/newsfirstlive-kannada/media/post_attachments/wp-content/uploads/2025/07/SIDDU-MEETING.jpg)
2029ರ ಚುನಾವಣೆ ಮೇಲೆ ಕಣ್ಣಾಕಿರುವ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ಮತಬ್ಯಾಂಕ್ ಅನ್ನು ತನ್ನತ್ತ ಸೆಳೆಯಲು ಹೊಸ ರಣತಂತ್ರ ರೂಪಿಸಿದೆ. ರಾಜ್ಯದಲ್ಲಿ ಅಹಿಂದ ರಾಮಯ್ಯ ಎಂದೇ ಕರೆಸಿಕೊಳ್ಳುವ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎಐಸಿಸಿ ಒಬಿಸಿ ಮಂಡಳಿಯ ಮೊದಲ ಸಭೆ ನಡೆಯುತ್ತಿದ್ದು, ಇವತ್ತು ಹಲವು ನಿರ್ಣಯಗಳನ್ನು ಕೈಗೊಳ್ಳಲಿದೆ. ಹಿಂದುಳಿದ ವರ್ಗಗಳನ್ನ ಒಟ್ಟುಗೂಡಿಸಿ, ಸಮಸ್ಯೆಗಳನ್ನ ಗುರುತಿಸಿ ಪರಿಹಾರ ಕಂಡುಕೊಳ್ಳಲು ಹೋರಾಟ ರೂಪಿಸುವ ಬಗ್ಗೆ ಚರ್ಚೆ ಆಗ್ಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ರೌಡಿ ಬಿಕ್ಲು ಶಿವನ ಬರ್ಬರ ಹತ್ಯೆ; ಮನೆ ಮುಂದೆಯೇ ಅಡ್ಡಗಟ್ಟಿ ಕೊಚ್ಚಿ ಕೊಲೆ
ಬೆಂಗಳೂರಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ ನಡೆದಿದೆ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 2 ದಿನಗಳ ಸಭೆ ಹಮ್ಮಿಕೊಳ್ಳಲಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಮೊದಲ ಸಭೆ ನಡೆದಿದ್ದು, ಸಭೆ ಬಳಿಕ ಫೋಟೋ ಶೂಟ್ಗೆ ಕಾಂಗ್ರೆಸ್ ನಾಯಕರು ಪೋಸ್ ಕೊಟ್ರು.. ಇನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಹಿಂದ ಒಂದು ಮತಬ್ಯಾಂಕ್ ಅಲ್ಲ, ಇದು ಭಾರತದ ಆತ್ಮಸಾಕ್ಷಿಯ ಧ್ವನಿ. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಮತ್ತು ಸರ್ವೋದಯ ತತ್ವದಲ್ಲಿ, ಯಾರೂ ಹಿಂದೆ ಉಳಿಯದ, ಎಲ್ಲರೂ ಒಟ್ಟಿಗೆ ಏಳುವ ಭಾರತವನ್ನು ಕಟ್ಟೋಣ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಖಾಸಗಿ ಹೊಟೇಲ್ನಲ್ಲಿ ಚಿಂತನ-ಮಂಥನ ನಡೆಸಲಿದೆ. ಸಭೆಯಲ್ಲಿ ಸಂವಿಧಾನದ 164(1) ಆರ್ಟಿಕಲ್ ಬಗ್ಗೆ ವಿಸ್ತ್ರತ ಚರ್ಚೆ ಆಗಲಿದೆ. ವಿಶೇಷ ಆಹ್ವಾನಿತರಾಗಿ ಹಿಂದುಳಿದ ವರ್ಗಗಳ ಐವರು ಸಚಿವರಿಗೂ ಆಹ್ವಾನ ಸಿಕ್ಕಿದೆ. ಸಚಿವ ಮಧು ಬಂಗಾರಪ್ಪ, ಸಂತೋಷ್ ಲಾಡ್, ಮಂಕಾಳ್ ವೈದ್ಯ, ಭೈರತಿ ಸುರೇಶ್, ಎನ್.ಎಸ್ ಭೋಸರಾಜು ಸಭೆಯಲ್ಲಿ ಭಾಗಿ ಆಗ್ತಿದ್ದಾರೆ. 90ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಇವತ್ತಿನ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಹಲವು ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದೆ.. ಪುಟಿನ್ ಕುದಿಯುವಂತೆ ಮಾಡಿದ ಟ್ರಂಪ್..!
ಒಟ್ಟಾರೆ, 2029ಕ್ಕೆ ಅಹಿಂದ ಜಪ ಮಾಡುವ ಮೂಲಕ ಕಾಂಗ್ರೆಸ್ ಮೆಗಾ ಪ್ಲಾನ್ ಸಕ್ಸಸ್ಗಾಗಿ ಸಮರಾಭ್ಯಾಸ ಶುರು ಮಾಡಿದೆ. ಒಬಿಸಿ ಮತಗಳ ಸೆಳೆಯಲು ಕಾಂಗ್ರೆಸ್ ನಾಯಕರ ತಂತ್ರ ಸ್ಪಷ್ಟವಾಗ್ತಿದೆ.. ಆದ್ರೆ, ಸದ್ಯಕ್ಕೆ ಇದು ಮೊದಲ ಸಭೆ ಆಗಿರೋದ್ರಿಂದ ಮುಂದಿನ ಸಭೆಗಳಲ್ಲಿ ಇನ್ನಷ್ಟು ಪ್ರಖರ ಮತ್ತು ಸ್ಪಷ್ಟ ಕಾರ್ಯತಂತ್ರಗಳು ಸಿದ್ಧಗೊಳ್ಳಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ