ಏರ್​ ಇಂಡಿಯಾ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್​; 140 ಪ್ರಯಾಣಿಕರು ಕಂಗಾಲು; ಕಾರಣವೇನು?

author-image
Ganesh Nachikethu
Updated On
ಏರ್​ ಇಂಡಿಯಾ ‘ಲೋಗೋ’ ಬದಲಾವಣೆ.. ಹೊಸ ಲುಕ್​ನೊಂದಿಗೆ ಸಂಚಾರಕ್ಕೆ ಸಿದ್ಧಗೊಂಡ ವಿಮಾನ..!
Advertisment
  • ದಿಢೀರ್​​ ಏರ್​​ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..!
  • ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​
  • ವಾಯು ಮಾರ್ಗದಲ್ಲೇ ಎಮರ್ಜೆನ್ಸಿ ಲ್ಯಾಂಡಿಂಗ್​ ಘೋಷಣೆ

ಚೆನ್ನೈ: ಏರ್​​ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ವಾಯು ಮಾರ್ಗದಲ್ಲೇ ಎಮರ್ಜೆನ್ಸಿ ಲ್ಯಾಂಡಿಂಗ್​ ಘೋಷಣೆ ಮಾಡಲಾಗಿದೆ. ಈ ವಿಮಾನದಲ್ಲಿ 140 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಭಾರೀ ಆತಂಕದಲ್ಲಿದ್ದಾರೆ.

ಹೈಡ್ರಾಲಿಕ್ ವೈಫಲ್ಯದಿಂದಾಗಿ ವಾಯು ಮಾರ್ಗದಲ್ಲಿಯೇ ಎಮರ್ಜೆನ್ಸಿ ಘೋಷಣೆ ಮಾಡಲಾಗಿತ್ತು. ತಮಿಳುನಾಡಿನ ತಿರುಚ್ಚಿ ವಾಯುಪ್ರದೇಶದಲ್ಲೇ ಏರ್‌ ಇಂಡಿಯಾ ವಿಮಾನ ಹಾರಾಟ ನಡೆಸುತ್ತಿದ್ದು, ಬರೋಬ್ಬರಿ 45 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆಯುತ್ತಿತ್ತು.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್​ ಆಗಿದೆ. ವಿಮಾನದಲ್ಲಿರೋ ಎಲ್ಲರೂ ಸೇಫ್​ ಆಗಿದ್ದಾರೆ ಎಂದು ತಿಳಿದು ಬಂದಿದೆ. ಲ್ಯಾಂಡಿಂಗ್ ಗೇರ್ ಬಳಸದೆಯೇ ವಿಮಾನ ಲ್ಯಾಂಡ್​ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್ ಹಾಗೂ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಮಾಸ್ಟರ್​ ಸ್ಟ್ರೋಕ್​​; 3ನೇ ಟಿ20 ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಔಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment