/newsfirstlive-kannada/media/post_attachments/wp-content/uploads/2025/06/Air_India_Flight_315.jpg)
ಅಹ್ಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾದ ಮತ್ತೊಂದು ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಇದು ಕೂಡ ಬೋಯಿಂಗ್ 787 ವಿಮಾನ ಆಗಿದ್ದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಹೈಡ್ರಾಲಿಕ್ ಲೀಕ್ ಕಾರಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಅಹ್ಮದಾಬಾದ್‌ನಿಂದ ಲಂಡನ್‌ಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ಮೊದಲು AI 171 ವಿಮಾನದ ಹೆಸರು ಅನ್ನು AI 159 ಎಂದು ಬದಲಾವಣೆ ಮಾಡಲಾಗಿತ್ತು.
ದೆಹಲಿಯಿಂದ ಪ್ಯಾರಿಸ್ಗೆ ಹೊರಟಿದ್ದ AI 143 ವಿಮಾನ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದು ಮಾಡಲಾಗಿದೆ.
ಇಂದು ಏರ್ ಇಂಡಿಯಾದ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋನಿಂದ ಬರ್ತಿದ್ದ ವಿಮಾನ ಕೊಲ್ಕತ್ತಾದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಮುಂಬೈಗೆ ತೆರಳುತ್ತಿದ್ದ ವಿಮಾನ ಮಹಾರಾಷ್ಟ್ರದ ಬದಲು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಲ್ಯಾಂಡ್ ಆಗಿದೆ.
ಇದನ್ನೂ ಓದಿ: ಅಹ್ಮದಾಬಾದ್‌ನಲ್ಲಿ ಅದೃಷ್ಟವಶಾತ್ ತಪ್ಪಿತು ಅನಾಹುತ; ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ದೋಷ
ಸಾಲು, ಸಾಲು ದೋಷಗಳ ಹಿನ್ನೆಲೆಯಲ್ಲಿ ಡಿಜಿಸಿಎನಿಂದ ಏರ್ ಇಂಡಿಯಾ ಇಂಜಿನಿಯರಿಂಗ್ ಮುಖ್ಯಸ್ಥರಿಗೆ ಸಮನ್ಸ್ ನೀಡಲಾಗಿದೆ. ಬೋಯಿಂಗ್ 787 ವಿಮಾನದ ದೋಷ ಹಾಗೂ ವಿವಿಧ ವಿಮಾನಗಳ ರದ್ದು ಬಗ್ಗೆ ವಿಚಾರಣೆ ನಡೆಸಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ