/newsfirstlive-kannada/media/post_attachments/wp-content/uploads/2025/06/Markram.jpg)
ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಸಮೀಪಕ್ಕೆ ಬಂದಿದೆ. ಜೊತೆಗೆ ಐಡೆನ್ ಮಾರ್ಕ್ರಾಮ್ ಭರ್ಜರಿ ಶತಕ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡರು. ಇದರಿಂದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ಬ್ಯಾಟಿಂಗ್ ಮಾಡಿ 212 ರನ್ಗಳಿಗೆ ಆಲೌಟ್ ಆಗಿತ್ತು. ಇದಾದ ಮೇಲೆ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಕೇವಲ 138 ರನ್ಗೆ ಆಲೌಟ್ ಆಗಿ ಕಳೆಗುಂದಿತ್ತು.
ಇದನ್ನೂ ಓದಿ:ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?
ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಆಸ್ಟ್ರೇಲಿಯಾ ಆಟಗಾರರು 2ನೇ ಇನ್ನಿಂಗ್ಸ್ನಲ್ಲೂ ಅದೇ ರಾಗ, ಅದೇ ಹಾಡು ಹಾಡಿದರು. ಪೇಸ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಹಾಫ್ಸೆಂಚುರಿ ಬಿಟ್ಟರೇ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಇದರಿಂದ 2ನೇ ಇನ್ನಿಂಗ್ಸ್ನಲ್ಲಿ ಆಸೀಸ್ 207 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಸೌತ್ ಆಫ್ರಿಕಾ ತಂಡ, ಓಪನರ್ ಐಡೆನ್ ಮಾರ್ಕ್ರಾಮ್ ಅವರ ಅದ್ಭುತವಾದ ಬ್ಯಾಟಿಂಗ್ನಿಂದ ಗೆಲುವಿನ ದಡಕ್ಕೆ ಬಂದಿದೆ. 2ನೇ ಇನ್ನಿಂಗ್ಸ್ನಲ್ಲಿ 159 ಎಸೆತಗಳನ್ನು ಎದುರಿಸಿದ ಐಡೆನ್ ಮಾರ್ಕ್ರಾಮ್ 11 ಬೌಂಡರಿಗಳಿಂದ 102 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದು ಇಂದು ತಂಡವನ್ನು ಗೆಲ್ಲಿಸುವ ನಿರೀಕ್ಷೆಯಲ್ಲಿದ್ದಾರೆ.
ಐಡೆನ್ ಮಾರ್ಕ್ರಾಮ್ಗೆ ಅತ್ಯುತ್ತಮ ಸಾಥ್ ಕೊಟ್ಟಿರುವ ಕ್ಯಾಪ್ಟನ್ ಬವುಮಾ ಅರ್ಧಶತಕ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸದ್ಯ ಸೌತ್ ಆಫ್ರಿಕಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಗಲು ಇನ್ನು 69 ರನ್ಗಳು ಮಾತ್ರ ಬೇಕಾಗಿವೆ. ಆಫ್ರಿಕಾದ ಪೇಸ್ ಬೌಲರ್ ರಬಾಡ ಅವರು ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಹಾಗೂ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ