Advertisment

ಕೆಪಿಸಿಸಿ ನಾಯಕರಿಗೆ AICC ನಾಯಕರ ಸೂಚನೆ: ಫೋನ್​ ಕರೆಯಲ್ಲಿ ಹೈಕಮಾಂಡ್ ನಾಯಕರು ಹೇಳಿದ್ದೇನು?

author-image
Gopal Kulkarni
Updated On
ಕೆಪಿಸಿಸಿ ನಾಯಕರಿಗೆ AICC ನಾಯಕರ ಸೂಚನೆ: ಫೋನ್​ ಕರೆಯಲ್ಲಿ ಹೈಕಮಾಂಡ್ ನಾಯಕರು ಹೇಳಿದ್ದೇನು?
Advertisment
  • ರಾಜ್ಯ ನಾಯಕರಿಗೆ ಎಐಸಿಸಿ ನಾಯಕರಿಂದ ಖಡಕ್ ಸಂದೇಶ
  • ರಾಜ್ಯಪಾಲರು, ಕೇಂದ್ರದ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ಕರೆ
  • ಸೂಚನೆಯಂತೆ ರಾಜ್ಯವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ

ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೆ, ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾದ ಸಿಎಂ ಸಿದ್ದರಾಮಯ್ಯ, ಮತ್ತೊಂದು ಕಡೆ ದಿಢೀರ್ ಸಚಿವ ಸಂಪುಟ ಸಭೆ ಕರೆದು ಅಷ್ಟೇ ದಿಢೀರಾಗಿ ರದ್ದುಗೊಳಿಸಿದರು. ಇದರ ಬೆನ್ನಲ್ಲೇ ಮಧ್ಯಾಹ್ನ 12.30ಕ್ಕೆ ಡಿಸಿಎಂ ನೇತೃತ್ವದಲ್ಲಿ ಎಲ್ಲ ಸಚಿವರು ಸೇರಿ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ನಿರ್ಧಾರ ಮಾಡಿದ್ದಾರೆ

Advertisment

ಇದನ್ನೂ ಓದಿ:Breaking: ಬದಲಾಯ್ತು ಪ್ಲಾನ್​.. ದಿಢೀರ್​ ಕರೆದ ಸಚಿವ ಸಂಪುಟ ಸಭೆ ರದ್ದು.. ಮುಂದಿನ ನಿರ್ಧಾರ ಏನು?

ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನು ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್​, ಕೆಪಿಸಿಸಿಗೆ ಸೂಚನೆ ನೀಡಿದೆ. ಕೂಡಲೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ಕರೆ ನೀಡಿದೆ. ಪ್ರತಿಯೊಬ್ಬ ಸಚಿವರು, ಶಾಸಕರು ಈ ಬಗ್ಗೆ ಹೇಳಿಕೆ ನೀಡಬೇಕೆಂದು ನಿರ್ದೇಶನ ನೀಡಿದೆ. ಸಿದ್ದರಾಮಯ್ಯನವರ ಬೆನ್ನಿಗೆ ನಿಲ್ಲಬೇಕು, ಅದರೊಂದಿಗೆ ಕಾನೂನು ಹೋರಾಟ ಮಾಡೋಣ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಗೆ ನಾವು ತಯಾರಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್​ ರವಾನೆ ಮಾಡಿದೆ.

ಇದನ್ನೂ ಓದಿ:ಪ್ರಾಸಿಕ್ಯೂಷನ್​ಗೆ ಅನುಮತಿ ಬೆನ್ನಲ್ಲೆ ಚುರುಕಾದ ಸಿದ್ದು ಲೀಗಲ್ ಟೀಂ: ಏನೆಲ್ಲಾ ಸಿದ್ಧತೆಯಾಗ್ತಿದೆ?

Advertisment

ಹೈಕಮಾಂಡ್ ನಾಯಕರ ಆದೇಶದ ಮೇರೆಗೆ ರಾಜ್ಯವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್​ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದೆ. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಹಾಗೂ ಬಿಜೆಪಿ ಜೆಡಿಎಸ್ ಷಡ್ಯಂತ್ರ ಖಂಡಿಸಿ ಹೋರಾಟಕ್ಕೆ ಸಜ್ಜಾಗಲು ತೀರ್ಮಾನ ತೆಗೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment