/newsfirstlive-kannada/media/post_attachments/wp-content/uploads/2025/06/AIR_INDIA_HOSTEL_BOY.jpg)
- ಬಾಲಕ ಕೊನೆ ಉಸಿರು ಬಿಟ್ಟಿರುವುದನ್ನ ಹೇಳಿದೆ ತಂದೆ
- ತಾಯಿ ಓಡಿ ಬಂದ್ರೂ ಮಗ ಹೊರಗಡೆ ಬರಲು ಆಗಲಿಲ್ಲ
- ಹಾಸ್ಟೆಲ್ನಲ್ಲಿದ್ದ ಎಷ್ಟು ವಿದ್ಯಾರ್ಥಿಗಳು ಪ್ರಾಣ ಬಿಟ್ಟಿದ್ದಾರೆ?
ಅಹಮದಾಬಾದ್​ ಏರ್​ಪೋರ್ಟ್​ನಿಂದ ಆಗಸಕ್ಕೆ ನೆಗೆದಿದ್ದ ವಿಮಾನ, ಅಷ್ಟೇ ವೇಗದಲ್ಲಿ ಧರೆಯತ್ತ ನುಗ್ಗಿ ಬೆಂಕಿಯುಂಡೆ ಆಗಿ ಸ್ಫೋಟಿಸಿತ್ತು. ಆ ಸ್ಫೋಟದ ಕೆಳಗೆ ಇದ್ದಿದ್ದು ವಿದ್ಯಾರ್ಥಿಗಳ ಹಾಸ್ಟೆಲ್​​​. ಊಟದ ತಟ್ಟೆ ಮೇಲೆನೆ ಆ ವಿಧಿ ಘೋರ ಬರಹ ಬರೆದು ಬಿಟ್ಟಿತ್ತು. ಪಕ್ಕದ ಗೂಡಂಗಡಿಯಲ್ಲಿ ಮಲಗಿದ್ದ ಬಾಲಕನೂ ಸಹ ವಿಮಾನ ದುರಂತದಲ್ಲಿ ಉಸಿರು ಚೆಲ್ಲಿದ್ದಾನೆ.
ಮಧ್ಯಾಹ್ನದ ಸಮಯ ನೆತ್ತಿ ಸುಡುವಷ್ಟು ಸೂರ್ಯನ ಶಾಖ ಇತ್ತು. ಅದು Excessive Heat. 1 ಗಂಟೆಗೆ ಊಟಕ್ಕಾಗಿ ಹಾಸ್ಟೆಲ್​ನಲ್ಲಿ ಬೆಲ್​​​ ಬಾರಿಸಿತ್ತು. ಸದ್ದು ಕೇಳಿದವರೇ ಮೆಸ್​ನಲ್ಲಿ ಊಟಕ್ಕಾಗಿ ವಿದ್ಯಾರ್ಥಿಗಳ ದಂಡು ಸೇರಿತ್ತು. ಅದಾಗಿ 17 ನಿಮಿಷಗಳಷ್ಟೆ.. ಎಲ್ಲರೂ ಕಣ್ಮುಚ್ಚಿದ್ದಾರೆ.
ಮೃತಪಟ್ಟ ಎಲ್ಲಾ 24 ವಿದ್ಯಾರ್ಥಿಗಳ ಗುರುತು ಪತ್ತೆ
ಇದೇನಾ ವಿಧಿ ಲಿಖಿತ? ಇದನ್ನ ಮ್ಯಾನ್​​ಮೇಡ್​​ ದುರಂತ ಅನ್ಬೇಕಾ. ಬಿಜೆ ಮೆಡಿಕಲ್​​​​ ಕಾಲೇಜ್​​​ ಹಾಸ್ಟೆಲ್​​ ಮೇಲೆ ಬಿದ್ದು ಧಗಧಗಿಸಿದ ವಿಮಾನದಡಿ, ಭವಿಷ್ಯದ ವೈದ್ಯರು ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ವಿಮಾನ ಪತನದಲ್ಲಿ ಮೆಡಿಕಲ್ ಕಾಲೇಜಿನ 24 ವಿದ್ಯಾರ್ಥಿಗಳು ಇನ್ನಿಲ್ಲವಾಗಿದ್ದಾರೆ.
ಮೃತಪಟ್ಟ ಎಲ್ಲಾ 24 ವಿದ್ಯಾರ್ಥಿಗಳ ಗುರುತು ಪತ್ತೆ ಆಗಿದೆ. ಪೋಸ್ಟ್​ಮಾರ್ಟಮ್ ನಡೆಸಿ ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಜೀವ ಕಳೆದುಕೊಂಡವರಲ್ಲಿ ಹಲವು ಅಹಮದಾಬಾದ್​​​ನವರೆ, ಇನ್ನೂ ಕೆಲವರು ಗುಜರಾತ್​ನ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದದವರು. ಅವರ ಹುಟ್ಟೂರಿಗೆ ಮೃತದೇಹ ಸಾಗಿಸಲು ಆಸ್ಪತ್ರೆ ಮುಂದೆ ಌಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿದ್ದವು.
ವಿಮಾನ ದುರಂತದಲ್ಲಿ 14 ವರ್ಷದ ಬಾಲಕ ಆಕಾಶ್​​​​ ದುರ್ಮರಣ
ಆಕಾಶ್ ಎನ್ನುವ ಕೇವಲ 14 ವಯಸ್ಸಿನ ಬಾಲಕ 8ನೇ ತರಗತಿಯ ವಿದ್ಯಾರ್ಥಿ ಆಗಿದ್ದನು. ಏರ್​ ಇಂಡಿಯಾ ವಿಮಾನದ ದುರಂತ ಇವನ ಬಾಳಿನ ಪಯಣವನ್ನೇ ಕಸಿದುಕೊಂಡಿದೆ.
‘ಆಕಾಶ’ದ ದುರಂತ!
- ಬಿಜೆ ಹಾಸ್ಟೆಲ್ ಬಳಿಯ ರಸ್ತೆ ಬದಿಯಲ್ಲಿದೆ ಗೂಡಂಗಡಿ
- ಅಪ್ಪ-ಅಮ್ಮ ಬದುಕಿಗೆ ಕಟ್ಟಿಕೊಂಡ ಸಂಸಾರದ ಬಂಡಿ
- ಹಾಸ್ಟೆಲ್​​ ಜೊತೆ ಅಂಗಡಿ ಮೇಲೂ ಬಿದ್ದಿರೋ ವಿಮಾನ
- ಶಾಖ ತಾಗಿ ಅಂಗಡಿಯಲ್ಲಿದ್ದ ಸಿಲಿಂಡರ್​ ಸಹ ಸ್ಫೋಟ
- ಇದೇ ಅಂಗಡಿಯಲ್ಲಿದ್ದ ಬಾಲಕ ಆಕಾಶ್​, ದುರ್ಮರಣ
ನ್ಯೂಸ್​ಫಸ್ಟ್​​ ಜೊತೆ ಮಾತನಾಡಿದ ಮೃತ ಆಕಾಶ್ ತಂದೆ ಸುರೇಶ್, ಘಟನೆಯ ಮಾಹಿತಿಯನ್ನ ದುಃಖದ ಮಧ್ಯೆ ಎಳೆ ಎಳೆಯಾಗಿ ವಿವರಿಸಿದರು.
ಇದನ್ನೂ ಓದಿ: ಕೊನೆಗೂ ಸಿಕ್ಕಿತು.. ಅಹಮದಾಬಾದ್ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್​ ಬಾಕ್ಸ್
ನನ್ನ ಮಗ ಟಿಫಿನ್ ಬಾಕ್ಸ್ ತೆಗೆದುಕೊಂಡು ತಾಯಿ ಬಳಿಗೆ ಬಂದಿದ್ದನು. ಅವರ ತಾಯಿ ಊಟ ಮಾಡುತ್ತಿದ್ದರು. ಈ ವೇಳೆ ಮಗ ಅಲ್ಲೇ ಪಕ್ಕದಲ್ಲೇ ಮಲಗಿಕೊಂಡಿದ್ದನು. ನಾನು ಆಟೋ ತಗೊಂಡು ಹೊರಗಡೆ ಹೋಗಿದ್ದೆ. ಅಲ್ಲಿಂದ ನೋಡಿದಾಗ ದೊಡ್ಡ ಸ್ಫೋಟವಾಯಿತು. ಹೆಂಡತಿಯನ್ನ ಆ್ಯಂಬುಲೆನ್ಸ್ಗೆ ಹಾಕಿ ಕಳಿಸಿದೇವು. ಮಗನನ್ನು ಹುಡುಕಿದೇವು. ಎಲ್ಲಿಯೂ ಕಾಣಲಿಲ್ಲ.
ಸುರೇಶ್, ಮೃತ ಆಕಾಶ್ ತಂದೆ
ಅಚ್ಚರಿ ಅಂದ್ರೆ ಅದೇ ಅಂಗಡಿ ಬಳಿ ಇದ್ದ ಆಕಾಶ್​​, ದಿಗ್ಗನೆ ಕಾಣಿಸಿದ ಬೆಂಕಿಯ ಹೊಗೆಯಲ್ಲಿ ದಿಕ್ಕೆಟ್ಟು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಆ ದೃಶ್ಯ ಮಾತ್ರ ದುರಂತದ ಭೀಕರತೆ ಬಿಚ್ಚಿಡುತ್ತಿದೆ. ಆದ್ರೆ, ಆ ತಾಯಿಗೂ ಸುಟ್ಟ ಗಾಯಗಳಾಗಿದ್ದು, ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ