/newsfirstlive-kannada/media/post_attachments/wp-content/uploads/2025/06/Air-India-flight-9.jpg)
ಗುಜರಾತ್ನ ಅಹ್ಮದಾಬಾದ್ನಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ದಲ್ಲಿ ಪತನಗೊಂಡಿದೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 133ಕ್ಕೆ ಏರಿಕೆ.. ಮತ್ತಷ್ಟು ಪ್ರಾಣಹಾನಿಯ ಆತಂಕ..
ಹಾಸ್ಟೆಲ್ ಮೇಲೆ ಪತನ
ವಿಮಾನವು ಮೇಘನಿನಗರದಲ್ಲಿರುವ ಮೆಡಿಕಲ್ ಕಾಲೇಜನ್ ಹಾಸ್ಟೆಲ್ (medical college) ಮೇಲೆ ಪತನಗೊಂಡಿದೆ. ವಿಮಾನ ಪತನಕ್ಕೆ ಸಂಬಂಧಿಸಿದ ನೂರಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: 625 ಅಡಿ ಎತ್ತರದಿಂದ ಮನೆ ಮೇಲೆ ಬಿದ್ದ ವಿಮಾನ.. ಭಯಾನಕ ವಿಡಿಯೋ ಹೇಗಿದೆ..? Video
ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ವಿಮಾನ ದುರಂತದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿದೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 133ಕ್ಕೆ ಏರಿಕೆ.. ಮತ್ತಷ್ಟು ಪ್ರಾಣಹಾನಿಯ ಆತಂಕ..
242 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಂದು ಕೆನಡಾ, ಪೋರ್ಚುಗಿಸ್ ಪ್ರಜೆಗಳು ವಿಮಾನದಲ್ಲಿದ್ದರು.
ಇದನ್ನೂ ಓದಿ: ಮಾಜಿ CM ವಿಜಯ್ ರೂಪಾನಿ ಕೂಡ ಇದ್ದರು.. ಪತನಗೊಂಡ ವಿಮಾನ ಎಲ್ಲಿಂದ ಎಲ್ಲಿಗೆ ಹೋಗ್ತಿತ್ತು..?
ಹಾಸ್ಟೆಲ್ನ ಕ್ಯಾಂಟೀನ್ನಲ್ಲಿದ್ದ ಪ್ಲೇಟ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾನಿಗೊಳಗಾದ ದೃಶ್ಯವನ್ನು ಅನೇಕರು ನಿಂತು ನೋಡುತ್ತಿರುವ ಫೋಟೋಗಳು ವೈರಲ್ ಆಗಿವೆ..
ಇದನ್ನೂ ಓದಿ: BREAKING: ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ
ಪ್ರಯಾಣಿಕರ ಯೋಗಕ್ಷೇಮ ವಿಚಾರಣೆಗಾಗಿ ಏರ್ ಇಂಡಿಯಾ ಹಾಟ್ಲೈನ್ ನಂಬರ್ 1800 5691 444 ತೆರೆದಿದೆ..
ಇದನ್ನೂ ಓದಿ: ಅನುಭವಿ ಪೈಲೆಟ್ಗಳೇ ಇದ್ದರು.. Mayday ಕರೆ ಬಂದ ಕೆಲವೇ ಕ್ಷಣದಲ್ಲಿ ಎಲ್ಲವೂ ಸ್ಥಬ್ಧ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ