newsfirstkannada.com

ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಬಾಂಬ್​ ಬ್ಲಾಸ್ಟ್​ ಘಟನೆಯನ್ನು ಖಂಡಿಸಿದ ಎಐಎಂಐಎಂ ಮುಖ್ಯಸ್ಥ

Share :

Published March 3, 2024 at 8:41am

    ರೆಸ್ಟೋರೆಂಟ್​ಗೆ ಭೇಟಿ ನೀಡಿ ಉಪಹಾರ ಸೇವಿಸಿದ ಓವೈಸಿ

    ಇಂತಹ ದಾಳಿಗಳು ಹೇಡಿತನದ ಕೃತ್ಯಗಳಾಗಿವೆ ಎಂದ ಓವೈಸಿ

    ಬಾಂಬ್​ ದಾಳಿಯನ್ನು ಖಂಡಿಸಿದ ಎಐಎಂಐಎಂ ಮುಖ್ಯಸ್ಥ

ಹೈದರಾಬಾದ್‌: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟವನ್ನು ಖಂಡಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ. ಇನ್ನೂ ಓವೈಸಿ ರೆಸ್ಟೋರೆಂಟ್​ಗೆ ಭೇಟಿ ನೀಡಿ, ಉಪಹಾರ ಸೇವಿಸಿ ಅಲ್ಲಿನ ರುಚಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜಧಾನಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್​ ದಾಳಿಯನ್ನು ಖಂಡಿಸಿದ ಅಸಾದುದ್ದೀನ್​ ಅವರು, ಇಂತಹ ದಾಳಿಗಳು ಹೇಡಿತನದ ಕೃತ್ಯಗಳಾಗಿವೆ. ಇದು ಭಾರತೀಯ ಮೌಲ್ಯಗಳು ಮತ್ತು ವ್ಯವಸ್ಥೆಗಳ ಮೇಲಿನ ದಾಳಿಯಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್​ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ರೆಸ್ಟೋರೆಂಟ್​ಗೆ ಇಡಲಾಗಿದೆ ಎಂಬುದನ್ನ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಓವೈಸಿ ಮನದಟ್ಟು ಮಾಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಬಾಂಬ್​ ಬ್ಲಾಸ್ಟ್​ ಘಟನೆಯನ್ನು ಖಂಡಿಸಿದ ಎಐಎಂಐಎಂ ಮುಖ್ಯಸ್ಥ

https://newsfirstlive.com/wp-content/uploads/2024/03/OYC.jpg

Load More