ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?

author-image
Ganesh
Updated On
ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
Advertisment
  • ವಿಶ್ವದ ಅತ್ಯುತ್ತಮ ಪ್ರಯಾಣಿಕ ವಿಮಾನಗಳಲ್ಲಿ ಒಂದು
  • 1,26,000 ಲೀಟರ್ ಇಂಧನ ಸಾಮರ್ಥ್ಯ ಹೊಂದಿದ್ದ ವಿಮಾನ
  • 12 ವರ್ಷಗಳ ಹಳೆಯದಾದ ವಿಮಾನ ಇದಾಗಿತ್ತು..

ಅಹ್ಮದಾಬಾದ್​ನಿಂದ ಲಂಡನ್​ಗೆ ಹೊರಟಿದ್ದ ಏರ್​ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ( Boeing 787 Dreamliner) ಘೋರ ದುರಂತಕ್ಕೆ ಒಳಗಾಗಿದೆ. ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಘಾನಿನಗರ ಪ್ರದೇಶದ ಬಿಜೆ ಎಂಬಿಬಿಎಸ್ ಹಾಸ್ಟೆಲ್​​ ಮೇಲೆ ಬಂದು ಅಪ್ಪಳಿಸಿತು. ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರು ಜೀವಬಿಟ್ಟಿದ್ದಾರೆ. ಇನ್ನು, ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ವಿಮಾನ ಅಪಘಾತದಲ್ಲಿ ಆದ ನಷ್ಟ ಎಷ್ಟು..?

ವಿಮಾನ ಪತನಗೊಳ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ವಿಮಾನ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ. 241 ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ವಿಮಾನ ಹಾಸ್ಟೆಲ್​ ಮೇಲೆ ಬಿದ್ದಿದ್ದರಿಂದ ಕಟ್ಟಡಕ್ಕೂ ಸಾಕಷ್ಟು ಹಾನಿಯಾಗಿದೆ. ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ನೀಡೋದಾಗಿ ಟಾಟಾ ಗ್ರೂಪ್ ಘೋಷಣೆ ಮಾಡಿದೆ. ಅಲ್ಲದೇ, ಹಾಸ್ಟೆಲ್​​ನ ನಿರ್ಮಾಣಕ್ಕೆ ಸಹಾಯ ಮಾಡೋದಾಗಿ ತಿಳಿಸಿದೆ. ಜೊತೆಗೆ ಗಾಯಗೊಂಡಿರುವ ಪ್ರತಿಯೊಬ್ಬರಿಗೂ ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ನೆರವು ನೀಡೋದಾಗಿ ಮಾಹಿತಿ ನೀಡಿದೆ.

ಇದನ್ನೂ ಓದಿ: ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್​..

ಡ್ರೀಮ್‌ಲೈನರ್ 787 ವಿಶೇಷತೆಗಳೇನು?

ನಿನ್ನೆ ದುರಂತಕ್ಕೆ ಒಳಗಾದ ವಿಮಾನವು ವಿಶ್ವದ ಅತ್ಯುತ್ತಮ ಪ್ರಯಾಣಿಕ ವಿಮಾನಗಳಲ್ಲಿ ಒಂದು. ಬೋಯಿಂಗ್‌ನ ಡ್ರೀಮ್‌ಲೈನರ್ 787 ವಿಮಾನ ಹಲವು ವಿಶೇಷತೆಗಳನ್ನು ಹೊಂದಿದೆ..

  1. ಉದ್ದ- 56 ಮೀಟರ್
  2.  ಎತ್ತರ- 17 ಮೀಟರ್
  3.  ರೆಕ್ಕೆಯ ಅಗಲ- 60 ಮೀಟರ್
  4.  ಎಂಜಿನ್- 2
  5.  ಇಂಧನ ಸಾಮರ್ಥ್ಯ- 1,26,000 ಲೀಟರ್
  6.  ವ್ಯಾಪ್ತಿ- 13,620 ಕಿ.ಮೀ.
  7.  ವೇಗ- 954 ಕಿಮೀ/ಗಂಟೆಗೆ
  8.  ಆಸನ ಸಾಮರ್ಥ್ಯ- 250+
  9.  ತಯಾರಕ (Manufacturer)- ಬೋಯಿಂಗ್
  10.  ವೆಚ್ಚ- 2.18 ಸಾವಿರ ಕೋಟಿ ರೂಪಾಯಿ
  11.  ಆ ವಿಮಾನ 12 ವರ್ಷ ಹಳೆಯ ವಿಮಾನ

ನಿನ್ನೆ ದುರಂತಕ್ಕೆ ಒಳಗಾದ ವಿಮಾನವು ಸುಮಾರು 12 ವರ್ಷ ಹಳೆಯದಾಗಿತ್ತು. ಅದು ಮಧ್ಯಾಹ್ನ 1.38 ಕ್ಕೆ ಟೇಕ್ ಆಫ್ ಆಗಿ 1.43 ಕ್ಕೆ ಪತನಗೊಂಡಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಟೇಕ್ ಆಫ್ ಆದ 5 ನಿಮಿಷಗಳಲ್ಲಿ ಪತನಗೊಂಡಿದೆ.

ಇದನ್ನೂ ಓದಿ: ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment