newsfirstkannada.com

ನಾನು ಸತ್ತರೆ.. ಹಳೇ ಸೋಲು ನೆನೆದು ಭಾವುಕರಾದ ಮಲ್ಲಿಕಾರ್ಜುನ ಖರ್ಗೆ; ಹೇಳಿದ್ದೇನು?

Share :

Published April 24, 2024 at 4:06pm

Update April 24, 2024 at 5:30pm

    ಮತ ಹಾಕೋಕೆ ಬರದೆ ಇದ್ರೂ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು

    ಅಫಜಲಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮಲ್ಲಿಕಾರ್ಜುನ ಖರ್ಗೆ ಭಾಷಣ

    ಮೋದಿ, ಅಮಿತ್‌ ಶಾ ಟೀಮ್‌ ಇಲ್ಲೇ ಠಿಕಾಣಿ ಹೂಡಿ ಟಾರ್ಗೆಟ್ ಮಾಡಿದ್ದರು

ಕಲಬುರ್ಗಿ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತವರು ಜಿಲ್ಲೆಯಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಅಫಜಲಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಬಾರಿಯ ತಮ್ಮ ಸೋಲು ನೆನೆದು ಮತದಾರರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ನನಗೆ‌ ಕಳೆದ ಬಾರಿ ಸೋಲಾಯ್ತು ಆಗಲಿ. ಸೋಲಾದ್ರು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸ್ಥಾನವೇ ಸಿಕ್ಕಿದೆ. ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತ ತಿಳಿದುಕೊಳ್ಳತ್ತೇನೆ. ಮತ ಹಾಕೋಕೆ ಬರದೆ ಇದ್ರೂ ಕೂಡ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು ನೀವು. ನಾವು ಸತ್ರೆ ನಮ್ಮ ಕೆಲಸ ನೆನೆಸಿಕೊಂಡು ಮಣ್ಣು ಹಾಕೋಕೆ ಬನ್ನಿ. ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾದ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: ‘ಶೇ.55 ರಷ್ಟು ಅಪ್ಪನ ಆಸ್ತಿ ಸರ್ಕಾರ ಕಿತ್ತುಕೊಳ್ಳುತ್ತೆ’- ಕಾಂಗ್ರೆಸ್ ನಾಯಕನಿಂದ ಹೊಸ ವಿವಾದ 

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾನು ಅಫಜಲಪುರದಿಂದ ಸೋತಿದ್ದೇನೆ ಅಂತ ನಾನು ಹೇಳಲ್ಲ. ಆದ್ರೆ ನನಗೆ ಕಳೆದ ಬಾರಿ ಸೋಲಾಗಿದೆ. ನನ್ನನ್ನು ಸೋಲಿಸಲು ಇಡೀ ಭಾರತ ದೇಶವೇ ಮುಂದಾಗಿತ್ತು. ಮೋದಿ, ಅಮಿತ್‌ ಶಾ ಅಂಡ್ ಟೀಮ್‌ ಇಲ್ಲೇ ಠಿಕಾಣಿ ಹೂಡಿ ಟಾರ್ಗೆಟ್ ಮಾಡಿದ್ದರು. ಸೂಲಿಬೆಲೆ ಕೂಡ ಬಂದು ನನ್ನನ್ನ ಸೋಲಿಸಲು ಟಾರ್ಗೆಟ್ ಮಾಡಿದ್ರು. ಇಷ್ಟಾದ್ರೂ ನಾನು ಸೋಲುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದ್ರೆ ಅವರ ಕುತಂತ್ರದಿಂದ ನನ್ನ ಸೋಲಾಯಿತು‌.

ರಾಜ್ಯಕ್ಕೆ ಮೋದಿ ಬರ್ತಾರೆ ಹೋಗ್ತಾರೆ. ಆದ್ರೆ ನಾವಂತೂ ಸದಾ ನಿಮ್ಮ ಕೆಲಸ ಮಾಡಲು ಇದ್ದೇವೆ. ದುರ್ದೈವದಿಂದ ಹಿಂದೆ ಆಗಿದ್ದು ಆಗಿದೆ. ಕಳೆದ ಬಾರಿಯ ಸೋಲನ್ನು ನಾವು ಮರೆತು ಬಿಡೋಣ. ಈ ಬಾರಿ ಬಿಜೆಪಿಗೆ ಮುಖಭಂಗ ಮಾಡಬೇಕು. ಮೋದಿಗೂ ಗೊತ್ತಾಗಲಿ ಅವರ ಕೊಡುಗೆ ಏನೂ ಅಂತ. ನಾವು ಹಾಕಿರುವ ಹಳಿ ಮೇಲೆ ಒಂದೆರಡು ಟ್ರೇನ್ ಬಿಟ್ಟು ಹಸಿರು ಛಂಡಾ ತೋರಿಸಿದ್ದಾರೆ. ನಾವು ಸಾಕಷ್ಟು ಯೋಜನೆಗಳನ್ನ ತಂದಿದ್ದೇವೆ. ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇವೆ. ಮೋದಿ ಏನೂ ಮಾಡದೇ ದೇಶಕ್ಕಾಗಿ ಬಹಳಷ್ಟು ಮಾಡಿದ್ದೇವೆ ಅಂತಾರೆ. ಈ ದೇಶದಲ್ಲಿ ಇಬ್ಬರು ಮಾರಾಟ ಮಾಡೋರು ಇದ್ದಾರೆ. ಖರೀದಿ ಮಾಡೋರು ಇಬ್ಬರು ಇದ್ದಾರೆ. ಮೋದಿ, ಅಮಿತ್‌ ಶಾ ಮಾರಾಟ ಮಾಡೋರು. ಅದಾನಿ ಮತ್ತು ಅಂಬಾನಿ ಖರೀದಿ ಮಾಡೋರು ಎಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಸತ್ತರೆ.. ಹಳೇ ಸೋಲು ನೆನೆದು ಭಾವುಕರಾದ ಮಲ್ಲಿಕಾರ್ಜುನ ಖರ್ಗೆ; ಹೇಳಿದ್ದೇನು?

https://newsfirstlive.com/wp-content/uploads/2024/04/Mallikarjun-Kharge-1.jpg

Load More