/newsfirstlive-kannada/media/post_attachments/wp-content/uploads/2025/01/DIJA-SHARMA.jpg)
ಮಹಾ ಕುಂಭಕ್ಕೆ (Maha Kumbh) ಸಂಬಂಧಿಸಿದಂತೆ ಪ್ರತಿ ದಿನ ಒಂದೊಂದು ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಭಾರೀ ಚರ್ಚೆಗೆ ಕಾರಣವಾಗುತ್ತಿವೆ.
ಮೊದಲು ಐಐಟಿ ಬಾಬಾ ಅಭಯ್ ಸಿಂಗ್ (IIT Baba Abhay Singh) ಬಗ್ಗೆ ಚರ್ಚಿಸಲಾಯಿತು. ನಂತರ ಹರ್ಷ ರಿಚಾರಿಯಾ (Harsha Richhariya) ಮತ್ತು ರುದ್ರಾಕ್ಷಿ ಮಾಲೆ ಮಾರುವ ಹುಡುಗಿ ಮೊನಾಲಿಸಾ (Monalisa), ಮಮತಾ ಕುಲಕರ್ಣಿ (Mamatha Kulakarni) ಮುನ್ನಲೆಗೆ ಬಂದಿದ್ದಿರಿ. ಇದೀಗ ಗಗನಸಖಿ (Air hostess) ಒಬ್ಬರು ಸಾಧ್ವಿಯಾಗಲು ಮಹಾಕುಂಭಗೆ ಪ್ರವೇಶ ಮಾಡಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತದ ದುರಂತದ ಬಳಿಕ ಮಹಾಕುಂಭಮೇಳದಲ್ಲಿ ಹಲವು ಬದಲಾವಣೆ? ಏನೇನು?
ಹೆಸರು ದಿಜಾ ಶರ್ಮಾ (Diza Sharma). ಗಗನ ಸಖಿ ಆಗಿರುವ ಇವರು ಸಾಧ್ವಿಯಾಗಲು ಕುಂಭ ಮೇಳಕ್ಕೆ ಬಂದಿದ್ದಾರೆ. ಕುತ್ತಿಗೆಗೆ ದೊಡ್ಡ, ದೊಡ್ಡ ರುದ್ರಾಕ್ಷಿ ಮಣಿಗಳಿರುವ ಹಾರವನ್ನು ಹಾಕಿ, ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮೇಕ್ಅಪ್ ಧರಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಯಾರು ದಿಜಾ ಶರ್ಮಾ..?
ದಿಜಾ ಶರ್ಮಾ ಸ್ಪೈಸ್ ಜೆಟ್ (Spicejet) ಕಂಪನಿಯಲ್ಲಿ ಗಗನಸಖಿಯಾಗಿದ್ದಾರೆ. ಇವರ ತಾಯಿ ಆರು ತಿಂಗಳ ಹಿಂದೆ ನಿಧನರಾಗಿದ್ದಾರೆ. ಆ ನಂತರದ ನಡೆದ ಬೆಳವಣಿಗೆಗಳಿಂದಾಗಿ ಅವರು ಆಧ್ಯಾತ್ಮಿಕದತ್ತ ಒಲವು ತೋರಿಸಿದ್ದಾರೆ. ಗುಜರಾತ್ ಮೂಲದವರಾದ ಇವರ ವಯಸ್ಸು 29. LinkedIn ಪ್ರೊಫೈಲ್ ಪ್ರಕಾರ M.Com ಮುಗಿಸಿದ್ದಾರೆ. ಕಳೆದ ವರ್ಷದವರೆಗೂ ಅವರು ಕೆಲಸ ಮಾಡುತ್ತಿದ್ದರು. ಕಳೆದ ಆಗಸ್ಟ್ನಲ್ಲಿ ಇವರ ತಾಯಿ ನಿಧನರಾದರು. ತಾಯಿ ಅಗಲಿಕೆಯ ನೋವಿನಲ್ಲಿ ಈ ವೈರಾಗ್ಯಕ್ಕೆ ತಾಳಿದರು. ದಿಜಾಗೆ ತಂದೆ ಇದ್ದಾರೆ. ಸಹೋದರ ಅಮೆರಿಕದಲ್ಲಿ ಪತ್ನಿ ಜೊತೆಯಿದ್ದಾರೆ.
ದೀಜಾ ಶರ್ಮಾ, ತನ್ನನ್ನು ಸಾಧ್ವಿಯನ್ನಾಗಿ ಮಾಡುವಂತೆ ಗುರುಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಹಾಕುಂಭದಲ್ಲಿ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ..
ಇದನ್ನೂ ಓದಿ: ಮಹಾಕುಂಭಮೇಳದಿಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ ಉಚ್ಛಾಟನೆ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ