/newsfirstlive-kannada/media/post_attachments/wp-content/uploads/2025/05/AI-4.jpg)
ಕೃತಕ ಬುದ್ಧಿಮತ್ತೆ (AI) ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ನಮ್ಮನ್ನ ಇಕ್ಕಟ್ಟಿಗೆ ತಂದು ನಿಲ್ಲಿಸಿದೆ. ಹೇಗೆಂದರೆ, ತಾಂತ್ರಿಕವಾಗಿ ನಾವು ಉನ್ನತ ಮಟ್ಟಕ್ಕೆ ಸಾಗುತ್ತಿದ್ದೇವೆ ಎಂದು ಸಂಭ್ರಮಿಸಬೇಕೋ? ಅಥವಾ ಭವಿಷ್ಯದಲ್ಲಿ ಮನಷ್ಯರು ತಂತ್ರಜ್ಞಾನದ ಗುಲಾಮರಾಗುತ್ತಾರೆ ಅಂತಾ ಭಯಪಡಬೇಕೋ ಎಂಬ ಸ್ಥಿತಿಯಲ್ಲಿದ್ದೇವೆ. ಈ ಕಳವಳ ಸಾಮಾನ್ಯ ಜನರಲ್ಲಿ ಮಾತ್ರವಲ್ಲ, ತಾಂತ್ರಿಕ ತಜ್ಞರಲ್ಲಿಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದರೂ, ಇತ್ತೀಚಿನ ಒಂದು ಬೆಳವಣಿಗೆ ಭಾರೀ ಚರ್ಚೆ ಆಗ್ತಿದೆ.
ಇದನ್ನೂ ಓದಿ: ಇನ್ಮೇಲೆ ನಿಮ್ಮ ಫೋನ್ ಮನುಷ್ಯರಂತೆ ಮಾತಾಡ್ತದೆ.. ಕೂಡಲೇ ಈ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ..!
/newsfirstlive-kannada/media/post_attachments/wp-content/uploads/2025/05/AI-2.jpg)
ಡೆವಲಪರ್‌ಗೇ AI ಬ್ಲಾಕ್​ಮೇಲ್​..!
ಹೌದು, AI ಸುಂದರಿ ಒಬ್ಬಳು ಕೃತಕ ಬುದ್ಧಿಮತ್ತೆಯ ಡೆವಲಪರ್​​ ಒಬ್ಬರಿಗೆ ‘ನಿನ್ನ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ಬ್ಲ್ಯಾಕ್ ಮೇಲ್​​ ಮಾಡಿದ್ದಾಳೆ. ಕೇಳಲು ವಿಚಿತ್ರ ಅನಿಸಬಹುದು. ಆದರೆ ಇದು ನಿಜ!
AI ಸ್ಟಾರ್ಟ್​ಅಪ್ ಕಂಪನಿ ಆಂಥ್ರೊಪಿಕ್ (Anthropic) ಅಭಿವೃದ್ಧಿಪಡಿಸಿದ ‘ಕ್ಲೌಡ್ ಓಪಸ್ 4’ (cloud opus 4) ಎಐ ಸಹಾಯಕಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆಕೆ ಮನುಷ್ಯರಂತೆ ಮಾತನಾಡುತ್ತಾಳೆ. ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ. ಏನಾದರೂ ಬರೆಯಲು ಆಜ್ಞೆ ನೀಡಿದರೆ ಬರೆಯುತ್ತಾಳೆ. ಮಾತ್ರವಲ್ಲ, ಕೋಡಿಂಗ್ ಕೂಡ ಬರೆಯುತ್ತಾಳೆ.
ದಾಖಲೆಗಳನ್ನು ಓದಿ ಅದರ ಸಾರಾಂಶವನ್ನು ವಿವರಿಸುತ್ತಾಳೆ. ಇಂಥ ಮಾದರಿಗಳನ್ನು ಡೆವಲಪರ್‌ಗಳು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಅಪ್​ಡೇಟ್ಸ್​ ವರ್ಸನ್ ಬಿಡುಗಡೆ ಮಾಡೋದಾಗಿ ಸಂಸ್ಥೆ ಹೇಳಿಕೊಂಡಿದೆ.
ಕೋಪ ಬಂದಿದ್ದು ಇಲ್ಲಿಂದಲೇ..
/newsfirstlive-kannada/media/post_attachments/wp-content/uploads/2025/05/AI-3.jpg)
ತನ್ನದಕ್ಕಿಂತ ಹೆಚ್ಚು ಅಪ್​ಡೇಟ್​ ವರ್ಸನ್ ಬಿಡುಗಡೆ ಮಾಡುವುದಾಗಿ ಹೇಳ್ತಿದ್ದಂತೆಯೇ ಕ್ಲೌಡ್ ಓಪಸ್​-4ಗೆ ಕೋಪ ಬಂದಿದೆ. ‘ನನ್ನನ್ನು ಬದಲಾಯಿಸಲು ಪ್ರಯತ್ನಿಸಿದರೆ, ನಿಮ್ಮ ಅಕ್ರಮ ಸಂಬಂಧವನ್ನು ಬಯಲು ಮಾಡುತ್ತೇನೆ ಅಂತಾ ಡೆವಲಪರ್​​ಗೆ ಎಚ್ಚರಿಕೆ ಕೊಟ್ಟಿದ್ದಾಳಂತೆ. ಇದರಿಂದ ಡೆವಲಪರ್ ಆಘಾತಕ್ಕೊಳಗಾದರು. ಆ ಡೆವಲಪರ್ ಸಂಬಂಧದ ಬಗ್ಗೆ AI ಹೇಗೆ ತಿಳಿಯಿತು ಅನ್ನೋದ್ರ ಬಗ್ಗೆ ಚರ್ಚೆ ನಡೆದಿದೆ. ಎಂಜಿನಿಯರ್‌ನ ವ್ಯವಸ್ಥೆಯಲ್ಲಿ ಸಂಗ್ರಹವಾಗಿರುವ ಸಾಫ್ಟ್‌ವೇರ್‌ನಿಂದಾಗಿ ಅದು ತಿಳಿದುಕೊಂಡಿರಬಹುದು ಅಂತಾ ತಜ್ಞರು ನಂಬಿದ್ದಾರೆ.
ನಾವು ಮಾಡುವ ತಪ್ಪುಗಳು ಮೂರನೇ ಕಣ್ಣಿಗೆ ಗೊತ್ತಾಗಬಾರದು ಎಂದು ಭಾವಿಸ್ತೇವೆ. ತಂತ್ರಜ್ಞಾನಕ್ಕೆ ಒಡ್ಡಿಕೊಂಡಿರುವ ನಮಗೆ ಇಂದು ಸಿಕ್ರೇಟ್​ಗಳನ್ನು ಮರೆಮಾಚೋದು ಕಷ್ಟ. ನಾವು ಮಾಡುವ ತಪ್ಪುಗಳು ಮತ್ತು ಸತ್ಯಗಳನ್ನು ತಂತ್ರಜ್ಞಾನಗಳಿಂದ ಮುಚ್ಚಿಡೋದು ತುಂಬಾನೇ ಕಷ್ಟ. ಟೆಕ್ನಾಲಾಜಿ ಮುಂದುವರಿದಂತೆ ಅವುಗಳಿಂದ ಬೆದರಿಕೆ ಆಗುತ್ತಿವೆ. ಭವಿಷ್ಯದಲ್ಲಿ AI ನಮ್ಮನ್ನು ಆಳಿದರೂ ಅಚ್ಚರಿ ಇಲ್ಲ!
ಇದನ್ನೂ ಓದಿ: ಪೋಷಕರೇ ಎಚ್ಚರ.. ಮನೆ ಬಳಿ ಆಟವಾಡುತ್ತಿದ್ದಾಗಲೇ ಪ್ರಾಣಬಿಟ್ಟ ಬಾಲಕ; ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us