/newsfirstlive-kannada/media/post_attachments/wp-content/uploads/2025/04/KL_RAHUL_Markram.jpg)
ತವರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್​ ಐಡೆನ್ ಮಾರ್ಕ್ರಾಮ್ ಮತ್ತೊಂದು ಅಮೋಘವಾದ ಅರ್ಧಶತಕ ಬಾರಿಸಿದ್ದಾರೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಲಕ್ನೋ ತಂಡವನ್ನು ಮೊದಲ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಲಕ್ನೋ ಪರವಾಗಿ ಆರಂಭಿಕ ಬ್ಯಾಟ್ಸ್​ಮನ್​ಗಳಾಗಿ ಕಣಕ್ಕೆ ಇಳಿದ ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ (38*)​ ಬೌಲರ್​ಗಳನ್ನ ಕಾಡಿದರು.
ಇದನ್ನೂ ಓದಿ: ಹನಿಮೂನ್‌ಗೆ ಹೋದವರ ಜೀವ ತೆಗೆದ ಉಗ್ರರು.. ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸೋ ಭಯಾನಕ ದೃಶ್ಯಗಳು!
/newsfirstlive-kannada/media/post_attachments/wp-content/uploads/2025/04/Markram-1.jpg)
ಆರಂಭದಿಂದಲೇ ಅಬ್ಬರ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕ್ರಾಮ್ ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ಗಳಿಗೆ ಮನ ಬಂದಂತೆ ಚಚ್ಚಿದರು. ಇದರಿಂದ ಕೇವಲ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​​ಗಳಿಂದ 51 ರನ್​ಗಳನ್ನು ಪೂರೈಸಿದರು. ಈ ಮೂಲಕ ಮಾರ್ಕ್ರಾಮ್ ಅವರು ಲಕ್ನೋ ತಂಡಕ್ಕೆ ಉತ್ತಮವಾದ ಆರಂಭವನ್ನು ಒದಗಿಸಿಕೊಟ್ಟರು ಎನ್ನಬಹುದು.
2025ರ ಐಪಿಎಲ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮಾರ್ಕ್ರಾಮ್ ರನ್​ಗಳನ್ನ ಕಲೆ ಹಾಕುತ್ತಿದ್ದಾರೆ. ಮಾರ್ಕ್ರಾಮ್ ಅವರು ಈ ಗ್ರ್ಯಾಂಡ್​ ಐಪಿಎಲ್​ನಲ್ಲಿ 4ನೇ ಅರ್ಧಶತಕ ಬಾರಿಸಿದ್ದಾರೆ. ಈ ಮೊದಲು 3 ಹಾಫ್​ಸೆಂಚುರಿ ಗಳಿಸಿದ್ದರು. ಈಗ ಮತ್ತೊಂದು ಅವರ ಖಾತೆಗೆ ಸೇರಿದೆ. ಸದ್ಯ ಪಂದ್ಯದಲ್ಲಿ 52 ರನ್​ಗೆ ಮಾರ್ಕ್ರಾಮ್, ಬೌಲರ್​ ಚಮೀರಾಗೆ ತಮ್ಮ ವಿಕೆಟ್​ ಒಪ್ಪಿಸಿದ್ದಾರೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us