2800 ಅಡಿ ಆಳದಲ್ಲಿ ಕೆಲಸ ಮಾಡ್ತಿದ್ದಾಗ ದುರಂತ; ಓರ್ವ ಬಲಿ, ಮತ್ತೊಬ್ಬ ಗಂಭೀರ

author-image
Veena Gangani
Updated On
2800 ಅಡಿ ಆಳದಲ್ಲಿ ಕೆಲಸ ಮಾಡ್ತಿದ್ದಾಗ ದುರಂತ; ಓರ್ವ ಬಲಿ, ಮತ್ತೊಬ್ಬ ಗಂಭೀರ
Advertisment
  • ರಾಯಚೂರಿನ ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ ಏರ್​ ಬ್ಲಾಸ್ಟ್​​​
  • ಗಾಯಾಳು ಕಾರ್ಮಿಕನನ್ನ ಚಿನ್ನದ ಗಣಿ ಆಸ್ಪತ್ರೆಗೆ ರವಾನೆ
  • ನೂರಾರು ಜನ ಕಾರ್ಮಿಕರು, ಕುಟುಂಬಸ್ಥರಿಂದ ಪ್ರತಿಭಟನೆ

ರಾಯಚೂರು: ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ ಏರ್ ಬ್ಲಾಸ್ಟ್ ಆಗಿ ಓರ್ವ ಕಾರ್ಮಿಕ ಜೀವಬಿಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ. ಶರಣಬಸವ (40) ಮೃತ ಕಾರ್ಮಿಕ. ಗಾಯಗೊಂಡ ಕಾರ್ಮಿಕ ನಿರುಪಾದಿ ಎಂಬುವವರಿಗೆ ಚಿನ್ನದ ಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ:ಆಟೋ ಡ್ರೈವರ್​ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ

publive-image

2800 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇನ್ನೂ, ಮೃತನ ಕುಟುಂಬಸ್ಥರು ಹಾಗೂ ನೂರಾರು ಕಾರ್ಮಿಕರು ಹಟ್ಟಿ ಚಿನ್ನದ ಗಣಿ ಕಂಪನಿ‌ ಒಳಗೆ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ.

publive-image

ಜೊತೆಗೆ ಒಂದು ಕೋಟಿ ರೂ ಪರಿಹಾರ ನೀಡಬೇಕು, ಪತ್ನಿಗೆ ಗಣಿ ಕಂಪನಿಯಲ್ಲಿ ಕೆಲಸ ನೀಡಬೇಕು ಅಂತ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ಹಟ್ಟಿ ಕಂಪನಿಯೂ 10 ಲಕ್ಷ ರೂ ಪರಿಹಾರ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಜಿ7 ವೃಂದದ ಕೆಲಸ‌ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನೆ ಸ್ಥಗಿತಗೊಳಿಸಿ ಅಂತ ಅಧಿಕಾರಿಗಳು ಕುಟುಂಬಸ್ಥರ ಮನವೊಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment