ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!

author-image
Ganesh
Updated On
ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!
Advertisment
  • ಟ್ರಾಫಿಕ್​ ಜಾಮ್​.. ಫ್ಲೈಟ್ ಮಿಸ್​.. ಉಳಿಯಿತು ಲೇಡಿ ಜೀವ
  • ವಿಮಾನ ಅಪಘಾತದ ಸುದ್ದಿ ತಿಳಿದು ಮಹಿಳೆಗೆ ಆಘಾತ
  • ಗಣಪತಿ ಬಪ್ಪಾ ಎಂದು ಕೂಗಿ ಕೃತಜ್ಞತೆ ಸಲ್ಲಿಸಿದ ಮಹಿಳೆ

ಅಹ್ಮದಾಬಾದ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡ ಮಹಿಳೆಯೊಬ್ಬರು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿದ್ದಾರೆ. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ವಿಮಾನ ತಪ್ಪಿದ್ದಕ್ಕೆ ನಿರಾಸೆಗೊಂಡಿದ್ದ ಭೂಮಿ, ಇದೀಗ ಇದೇ ತನ್ನ ಜೀವ ಉಳಿಸಿದೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಟ್ರಾಫಿಕ್​ ಜಾಮ್​.. ಫ್ಲೈಟ್ ಮಿಸ್​.. ಉಳಿತು ಲೇಡಿ ಜೀವ

ಟ್ರಾಫಿಕ್​​.. ದಿನನಿತ್ಯ ನಾವು ಬೈತಾ ಇರ್ತೀವಿ.. ಜಾಮ್​ ಆದ್ರೆ ಸರಿಯಾದ ಸಮಯಕ್ಕೆ ಹೋಗಿ ತಲುಪೋದಕ್ಕೆ ಆಗಲ್ಲ.. ಟ್ರಾಫಿಕ್​​ನಲ್ಲಿ ಸಿಲುಕಿದ್ರೆ ಜೀವ ಹೋಗುತ್ತೆ ಅಂತ ಗೊಣಗಾಡ್ತೀವಿ. ಟ್ರಾಫಿಕ್​ ಜಾಮ್ ಅಂತ ಬೈಕೊಳ್ತಿದ್ದ ಮಹಿಳೆಗೆ.. ಅದೇ ಟ್ರಾಫಿಕ್​ ಜೀವ ಉಳಿಸಿದೆ.

ಇದನ್ನೂ ಓದಿ: ಹಾಸ್ಟೆಲ್​​ನಲ್ಲಿದ್ದ 24 ಭಾವಿ ವೈದ್ಯರೂ ಸೇರಿ 265 ಮಂದಿಯ ಜೀವ ತೆಗೆದ ವಿಮಾನ ದುರಂತ..

publive-image

ಅಹ್ಮದಾಬಾದ್‌ನ ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಭೂಮಿ ಚೌಹಾಣ್‌ಗೆ.. ತಾವು ಹತ್ತಬೇಕಿದ್ದ ಲಂಡನ್ ವಿಮಾನ ತಪ್ಪಿಹೋಗುತ್ತದೆಯೇನೋ ಎಂಬ ಆತಂಕ, ಚಡಪಡಿಕೆ ಇತ್ತು. ಎರಡು ವರ್ಷಗಳ ನಂತರ ಭಾರತಕ್ಕೆ ಬಂದು.. ಮತ್ತೆ ಲಂಡನ್‌ನಲ್ಲಿರುವ ಪತಿಯನ್ನ ಸೇರಬೇಕೆಂಬ ತವಕದಲ್ಲಿದ್ದ ಅವರಿಗೆ, ಆ ಟ್ರಾಫಿಕ್ ತೀವ್ರ ಕಿರಿಕಿರಿ ಎನಿಸಿತ್ತು. ಕೊನೆಗೂ ಏರ್‌ಪೋರ್ಟ್‌ ತಲುಪಿದಾಗ ತಿಳಿಯಿತು. ಅವರು ಹತ್ತಬೇಕಿದ್ದ ಏರ್‌ ಇಂಡಿಯಾ ವಿಮಾನ ಎಐ-171 ಟೇಕಾಫ್‌ ಆಗಿದೆ. ಈ ವಿಚಾರ ಅವರಿಗೆ ಭಾರೀ ನಿರಾಸೆ ತಂದಿತ್ತು..

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಮಳೆ ಜೋರು.. ಮಳೆಯ ಆರ್ಭಟಕ್ಕೆ ಯಾವೆಲ್ಲ ಜಿಲ್ಲೆಗಳಲ್ಲಿ ಏನೆಲ್ಲ ಆಗಿದೆ..?

ಆದರೆ, ಕೆಲವೇ ಗಂಟೆಗಳಲ್ಲಿ ಆ ಹತಾಶೆ, ಅವರ ಪಾಲಿಗೆ ಭಯಾನಕ ಆಘಾತವಾಗಿ ಬದಲಾಯಿತು. ಅವರು ಹತ್ತಬೇಕಿದ್ದ ವಿಮಾನ ಟೇಕಾಫ್ ಆದ ಐದೇ ನಿಮಿಷದಲ್ಲಿ ಪತನಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ 241 ಜನರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಒಂದು ಕ್ಷಣ ಮಹಿಳೆ ದಿಕ್ಕೆ ತೋಚದಂತೆ ಮೌನಕ್ಕೆ ಶರಣಾಗಿದ್ದಾರೆ.

ಗಣಪತಿ ಬಪ್ಪಾ ಎಂದು ಘೋಷಣೆ ಕೂಗಿದ ಭಾಗ್ಯ

ಟ್ರಾಫಿಕ್​ನಿಂದ ಲೇಟ್​ ಆಗಿದ್ದಕ್ಕೆ ವಿಮಾನ ಮಿಸ್​ ಆಗಿ ಬೇಸರಗೊಂಡಿದ್ದ ಭೂಮಿ ಚೌಹಾಣ್​, ಟ್ರಾಫಿಕ್ಕಿನಿಂದಲೇ ಜೀವದಾನ ಸಿಕ್ಕಿದೆ. ನನ್ನ ಗಣಪತಿ ಬಪ್ಪಾ ನನ್ನನ್ನ ಉಳಿಸಿದ ಎನ್ನುವಾಗ ಅವರ ದನಿಯಲ್ಲಿ ಕೃತಜ್ಞತಾ ಭಾವ ಕಾಣ್ತಿತ್ತು. ಆದ್ರೆ ಇದೇ ಅದೃಷ್ಟ ಉಳಿದವರಿಗೆ ಇರಲಿಲ್ಲ ಅನ್ನೋದೇ ನೋವಿನ ಸಂಗತಿ.

ಇದನ್ನೂ ಓದಿ: ವಿಜಯ್​ ರೂಪಾನಿ ದುರಂತ ಅಂತ್ಯದಲ್ಲೂ ಒಂದಾದ ಲಕ್ಕಿ ನಂಬರ್.. ಕುಟುಂಬಕ್ಕೆ ಎರಡೆರಡು ಆಘಾತ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment