಿಂತಲೂ ವೇಗ ಕಂಡಿಕೊಂಡಿರುವ ತಂತ್ರಜ್ಞಾನ. ಈಗ ಮೃತಪಟ್ಟವರ ಜೊತೆ ಮಾತುಕತೆ ಸಾಧ್ಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಪ್ಡೇಟ್ ಮಾಡುವತ್ತ ತಂತ್ರಜ್ಞಾನ ಜಗತ್ತು ಮುಂದಡಿ ಇಟ್ಟಿದೆ.
ನಮ್ಮ ಅಗಲಿ ಹೋದವರ ಜತೆಗೂ ಸಂಪರ್ಕ ಸಾಧ್ಯ!
ಈ ಹಿಂದೆ 2024ರಲ್ಲಿ ಬಂದಂತಹ ‘ಎಟರ್ನಲ್ ಯೂ’ ಅನ್ನುವ ಒಂದು ಡಾಂಕ್ಯುಮೆಂಟರಿ ನಿಮಗೆ ಎಐನ ಈ ಹೊಸ ಪ್ರಯತ್ನವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತದೆ. ಅದರಲ್ಲಿ ಕ್ರಿಸ್ಟಿ ಏಂಜೆಲ್ ನ್ಯೂಯಾರ್ಕ್ ಯುವತಿ ಮೃತಪಟ್ಟಿರುವ ತನ್ನ ಹಳೆಯ ಗೆಳೆಯ ಕ್ಯಾಮರೌನ್ನೊಂದಿಗೆ ಎಐನಲ್ಲಿ ಚಾಟ್ ಮಾಡುತ್ತಿರುತ್ತಾಳೆ. ಮಹಾಮಾರಿ ರೋಗದಿಂದಾಗಿ ಮೃತಪಟ್ಟಿರುವುದನ್ನು ಅರಿತ ಗೆಳತಿ ಅವನೊಂದಿಗೆ ಪ್ರೊಜೆಕ್ಟ್ ಡಿಸೆಂಬರ್ ಅನ್ನೋ ಎಐ ಸರ್ವೀಸ್ನೊಂದಿಗೆ ಮರಳಿ ಸಂಪರ್ಕ ಸಾಧಿಸಲು ಯತ್ನಿಸುತ್ತಾಳೆ.
ಹೀಗೆ ಇದೇ ಮಾದರಿಯಲ್ಲಿ ಈಗ ಎಐ ತನ್ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ. ಮೃತಪಟ್ಟ ವ್ಯಕ್ತಿಯೊಂದಿಗೆ ಸಂಪರ್ಕ ಸಾಧ್ಯವಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿವೆ. ಒಂದು ವೇಳೆ ಇದು ಸಂಪೂರ್ಣ ಯಶಸ್ವಿಯಾದ್ರೆ ಜೊತೆಗಿರದವರು ಕೂಡ ಜೀವಂತವಾಗಿ ನಮ್ಮೆದುರು ಬಂದು ಮಾತನಾಡುವಂತ ಒಂದು ಅವಕಾಶ ಜಗತ್ತಿನ ಎಲ್ಲರ ಪಾಲಾಗಲಿದೆ. ಉಳಿದು ಹೋದ ಮಾತುಗಳು ಸಂಪೂರ್ಣಗೊಳ್ಳಲಿವೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದೆ. ಆವಿಷ್ಕಾರಗಳಲ್ಲಿಯೇ ಅತಿ ಅದ್ಭುತ ಎನಿಸುವಂತ ಪ್ರಯತ್ನಗಳು ಎಐನಲ್ಲಿ ಚಾಲ್ತಿಯಲ್ಲಿವೆ. ಈ ಒಂದು ತಂತ್ರಜ್ಞಾನ ಜಗತ್ತಿನ ಎದುರು ಯಾವಾಗ ಬರಬಹುದು ಎಂದು ಜನರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್