/newsfirstlive-kannada/media/post_attachments/wp-content/uploads/2024/10/JOB_AIR_INDIA_2.jpg)
ಕಳೆದ ವಾರ ಅಹ್ಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಘನಘೋರ. ಜನಮಾನಸದಲ್ಲಿ ಮರೆಯಲಾಗದ ಕಹಿ ಘಟನೆ. ಈ ದುರಂತ ಏರ್ ವಿಮಾನಗಳನ್ನ ಏರಲು ಪ್ರಯಾಣಿಕರು ಒಮ್ಮೆ ಯೋಚಿಸುವಂತೆ ಮಾಡಿದೆ. ಈ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಗಳ ಹಾರಾಟಗಳಲ್ಲಿ ವ್ಯತ್ಯಯ ಆಗುತ್ತಿದ್ದು ಪ್ರಯಾಣಿಕರನ್ನು ಕಂಗಾಲಾಗಿಸಿದೆ.
ಅಹ್ಮದಾಬಾದ್ ವಿಮಾನ ದುರಂತ ಬೆನ್ನಲ್ಲೇ ಏರ್ ಇಂಡಿಯಾದಲ್ಲಿ ಪದೇ ಪದೇ ದೋಷ ಕಂಡು ಬರ್ತಿದೆ. ಇವತ್ತು ಸಾಲು ಸಾಲು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಆಗಿದೆ. ಇವತ್ತು 6 ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದಾಗಿವೆ. ಜೊತೆಗೆ ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ನಾಗಪುರದಲ್ಲಿ ಇಳಿದ್ರೆ ಸ್ಯಾನ್ಸ್ಫ್ರಾನ್ಸಿಸ್ಕೋದಿಂದ ಮುಂಬೈಗೆ ಬರ್ತಿದ್ದ ವಿಮಾನ ಕೋಲ್ಕತ್ತಾದಲ್ಲಿ ಇಳಿದಿದೆ.
ಏರ್ ಇಂಡಿಯಾದ 5 ವಿಮಾನಗಳ ಹಾರಾಟ ರದ್ದು
ವಿಮಾನಗಳಲ್ಲಿ ತಾಂತ್ರಿಕ ದೋಷ.. ಹಾರಾಟ ಸ್ಥಗಿತ
ಅಹ್ಮದಾಬಾದ್ ದುರಂತ ಬಳಿಕ ಏರ್ ಇಂಡಿಯಾ ವಿಮಾನಯಾನದ ಮೇಲೆ ಒಂಥರಾ ಗ್ರಹಣ ಕವಿದಂತೆ ಕಾಣಿಸ್ತಿದೆ. ಇವತ್ತು ಏರ್ ಇಂಡಿಯಾದ 5 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಹಾರಾಟ ರದ್ದುಪಡಿಸಲಾಗಿದೆ. ಮೊದಲಿಗೆ ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟ್ಟಿದ್ದ ಮತ್ತೊಂದು ವಿಮಾನ ಸಂಚಾರ ರದ್ದಾಗಿದೆ. ಇದು ಕೂಡ ಬೋಯಿಂಗ್ 787 ವಿಮಾನ ಆಗಿದ್ದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೂ ಮುನ್ನ ದೆಹಲಿಯಿಂದ ಪ್ಯಾರಿಸ್ಗೆ ಹೊರಟಿದ್ದ AI 143 ವಿಮಾನದಲ್ಲಿ ಹೈಡ್ರಾಲಿಕ್ ಲೀಕ್ ಆಗಿದ್ರಿಂದ ಹಾರಾಟ ಸ್ಥಗಿತಗೊಂಡಿದೆ.
ಲಂಡನ್-ಅಮೃತಸರ ವಿಮಾನ ಸಂಚಾರ ಸ್ಥಗಿತ
ಮತ್ತೊಂದೆಡೆ ಲಂಡನ್ ಗಟವಿಕ್ ಟು ಅಮೃತಸರ ವಿಮಾನ ಸಂಚಾರ ಕೂಡ ಸ್ಥಗಿತ ಆಗಿದೆ. ತಾಂತ್ರಿಕದೋಷದಿಂದಾಗಿ ಸಂಚಾರ ರದ್ದಾಗಿದೆ. ಇತ್ತ ದೆಹಲಿ-ರಾಂಚಿ ವಿಮಾನ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯಿಂದ ಪುನಃ ದೆಹಲಿಗೆ ವಾಪಸ್ ಆಗಿದೆ.
ಸ್ಯಾನ್ಫ್ರಾನ್ಸಿಸ್ಕೋ-ಮುಂಬೈ ಫ್ಲೈಟ್ ಡೈವರ್ಟ್!
ಮತ್ತೊಂದು ವಿಮಾನ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಿಂದ ಮುಂಬೈನಲ್ಲಿ ಇಳಿಯಬೇಕಿದ್ದ ವಿಮಾನ ಡೈವರ್ಟ್ ಆಗಿದೆ. ವಿಮಾನದ ಒಂದು ಎಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಮುಂಬೈ ಬದಲು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ಲಂಡನ್ ವಿಮಾನ ರದ್ದು ಕುರಿತು ಏರ್ ಇಂಡಿಯಾ ಸ್ಪಷ್ಟನೆ
ವಿಮಾನಗಳ ಕೊರತೆಯಿಂದ ರದ್ದು ಎಂದ ಏರ್ ಇಂಡಿಯಾ
ಲಂಡನ್ಗೆ ತೆರಳಬೇಕಿದ್ದ ವಿಮಾನ ರದ್ದಿಗೆ ತಾಂತ್ರಿಕ ದೋಷ ಕಾರಣ ಅಲ್ಲ ಅಂತ ಏರ್ಇಂಡಿಯಾ ಸ್ಪಷ್ಟನೆ ನೀಡಿದೆ. ಫ್ಲೈಟ್ ಕೊರತೆಯ ಕಾರಣದಿಂದ ವಿಮಾನ ಸಂಚಾರ ರದ್ದುಪಡಿಸಲಾಗಿದ್ದು ಪ್ರಯಾಣಿಕರು ಬಯಸಿದ್ರೆ ರೀಫಂಡ್ ಮಾಡ್ತೀವಿ ಅಂತ ಹೇಳಿದೆ.
ಮತ್ತೊಂದೆಡೆ ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಮಹಾರಾಷ್ಚ್ರದ ನಾಗಪುರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರು ಸೇಫ್ ಆಗಿದ್ದಾರೆ. ವಿಮಾನ ಟೇಕಾಫ್ ಆದ 20 ನಿಮಿಷಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದ ನಾಗಪುರದಲ್ಲಿ ಲ್ಯಾಂಡ್ ಮಾಡಿ ತಪಾಸಣೆ ನಡೆಸಲಾಗಿದೆ. ಈ ಮಧ್ಯೆ ಬೆಂಗಳೂರಿನಿಂದ ಲಂಡನ್ಗೆ ಹೊರಟಿದ್ದ ಏರ್ಇಂಡಿಯಾ ವಿಮಾನ ಸಂಚಾರ ಕೂಡ ರದ್ದಾಗಿದೆ.
ಇದನ್ನೂ ಓದಿ: ಅಹ್ಮದಾಬಾದ್‌ನಲ್ಲಿ ಅದೃಷ್ಟವಶಾತ್ ತಪ್ಪಿತು ಅನಾಹುತ; ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ದೋಷ
ಅಹ್ಮದಾಬಾದ್ ದುರಂತ ಬಳಿಕ ವಿಮಾನಗಳಲ್ಲಿ ಸೇಫ್ಟಿ ಚೆಕ್ಕಿಂಗ್ ನಡೆಯುತ್ತಿರುವ ಕಾರಣ ವಿಮಾನಗಳು ವಿಳಂಬ ಆಗ್ತಿದೆ ಎನ್ನಲಾಗಿದೆ. ಇವತ್ತು ಸಾಲು, ಸಾಲು ವಿಮಾನಗಳಲ್ಲಿ ದೋಷ ಹಿನ್ನೆಲೆ ಡಿಜಿಸಿಎನಿಂದ ಏರ್ ಇಂಡಿಯಾಗೆ ಸಮನ್ಸ್ ನೀಡಲಾಗಿದೆ. ಬೋಯಿಂಗ್ 787 ವಿಮಾನದ ದೋಷ ಹಾಗೂ ವಿವಿಧ ವಿಮಾನಗಳ ರದ್ದು ಬಗ್ಗೆ ವಿಚಾರಣೆ ನಡೆಸಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ