newsfirstkannada.com

ಮುಂಬೈ ಫ್ಲಾಟ್​​ನಲ್ಲಿ ಗಗನಸಖಿ ಅನುಮಾನಾಸ್ಪದ ಸಾವು; ಕಾರಣವೇನು..?

Share :

Published September 4, 2023 at 5:47pm

    ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಗಗನಸಖಿಯ ಮೃತದೇಹ ಪತ್ತೆ

    ಟ್ರೇನಿಯಾಗಿದ್ದ ಗಗನಸಖಿ ರೂಪಲ್ ಓಗ್ರೇ ನಿಗೂಢ ಸಾವು

    40 ವರ್ಷದ ವ್ಯಕ್ತಿಯನ್ನು ಅರೆಸ್ಟ್​ ಮಾಡಿದ ಪೊಲೀಸ್​ ಅಧಿಕಾರಿ

ಮುಂಬೈ: ಏರ್ ಇಂಡಿಯಾದಲ್ಲಿ ಟ್ರೈನಿಯಾಗಿ ಸೇರ್ಪಡೆಯಾಗಿದ್ದ ಗಗನಸಖಿ ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಅಂಧೇರಿ ನಗರದ ಐಷಾರಾಮಿ ಪ್ಲ್ಯಾಟ್​ನಲ್ಲಿ ನಡೆದಿದೆ. ರೂಪಲ್ ಓಗ್ರೇ ಮೃತಪಟ್ಟ ಗಗನಸಖಿ.

ಛತ್ತೀಸ್‌ಗಢದಿಂದ ಮುಂಬೈಗೆ ಬಂದಿದ್ದ ರೂಪಲ್ ಓಗ್ರೇ ಏರ್ ಇಂಡಿಯಾಗೆ ಆಯ್ಕೆಯಾಗಿದ್ದರು. ಇದೇ ವರ್ಷದ ಏಪ್ರಿಲ್‌ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಇದೇ ಹೊತ್ತಿನಲ್ಲಿ ಫ್ಲಾಟ್‌ನಲ್ಲಿ ರೂಪಲ್ ಓಗ್ರೆ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇನ್ನು ರೂಪಲ್ ಓಗ್ರೇ ಯಾವುದೇ ಫೋನ್​ ಕರೆಗೆ ಸ್ಪಂದಿಸದಿದ್ದಾಗ ಅನುಮಾನಗೊಂಡ ಪೋಷಕರು ಪೊಲೀಸ್​ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಗಗನಸಖಿ ರೂಪಲ್ ಇದ್ದ ಫ್ಲಾಟ್​​ಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಈ ಸಂಬಂಧ ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಹೌಸಿಂಗ್ ಸೊಸೈಟಿಯ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮೃತ ರೂಪಲ್ ಓಗ್ರೇ ತವರು ಮನೆಗೆ ಹೋಗಿದ್ದರು. ತನ್ನ ಸಹೋದರಿ ಮತ್ತು ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಫ್ಲಾಟ್​​ನಲ್ಲಿ ಗಗನಸಖಿ ಅನುಮಾನಾಸ್ಪದ ಸಾವು; ಕಾರಣವೇನು..?

https://newsfirstlive.com/wp-content/uploads/2023/09/death-34.jpg

Load More