‘ಲಂಡನ್ ತಲುಪಿ ಫೋನ್ ಮಾಡ್ತೀನಿ ಎಂದಿದ್ದ ಮಗಳು’ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ ಗಗನಸಖಿ

author-image
Veena Gangani
Updated On
‘ಲಂಡನ್ ತಲುಪಿ ಫೋನ್ ಮಾಡ್ತೀನಿ ಎಂದಿದ್ದ ಮಗಳು’ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ ಗಗನಸಖಿ
Advertisment
  • 24 ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಮೈಥಿಲಿ ಮೋರೆಶ್ವರ್ ಪಾಟೀಲ್
  • ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಅಪ್ಪನೊಂದಿಗೆ ಮಾತನಾಡಿ ಗಗನಸಖಿ
  • ಮನೆಗೆ ಆಸರೆಯಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರು

ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.

ಇದನ್ನೂ ಓದಿ: ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!

ಇನ್ನೂ, ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಹಿಂದಿನ ಕಣ್ಣೀರು ತರಿಸೋ ಕಥೆಗಳಿದ್ದು  ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಗುರುವಾರ ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಬಾರದ ಲೋಕಕ್ಕೆ ಬೆಳೆಸಿದ್ದಾಳೆ.

publive-image

ಹೌದು, ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಥಿಲಿ ಮೋರೆಶ್ವರ್ ಪಾಟೀಲ್ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್​ ಇಂಡಿಯಾ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪನ್ವೆಲ್‌ ಮೂಲದ ಏರ್ ಇಂಡಿಯಾ ಗಗನಸಖಿ ಮೈಥಿಲಿ ಪಾಟೀಲ್ 24 ವರ್ಷಕ್ಕೆ ದುರಂತ ಅಂತ್ಯ ಕಂಡಿದ್ದಾರೆ.

ನಿನ್ನೆ ಬೆಳಗ್ಗೆ 11:30ರ ಹೊತ್ತಿಗೆ ಮೈಥಿಲಿ ಅಪ್ಪನೊಂದಿಗೆ ಕೊನೆಯದ್ದಾಗಿ ಮಾತನಾಡಿದ್ದಳು. ಲಂಡನ್‌ಗೆ ತಲುಪಿದ ಕೂಡಲೇ ಕರೆ ಮಾಡುವುದಾಗಿ ತಿಳಿಸಿದ್ದಳು. ಆದ್ರೆ ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಟೇಕಾಫ್‌ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಇದೇ ವಿಮಾನದಲ್ಲಿ ಗಗನ ಸಖಿಯಾಗಿದ್ದ ಮೈಥಿಲಿ ಬದುಕಿನ ದುರಂತ ಅಂತ್ಯ ಕಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಇಡೀ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?

publive-image

ಇನ್ನೂ, ಮೈಥಿಲಿ ಮೋರೆಶ್ವರ್ ಪಾಟೀಲ್​ಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿದ್ದು, ಕುಟುಂಬದಲ್ಲಿ ಹಿರಿಯ ಮಗಳಾಗಿದ್ದರು. ಮೈಥಿಲಿ ಪನವೇಲ್ ತಾಲೂಕಿನ ನಾವಾ ಗ್ರಾಮದ ಟಿ.ಎಸ್.ರೆಹಮಾನ್ ಶಾಲೆಯಲ್ಲಿ 12ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದರು. ಬಾಲ್ಯದಿಂದಲೂ ಏರ್ ಹೋಸ್ಟೆಸ್ ಆಗಬೇಕೆಂಬ ಕನಸು ಕಂಡಿದ್ದರು. ಆದರೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಬಡತನದ ಮಧ್ಯೆಯೂ ಛಲ ಬಿಡದ ಮೈಥಿಲಿ ಶಿಕ್ಷಣ ಪಡೆದಿದ್ದರು. ಎರಡು ವರ್ಷಗಳ ಹಿಂದೆ, ವಿಮಾನಯಾನ ಶಿಕ್ಷಣ ಪೂರ್ಣಗೊಳಿಸಿದ ಅವರು ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment