/newsfirstlive-kannada/media/post_attachments/wp-content/uploads/2025/01/JOB_AIIMS_1.jpg)
ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ ಡೆಲ್ಲಿ (ಎಐಐಎಂಎಸ್) ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ನೆಫ್ರಾಲಜಿ, ನ್ಯೂರಾಲಜಿ, ಮೂಳೆಚಿಕಿತ್ಸೆ, ರೇಡಿಯೊಥೆರಪಿ ಮುಂತಾದ ವಿಭಾಗಗಳಿಗೆ ಜೂನಿಯರ್ ರೆಸಿಡೆಂಟ್‌ಗಳನ್ನ ನೇಮಕ ಮಾಡಿಕೊಳ್ಳುತ್ತದೆ. ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
200ಕ್ಕೂ ಅಧಿಕ ಉದ್ಯೋಗಗಳನ್ನು ಸಂಸ್ಥೆ ಆಹ್ವಾನ ಮಾಡಿದ್ದು ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅಧಿಕೃತ ವೆಬ್​ಸೈಟ್​ನಲ್ಲಿ ಲಿಂಕ್ ಇರುತ್ತದೆ ಇದನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳು ಈಗಾಗಲೇ ಆರಂಭವಾಗಿದ್ದು ಆನ್​ಲೈನ್ ಮೂಲಕವಷ್ಟೇ ಅಪ್ಲೇ ಮಾಡಬೇಕಾಗಿದೆ. ಅರ್ಹತೆ, ಅರ್ಜಿ ಪ್ರಕ್ರಿಯೆ, ವೇತನ ಮತ್ತು ಶೈಕ್ಷಣಿಕ ಅರ್ಹತೆಗಳ ವಿವರ ಇಲ್ಲಿ ಇದೆ, ಪರಿಶೀಲಿಸಿ. ವೆಬ್​ಸೈಟ್- jr.aiimsexams.ac.in
ಸಂಸ್ಥೆ ಹೆಸರು- ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ ಡೆಲ್ಲಿ (ಎಐಐಎಂಎಸ್)
ತಿಂಗಳ ಸ್ಯಾಲರಿ- 56,100 ರೂಪಾಯಿಗಳು
ಇದನ್ನೂ ಓದಿ: CWC ಅಲ್ಲಿ ವಿವಿಧ ಹುದ್ದೆಗಳು ಖಾಲಿ ಖಾಲಿ.. 150ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ
/newsfirstlive-kannada/media/post_attachments/wp-content/uploads/2025/01/JOB_AIIMS.jpg)
ಯಾವ್ಯಾವ ವಿಭಾಗದಲ್ಲಿ ಹುದ್ದೆ ಖಾಲಿ ಇವೆ?
ಬ್ಲಡ್ ಬ್ಯಾಂಕ್, ಬರ್ನ್ ಆ್ಯಂಡ್ ಪ್ಲಾಸ್ಟಿಕ್ ಸರ್ಜರಿ, ಕಾರ್ಡಿಕ್ ರೇಡಿಯಲಾಜಿ, ಕಾರ್ಡಿಯೋಲಾಜಿ, ಕಮ್ಯುನಿಟಿ ಮೆಡಿಸೆನ್, ಸಿಡಿಇಆರ್, ಸಿಟಿವಿಎಸ್, ಡರ್ಮಾಟಲಾಜಿ ಮತ್ತು ವೆನೆರಿಯೋಲಾಜಿ, ಇಹೆಚ್​ಎಸ್​, ತುರ್ತು ಮೆಡಿಸೆನ್, ಲ್ಯಾಬ್ ಮೆಡಿಸೆನ್, ನೆಫ್ರಾಲಜಿ, ನ್ಯೂರಾಲಜಿ, ಮೂಳೆ ಚಿಕಿತ್ಸೆ, ರೇಡಿಯೊಥೆರಪಿ ಸೇರಿ ವಿವಿಧ ವಿಭಾಗಗಳಲ್ಲಿ ಕೆಲಸಗಳು ಖಾಲಿ ಇವೆ.
ವಿದ್ಯಾರ್ಹತೆ
ಎಂಬಿಬಿಎಸ್/ ಬಿಡಿಎಸ್​ ಅಥವಾ ಎಂಸಿಐ/ ಡಿಸಿಐ
ಡಿಎಂಸಿ/ ಡಿಡಿಸಿ
ಒಟ್ಟು ಉದ್ಯೋಗಗಳು- 220
ಮುಖ್ಯವಾದ ದಿನಾಂಕಗಳು
ಉದ್ಯೋಗ ಘೋಷಣೆ ಮಾಡಿದ ದಿನಾಂಕ- 06 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 20 ಜನವರಿ 2025
​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us