/newsfirstlive-kannada/media/post_attachments/wp-content/uploads/2025/06/Flight-death.jpg)
ಅಹಮದಾಬಾದ್‌ನಲ್ಲಿ ಸಂಭವಿಸಿರುವ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದಾರೆ. ಪವಾಡ ಸದೃಶ್ಯ ರೀತಿಯಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದ್ದಾರೆ.
ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ಇದುವರೆಗೂ ದೇಶದ ವಿವಿಧೆಡೆ ನಡೆದಿರುವ ವಿಮಾನ ಅಪಘಾತಗಳಲ್ಲಿ ಹಲವು ರಾಜಕೀಯ ನಾಯಕರು ಮೃತಪಟ್ಟಿದ್ದು, ಅವರ ಸಾಲಿಗೆ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ನಿಧನರಾದ 4 ಹಾಲಿ ಹಾಗೂ ಮಾಜಿ ಸಿಎಂಗಳು ಪಟ್ಟಿ ಇಲ್ಲಿದೆ
ವೈ.ಎಸ್. ರಾಜಶೇಖರ್ ರೆಡ್ಡಿ.. ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ್ ರೆಡ್ಡಿ ಅವರು 2009 ಸೆಪ್ಟೆಂಬರ್ 2ರಂದು ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದರು. ವೈ.ಎಸ್. ರಾಜಶೇಖರ್ ರೆಡ್ಡಿ ಅವರು ನಲ್ಲಮಾಲ ಅರಣ್ಯ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿತ್ತು. ಈ ಘಟನೆ ನಡೆದ ಸ್ಥಳದಲ್ಲೇ ವೈ.ಎಸ್.ಆರ್ ಮೃತಪಟ್ಟಿದ್ದರು. ಇವರು ಆಂಧ್ರಪ್ರದೇಶದ ಪ್ರಭಾವಿ ರಾಜಕಾರಣಿ, ಎರಡು ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ತನಿಖೆಯಲ್ಲಿ ಹವಾಮಾನ ವೈಪರಿತ್ಯದಿಂದಲೇ ದುರಂತ ಸಂಭವಿಸಿದೆ ಎಂದು ಸಾಬೀತು ಆಯಿತು.
ದೋರ್ಜಿ ಖಂಡು..ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಅವರು 2011 ಏಪ್ರಿಲ್ 30ರಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ವಿಮಾನ ಹಾರಾಟ ನಡೆಸುತ್ತಿದ್ದಾಗ ಕಾಪ್ಟರ್ ನಿಯಂತ್ರಣ ತಪ್ಪಿ ನಾಪತ್ತೆ ಆಗಿತ್ತು. ಐದು ದಿನಗಳ ನಂತರ ತಂಗಾವ್ ಪರಿಸರದಲ್ಲಿ ಅವಶೇಷಗಳು ಪತ್ತೆಯಾಗಿದ್ದವು.
ಬಲವಂತರಾಯ್ ಮೆಹ್ತಾ.. ಬಲವಂತರಾಯ್ ಮೆಹ್ತಾ ಅವರು ಗುಜರಾತ್‌ನ ಎರಡನೇ ಮುಖ್ಯಮಂತ್ರಿಯಾಗಿದ್ದರು. ಅವರು ದೇಶದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪ್ರವರ್ತಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಸೆಪ್ಟೆಂಬರ್ 19, 1965ರಂದು ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ದುರಂತವಾಗಿ ನಿಧನರಾದರು.
ಸಂಜಯ್ ಗಾಂಧಿ..ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರು 1980ರ ಜೂನ್ 23ರಂದು ನವದೆಹಲಿಯಲ್ಲಿ ನಡೆದ ಲಘುವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ನವದೆಹಲಿಯ ವೈಮಾನಿಕ ನೆಲೆಯಲ್ಲಿ ಸಂಜಯ್ ಗಾಂಧಿ ಅವರೇ ಲಘುವಿಮಾನ ಹಾರಾಟ ಅಭ್ಯಾಸ ಮಾಡುವಾಗಲೇ ದುರಂತ ಸಂಭವಿಸಿತ್ತು. 33 ವರ್ಷದ ಸಂಜಯ್ ಗಾಂಧಿ ಅವರ ಸಾವಿನ ಸುತ್ತ ಹಲವು ಊಹಾಪೋಹಗಳು ಹರಿದಾಡಿದ್ದವು.
ವಿಜಯ್ ರೂಪಾನಿ.. ಗುಜರಾತ್‌ನ ಪ್ರಭಾವಿ ರಾಜಕಾರಣಿಯಾಗಿರುವ ವಿಜಯ್ ರೂಪಾನಿ ಅವರು 2016ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಅಂದಿನ ಸಿಎಂ ಆನಂದಿಬೇನ್ ಪಟೇಲ್ ಅವರ ದಿಢೀರ್ ರಾಜೀನಾಮೆ ಬೆನ್ನಲ್ಲೇ, ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದರು. 2021ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರು. ಆದ್ರೆ ನಿನ್ನೆ ನಡೆದ ಘೋರ ಏರ್ ಇಂಡಿಯ ವಿಮಾನ ಪತನದಲ್ಲಿ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ