newsfirstkannada.com

Breaking News: ‘ಜಾತಿ ಗಣತಿ ಗ್ಯಾರಂಟಿ’ ಸೇರಿ ಮತ್ತೆ ಐದು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್..! ​

Share :

Published March 16, 2024 at 12:53pm

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಜಂಟಿಯಾಗಿ ಖರ್ಗೆ ಸುದ್ದಿಗೋಷ್ಟಿ

    ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್​ನಿಂದ ಗ್ಯಾರಂಟಿ ಯೋನೆ ಘೋಷಣೆ

    ಪಾದಯಾತ್ರೆ ವೇಳೆ 15 ಗ್ಯಾರಂಟಿ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಜೊತೆಗೆ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಖರ್ಗೆ.. ವಿಶೇಷವಾದ ಘೋಷಣೆಯೊಂದನ್ನು ಬೆಂಗಳೂರಿನಿಂದ ಮಾಡುತ್ತಿದ್ದೇನೆ. ದೆಹಲಿಯಿಂದ ಘೋಷಣೆ ಮಾಡುವ ಬದಲು ಬೆಂಗಳೂರಿನಿಂದಲೇ ಘೋಷಣೆ ಮಾಡುತ್ತಿದ್ದೇನೆ ಎಂದರು.

ನೂತನ ಐದು ಗ್ಯಾರಂಟಿ ಯೋಜನೆಗಳ ಘೋಷಣೆ

  1. ಕಿಸಾನ್ ನ್ಯಾಯ್
  2. ಯುವ ನ್ಯಾಯ್
  3. ಶ್ರಮಿಕ್ ನ್ಯಾಯ್
  4. ಹಿಸ್ಸೇದಾರ್ ನ್ಯಾಯ್
  5. ಮಹಿಳಾ ನ್ಯಾಯ್
  6. ಜಾತಿಗಣತಿ ಗ್ಯಾರಂಟಿ

15 ಗ್ಯಾರಂಟಿ ಯೋಜನೆ ಘೋಷಣೆ ಆಗಿದೆ
ಖರ್ಗೆ ಮಾತನಾಡಿ, ನಾಳೆಗೆ ನಮ್ಮ ನಾಯಕ ರಾಹುಲ್‌ ಗಾಂಧಿ ಅವರ ಪಾದಯಾತ್ರೆ ಕಂಪ್ಲೀಟ್ ಆಗ್ತಿದೆ. ಮಣಿಪುರದಿಂದ ಆರಂಭ ಆಗಿದ್ದು, ಮುಂಬೈನಲ್ಲಿ ಮುಗಿಯುತ್ತಿದೆ. ಪಾದಯಾತ್ರೆ ವೇಳೆ 15 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವು. ಕಿಶಾನ್ ನ್ಯಾಯ್, ಯುವ ನ್ಯಾಯ್ ಸೇರಿ ಸುಮಾರು 5 ಗ್ಯಾರಂಟಿ ಘೋಷಣೆ ಮಾಡಲಿದ್ದೇವೆ. ಶ್ರಮಿಕ್ ನ್ಯಾಯ್ ಹಾಗೂ ಹಿಸ್ಸೇದಾರ್ ನ್ಯಾಯ್ ಗ್ಯಾರಂಟಿ ಘೋಷಣೆ ಕೂಡ ಮಾಡುತ್ತಿದ್ದೇವೆ ಎಂದರು.

ಶ್ರಮಿಕರು, ಬಡ ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ ಭದ್ರತೆಗೆ ಈ ಗ್ಯಾರಂಟಿ ಘೋಷಣೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದೇವು. ಆದರೆ ಕೆಲವು ಗ್ಯಾರಂಟಿಗೆ ಹಣಕಾಸು ಸಮಸ್ಯೆ ಆದಾಗ ಕೇಂದ್ರದಿಂದ ಸರಿಯಾಗಿ ಸ್ಪಂದಿಸಿರಲಿಲ್ಲ. ಮೋದಿ ಅವರದು ವೀಕರ್ಸ್ ಸೆಕ್ಸಸ್​​ಗೆ ಹತ್ತಿರ ಇರುವ ಯಾವುದೇ ಕಾರ್ಯಕ್ರಮ ಇರಲಿಲ್ಲ. ಆದರೆ ಕಾಂಗ್ರೆಸ್ ಹೆಚ್ಚಿನದಾಗಿ ದುರ್ಬಲರಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.

ಸಾಮಾಜಿಕ, ಆರ್ಥಿಕವಾಗಿ ಎಲ್ಲಾ ಜನರಿಗೂ ನ್ಯಾಯ ಕೊಡುವುದು ನಮ್ಮ ಉದ್ದೇಶ. ಅದಕ್ಕೆ ಇವತ್ತು ಮತ್ತೆ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡ್ತಿದ್ದೇವೆ. ಕಾರ್ಮಿಕರಿಗೆ ಗ್ಯಾರಂಟಿ: ಸಾಮಾಜಿಕ ಭದ್ರತೆ, ಸರಿಯಾದ ವೇತನ ಕೊಡುವ ಭದ್ರತೆಯ ಗ್ಯಾರೆಂಟಿ ನಮ್ಮದಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಕಾನೂನು ಸದೃಢವಾಗಿತ್ತು. ಮೋದಿ ಬಂದ ಬಳಿಕ ಕಾರ್ಮಿಕರ ಕಾನೂನು ದುರ್ಬಲಗೊಳಿಸಿದ್ದಾರೆ. ನಾನು ಕಾರ್ಮಿಕ ಸಚಿವನಾಗಿದ್ದಾಗ ತಂದ ಯೋಜನೆಗಳಿಂದ ನಮ್ಮ ಕಾರ್ಯಕರ್ತರೇ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರು. ನಾನು ಅದಕ್ಕೆ ಭಯ ಪಡಲಿಲ್ಲ, ಅವರನ್ನ ಕರೆದು ಮಾತನಾಡಿ ಮನವೊಲಿಸಿದ್ದೆ ಎಂದರು.

ಜಾತಿಗಣತಿ ಮಾಡುವ ಗ್ಯಾರಂಟಿ
ಬಡವರ ಮತ್ತು ಶ್ರೀಮಂತರ ನಡುವೆ ಇರೋ ಅಂತರ ಕಡಿಮೆ ಮಾಡುವುದು. ಜಾತಿಗಣತಿ ಮಾಡುವ ಗ್ಯಾರಂಟಿ. ಇದು ಸಮುದಾಯಗಳ ಅಭಿವೃದ್ಧಿ ವಿಚಾರಕ್ಕೆ ಅನುಕೂಲ ಆಗಲಿದೆ. ಶಿಕ್ಷಣ ಮತ್ತು ಸಾಮಾಜಿಕವಾಗಿ ಯೋಜನೆ ಕೊಡಲು ಅನುಕೂಲ ಆಗಲಿದೆ. ಕರ್ನಾಟಕ ಈಗಾಗಲೇ ವರದಿ ಸ್ವೀಕಾರ ಮಾಡಿದೆ. ಆದರೆ ಮೋದಿ ಮಾತ್ರ ಜಾತಿಗಣತಿಗೆ ವಿರೋಧ ಮಾಡ್ತಿದ್ದಾರೆ. ಜಾತಿಯಿಂದ ಅವರು ಹೊರಬರುವುದು ಮೋದಿಗೆ ಇಷ್ಟವಿಲ್ಲ. ಮೋದಿ ಒಬ್ಬ ಹಿಂದುಳಿದ ಸಮುದಾಯಕ್ಕೆ ಸೇರಿದ್ದರೂ ಇದಕ್ಕೆ ವಿರೋಧ ಮಾಡ್ತಾರೆ. ನಾವು ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಜಾತಿಗಣತಿ ಮಾಡುವ ಗ್ಯಾರಂಟಿಯನ್ನು ಘೋಷಣೆ ಮಾಡ್ತಿದ್ದೇವೆ ಎಂದರು.

ಎಲ್ಲಿದೆ ಬುಲೆಟ್ ಟ್ರೈನ್..?
ಮೋದಿ ಎಷ್ಟು ಸಲ ಜನರಿಗೆ ಸುಳ್ಳು ಹೇಳ್ತೀರಾ? ಎಲ್ಲಿದರ ಬುಲೆಟ್ ಟ್ರೈನ್? ಅಹಮದಾಬಾದ್ ಟು ಮುಂಬಯಿ ಬುಲೆಟ್ ಟೈನ್ ಬರುತ್ತೆ ಅಂದಿದ್ರು. 10 ವರ್ಷ ಆಯ್ತು.. ಎಲ್ಲಿದೆ ಬುಲೆಟ್ ಟ್ರೈನ್? 15 ಲಕ್ಷ ಪ್ರತಿಯೊಬ್ಬರ ಅಕೌಂಟ್​ಗೆ ಹಣ ಬರಲಿದೆ ಅಂದ್ರು.. ಎಲ್ಲಿದೆ ಹಣ..? ಎಂದು ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ‘ಜಾತಿ ಗಣತಿ ಗ್ಯಾರಂಟಿ’ ಸೇರಿ ಮತ್ತೆ ಐದು ಗ್ಯಾರಂಟಿ ಯೋಜನೆ ಘೋಷಿಸಿದ ಕಾಂಗ್ರೆಸ್..! ​

https://newsfirstlive.com/wp-content/uploads/2024/03/CONGRESS.jpg

Load More