/newsfirstlive-kannada/media/post_attachments/wp-content/uploads/2024/10/JOB_AIR_INDIA.jpg)
ಏರ್ ಇಂಡಿಯಾ ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಎಐಎಎಸ್ಎಲ್)ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗ್ರಾಹಕ ಸೇವಾ ಕಾರ್ಯನಿರ್ವಾಹಕ ಸೇರಿ ಇತರೆ 1,600ಕ್ಕೂ ಹೆಚ್ಚು ಹುದ್ದೆಗಳನ್ನ ನೇಮಕಾತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಹುದ್ದೆಗಳ ಅಂತಿಮ ಆಯ್ಕೆಯು ನಿಗದಿತ ಅವಧಿಯ ಒಪ್ಪಂದ ಆಗಿರುತ್ತದೆ. ಈ ಒಪ್ಪಂದ ಮುಗಿದ ಮೇಲೆ ಅಭ್ಯರ್ಥಿಗೆ ಉದ್ಯೋಗ ನೀಡುವುದಿಲ್ಲ. ಈ ಹುದ್ದೆಗೆ ಸಂಬಂಧ ಖಾಲಿ ಹುದ್ದೆಗಳ ಆಧಾರದ ಮೇಲೆ ಅರ್ಹತೆ ಹಾಗೂ ಅಭ್ಯರ್ಥಿಗಳಿಗೆ ಮೀಸಲಾತಿ (ಎಸ್ಸಿ, ಎಸ್ಟಿ, ಒಬಿಸಿ) ನಿಯಮಗಳು ಅನ್ವಯವಾಗುತ್ತವೆ. ಟ್ರೇಡ್ ಟೆಸ್ಟ್ನಲ್ಲಿ ಪಾಸ್ ಆದವರು ಮಾತ್ರ ಸಂದರ್ಶನದ ಸುತ್ತಿಗೆ ಹೋಗುತ್ತಾರೆ.
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂದರ್ಶನದ ವೇಳೆ ಗುಂಪು ಚರ್ಚೆ, ವರ್ಚುವಲ್ ಚರ್ಚೆ ಇರಬಹುದು. ವಾಕ್-ಇನ್ ಸಂದರ್ಶನ ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ನಡೆಸಲಾಗುತ್ತದೆ. ಇದಕ್ಕಾಗಿ ಕೆಳಗೆ ನೀಡಲಾದ ಮಾಹಿತಿ ಗಮನಿಸಿ. ಏರ್ ಇಂಡಿಯಾ ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್‌ನಲ್ಲಿ ಉದ್ಯೋಗ ಮಾಡಲು ಅಭ್ಯರ್ಥಿಯು ಉತ್ಸುಕನಾಗಿದ್ದರೇ ಸಂಸ್ಥೆಯ ಅಧಿಕೃತ ವೆಬ್‌ಸೈಟ್ aiasl.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ ಎಷ್ಟು?
- ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ ಮೂಲಕ 500 ರೂಪಾಯಿ ಪಾವತಿಸಬೇಕು
- ಸಂದರ್ಶನದ ವೇಳೆ ಎಲ್ಲಾ ದಾಖಲೆಗಳ ನಕಲು ಹಾಗೂ ಅರ್ಜಿ ಪ್ರತಿ ತರಬೇಕು
- ಇತ್ತೀಚಿನ ಫೋಟೋಸ್, ಮೂಲ ದಾಖಲಾತಿ ತರಬೇಕಾಗುತ್ತದೆ
ಯಾವ ವಿಮಾನ ನಿಲ್ದಾಣದಲ್ಲಿ ಕೆಲಸಗಳಿವೆ..?
- ಅಹಮದಾಬಾದ್ ಏರ್‌ಪೋರ್ಟ್- 156 ಹುದ್ದೆಗಳು
- ದಾಬೋಲಿಮ್ ವಿಮಾನ ನಿಲ್ದಾಣ- 429 ಜಾಬ್ಸ್
- ಮುಂಬೈ ವಿಮಾನ ನಿಲ್ದಾಣ- 1,067 ಹುದ್ದೆಗಳು
ಸಂದರ್ಶನ ನಡೆಯುವ ಸ್ಥಳಗಳು
- ಮುಂಬೈ ಹುದ್ದೆಗಳಿಗೆ ಸಂಬಧಿಸಿದಂತೆ ವಿಳಾಸ
ಜಿಎಸ್ಡಿ ಕಾಂಪ್ಲೆಕ್ಸ್, ಸಹಾರ ಪೊಲೀಸ್ ಠಾಣೆ
ಸಿಎಸ್ಎಂಐ ಏರ್‌ಪೋರ್ಟ್,
ಟರ್ಮಿನಲ್- 2, ಗೇಟ್ ನಂಬರ್ 05
ಸಹರ್, ಅಂಧೇರಿ ಈಸ್ಟ್, ಮುಂಬೈ- 400-099.
- ದಾಬೋಲಿಮ್ ಹುದ್ದೆಗಳಿಗೆ ಸಂಬಧಿಸಿದಂತೆ ವಿಳಾಸ
ಹೋಟೆಲ್- ದ ಫ್ಲೋರಿಡಾ ಗ್ರ್ಯಾಂಡ್
ವಡ್ಡೆಮ್ ಲೇಕ್,
ವಾಸ್ಕೋ-ಡ-ಗಾಮಾ, ಗೋವಾ- 503802
ಪ್ರಮುಖವಾದ ಲಿಂಕ್- https://static-cdn.publive.online/newsfirstlive-kannada/media/pdf_files/resourcesRecruitment Advertisement for Goa Station - Oct2024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ