/newsfirstlive-kannada/media/post_attachments/wp-content/uploads/2025/03/Mallikarjun-Kharge-meets-Siddaramaiah.jpg)
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿನ್ನೆ ಒಂದು ಎಚ್ಚರಿಕೆ ನೀಡಿದ್ದಾರೆ. ಎಚ್ಚರ ತಪ್ಪಿದ್ರೆ ಸರ್ಕಾರ, ಕೈತಪ್ಪಲಿದೆ ಹುಷಾರು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಎಐಎಸಿಸಿ ಅಧ್ಯಕ್ಷ ಖರ್ಗೆ ತವರು ಕಲಬುರಗಿಯಲ್ಲಿ ನಿನ್ನೆ 216.53 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 6.20 ಕೋಟಿ ವೆಚ್ಚದ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕ ಉದ್ಘಾಟನೆ ಹಾಗೂ 12 ಬೃಹತ್ ಮೊತ್ತದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಮತ್ತು ಡಿಸಿಎಂಗೆ ಖರ್ಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಏನಂದ್ರು ಖರ್ಗೆ..?
ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರಗಳು ಇವೆ. ಸರ್ಕಾರವನ್ನು ಕೆಡಗಬೇಕು, ಅಧಿಕಾರವನ್ನು ನಮ್ಮ ಕೈಯಲ್ಲಿ ತಗೋಬೇಕು ಎಂಬ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆ ಪ್ರಯತ್ನ ನಮ್ಮ ಕರ್ನಾಟಕ ಸರ್ಕಾರದ ಮೇಲೂ ನಡೆಯುತ್ತಿದೆ. ನಮ್ಮವರು ಹುಷಾರಾಗಿರಬೇಕು. ನಿಮ್ಮಲ್ಲಿ ಏನೇ ಬೇಸರ ಇರಲಿ. ನೀವು ಒಂದಾಗಿರಬೇಕು. ಇಲ್ಲದಿದ್ದರೆ, ಮೋದಿ, ಅಮಿತ್ ಶಾ ಸೇರಿ ಸರ್ಕಾರ ಬೀಳಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Jr.NTR ಧರಿಸುವ ಒಂದು ಶರ್ಟ್ ಬೆಲೆ ಎಷ್ಟು ಗೊತ್ತಾ..? ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!
ಸಿಬಿಐನಿಂದ ಕಾಂಗ್ರೆಸ್ ನಾಯಕರನ್ನ ಹೆದರಿಸುವ ಕೆಲಸ ಆಗ್ತಿದೆ. ದೇಶದಲ್ಲಿರುವ ಕಾಂಗ್ರೆಸ್ ಸರ್ಕಾರಗಳನ್ನ ಬೀಳಿಸಬೇಕು. ಅಧಿಕಾರ ಹಿಡಿಯಬೇಕು ಎಂಬ ಪ್ಲಾನ್ ನಡೀತಿದೆ ಅಂತ ಗುಟ್ಟೊಂದನ್ನ ಖರ್ಗೆ ರಟ್ಟು ಮಾಡಿದ್ದಾರೆ. ಒಟ್ಟಾರೆ, ಹುಷಾರು ಅಂತ ಖರ್ಗೆ ಆಡಿದ ಮಾತು, ಭವಿಷ್ಯ ಏನಾದ್ರೂ ನುಡಿದ್ರಾ ಅನ್ನೋ ಸಂಶಯ ಹುಟ್ಟಿಸಿದೆ. ಖರ್ಗೆ ಅವರ ಈ ಮಾತು ಇಡೀ ಕಾಂಗ್ರೆಸ್ ಪಡೆಯನ್ನ ಚಿಂತಾಕ್ರಾಂತಕ್ಕೆ ತಳ್ಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಪ್ರಧಾನಿ ಮೋದಿ, ಅಮಿತ್ ಶಾ ಪ್ಲಾನ್ ಮಾಡ್ತಿದ್ದಾರೆ. ಹುಷಾರಾಗಿ, ಒಗ್ಗಟ್ಟಾಗಿರಿ ಅಂತ ಖರ್ಗೆ ಹೇಳಿದ ಕಿವಿಮಾತು ಹಸ್ತಪಡೆಯನ್ನ ಜಾಗೃತಗೊಳಿಸಿದೆ.
ಇದನ್ನೂ ಓದಿ: ಸೂಪರ್ ಓವರ್ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ