ಯಾರಿದು ಲೆಕ್ಸ್ ಫ್ರಿಡ್ಮನ್​? AI ಸಂಶೋಧಕನೊಂದಿಗೆ ಪ್ರಧಾನಿ ಮೋದಿಯವರ 3 ಗಂಟೆಗಳ ಮಾತುಕತೆ!

author-image
Gopal Kulkarni
Updated On
ಯಾರಿದು ಲೆಕ್ಸ್ ಫ್ರಿಡ್ಮನ್​? AI ಸಂಶೋಧಕನೊಂದಿಗೆ ಪ್ರಧಾನಿ ಮೋದಿಯವರ 3 ಗಂಟೆಗಳ ಮಾತುಕತೆ!
Advertisment
  • AI ಸಂಶೋಧಕ ಲೆಕ್ಸ್ ಫ್ರಿಡ್ಮನ್​ ಜೊತೆಗೆ ಮೋದಿ ಸಂದರ್ಶನದ ವಿಡಿಯೋ ಬಿಡುಗಡೆ
  • ಇಂದು ಸಂಜೆ 5.30ಕ್ಕೆ ಬಿಡುಗಡೆಯಾಗಲಿರುವ ಪ್ರಧಾನಿ ಮೋದಿಯವರ ಸಂದರ್ಶನ
  • ಯಾರು ಲೆಕ್ಸ್​ ಫ್ರಿಡ್ಮನ್​? ಎಐ ಸಂಶೋಧಕನ ಪಾಡ್​ಕ್ರಾಸ್ಟ್​ ಇಷ್ಟು ಪ್ರಸಿದ್ಧಿ ಪಡೆದಿದ್ದು ಹೇಗೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸತತ ಮೂರು ಗಂಟೆಗಳ ಕಾಲ ಯುಎಸ್​ ಮೂಲದ ಲೆಕ್ಸ್ ಫ್ರಿಡ್ಮನ್​ ಜೊತೆ ಪಾಡ್​ಕಾಸ್ಟ್​​ನಲ್ಲಿ ಭಾಗಿಯಾಗಿದ್ದು. ಅದ್ಭುತ ಮಾತುಕತೆಗಳು ನಡೆದಿವೆ. ಇಂದು ಸಂಜೆ ಈ ಪಾಡ್​ಕಾಸ್ಟ್​​ನ ವಿಡಿಯೋ ರಿಲೀಸ್​ ಆಗಲಿದೆ ಎಂದು ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.


">March 15, 2025

ಇದು ಮಾತ್ರವಲ್ಲ ಇದೊಂದು ಆಕರ್ಷಕವಾದ ಸಂಭಾಷಣೆ. ಇಲ್ಲಿ ವಿವಿಧ ರೀತಿಯ ವಿಚಾರಗಳು ವಿನಿಮಯಗೊಂಡಿವೆ ಎಂದು ಹೇಳಿದ್ದಾರೆ. ಇನ್ನು ಫ್ರಿಡ್ಮನ್​ ಒಬ್ಬ ಎಐ ಸಂಶೋಧಕ. ಪಾಡ್​ಕಾಸ್ಟ್​ ಎನ್ನುವುದು ಒಂದು ಅದ್ಭುತ ವಿಷಯಗಳ ವಿನಿಮಯದ ವೇದಿಕೆ ಎಂದು ನಂಬಿರುವವನು ನಾನು ಎಂದು ಹೇಳಿಕೊಂಡಿದ್ದಾರೆ.ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಪ್ರಾಡ್​ಕಾಸ್ಟ್​ ಮಾಡಲಿದ್ದೇನೆ ಎಂದು ಫ್ರಿಡ್ಮನ್ ಘೋಷಿಸಿಕೊಂಡಿದ್ದರು. ಫೆಬ್ರುವರಿಯಲ್ಲಿ ಫ್ರಿಡ್ಮನ್​ ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಅದ್ಭುತವಾದ ವ್ಯಕ್ತಿತ್ವವುಳ್ಳ ಮನುಷ್ಯ, ನಾನು ಇಲ್ಲಿಯವರೆಗೂ ಇಂತವರ ಬಗ್ಗೆ ಅಧ್ಯಯನವೇ ಮಾಡಿಲ್ಲ ಎಂದು ಹೇಳಿದ್ದರು.


">February 7, 2025

ಲೆಕ್ಸ್​ ಫ್ರಿಡ್ಮನ್​ ಮೂಲತಃ ಒಬ್ಬ ಸಂಶೋಧಕ. ಇವರು ತಮ್ಮದೇ ಆದ ಲೆಕ್ಷ್​ ಫ್ರಿಡ್ಮನ್ ಎಂಬ ಪ್ರಾಡ್​ಕಾಸ್ಟ್​ನ್ನು 2018 ರಿಂದಲೂ ನಡೆಸುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿಗ್ಗಜನರ ಸಂದರ್ಶನವನ್ನು ಅವರು ನಡೆಸುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ವ್ಯಕ್ತಿಗಳ ಸಂದರ್ಶನ ನಡೆಸುತ್ತಾರೆ

ಫ್ರಿಡ್ಮನ್​ ಅಧಿಕೃತ ವೆಬ್​ಸೈಟ್ ಪ್ರಕಾರ ಇವರೊಬ್ಬರು ಎಮ್​ಐಟಿಯಲ್ಲಿ ಸಂಶೋಧಕ ವಿಜ್ಞಾನಿಯಾಗಿದ್ದರು ಎಂದು ಹೇಳಲಾಗಿದೆ. 2019ರಲ್ಲಿ ಫ್ರಿಡ್ಮನ್​ನನ್ನು ಎಲಾನ್ ಮಸ್ಕ್​ ಎಮ್​ಐಟಿ ಅಧ್ಯಯನ ವಿಷಯದಲ್ಲಿ ಹಾಡಿ ಹೊಗಳಿದಾಗ ಅವರು ಜಗತ್ತಿಗೆ ಪರಿಚಯವಾದರು.

ಈಗಾಗಲೇ ಹಲವು ರಾಜಕೀಯ ದಿಗ್ಗಜರ ಜೊತೆ ಈತ ಸಂವಾದ ನಡೆಸಿದ್ದಾನೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಅರ್ಜೆಂಟೆನಿಯಾದ ಪ್ರಧಾನಿ ಜೇವಿಯರ್ ಮಿಲೈ ಇವರ ಜೊತೆ ಇನ್ನುಳಿದ ಕ್ಷೇತ್ರದಲ್ಲಿ ಸಾಧನೆಗೈದ ಎಲಾನ್​ ಮಸ್ಕ್​, ಮಾರ್ಕ್​ ಜುಕರ್​ಬರ್ಗ್​, ಜೆಫ್​ ಬೆಜೊಜ್​, ಸ್ಯಾಮ್ ಅಲ್ಟಮನ್, ಮಂಗೂಸ್​ ಕಾರ್ಲಸನ್​,ಮತ್ತು ಯುವಾಲ್ ನೊಹಾ ಹರಾರಿಯವರ ಜೊತೆಗೂ ಸಂದರ್ಶನ ನಡೆಸಿದ್ದಾನೆ ಇನ್ನು ಫ್ರೆಡ್ಮಿನ್​ನ ಯುಟ್ಯೂಬ್ ಚಾನೆಲ್​ ಭಾರೀ ಪ್ರಮಾಣದ ಚಂದಾದಾರರನ್ನು ಹೊಂದಿದೆ. ಸುಮಾರು 4 ಕೋಟಿ 80 ಲಕ್ಷ ಜನರು ಈ ಚಾನೆಲ್​ನ್ನು ಸಬ್​ಸ್ಕ್ರೈಬ್ ಮಾಡಿದ್ದಾರೆ. ಇಲ್ಲಿಯವರೆಗೂ 82 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಈತ ವಿಡಿಯೋಗಳು ಪಡೆದುಕೊಂಡಿವೆ.

ಇದನ್ನೂ ಓದಿ:BREAKING: ಖ್ಯಾತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಆಸ್ಪತ್ರೆಗೆ ದಾಖಲು

ಇದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅವರ ಜೀವನದ ಬಗ್ಗೆ ಮಾತುಕತೆಗಳನ್ನು ನಡೆಸಿರುವ ಮೂರು ಗಂಟೆಗಳ ಪಾಡ್​ಕಾಸ್ಟ್ ಇಂದು ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಮೋದಿಯವರ ಬಾಲ್ಯ, ಹಿಮಾಲಯದಲ್ಲಿದ್ದ ಸಂದರ್ಭ, ಸಾರ್ವಜನಿಕ ಜೀವನದ ಪ್ರಯಾಣ ಹೀಗೆ ಹಲವಾರು ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಎಚ್ಚರಿಕೆ.. ಯೆಮನ್‌ ಮೇಲೆ ಅಮೆರಿಕಾ ಭಯಾನಕ ದಾಳಿ; ಒಂದೊಂದು ದೃಶ್ಯವೂ ನರಕ!

ಇನ್ನು ಒಂದು ವಿಶೇಷವೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನಕ್ಕೂ ಮುನ್ನ ಫ್ರಿಡ್ಮನ್​ ಮೂರು ದಿನ ಉಪವಾಸ ವ್ರತ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಕಾರಣ ಮೋದಿಯವರು ನವರಾತ್ರಿಯಂದು 9 ದಿನಗಳ ಕಾಲ ಉಪವಾಸ ಮಾಡುವುದರಿಂದ ಬಂದಂತಹ ಪ್ರೇರಣೆ ಎಂದು ಹೇಳಲಾಗುತ್ತಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment