ಏರ್‌ ಇಂಡಿಯಾ ವಿಮಾನ ದುರಂತ.. ಇದುವರೆಗೂ 163 ಮಂದಿ ಗುರುತು ಪತ್ತೆ; ಇಂದು ಕುಟುಂಬಸ್ಥರಿಗೆ ಹಸ್ತಾಂತರ

author-image
admin
Updated On
ಏರ್‌ ಇಂಡಿಯಾ ವಿಮಾನ ದುರಂತ.. ಇದುವರೆಗೂ 163 ಮಂದಿ ಗುರುತು ಪತ್ತೆ; ಇಂದು ಕುಟುಂಬಸ್ಥರಿಗೆ ಹಸ್ತಾಂತರ
Advertisment
  • ಇಲ್ಲಿಯವರೆಗೂ 124 ಮಂದಿ ಪಾರ್ಥೀವ ಶರೀರಗಳು ಹಸ್ತಾಂತರ
  • ಡಿಎನ್‌ಎ ಪರೀಕ್ಷೆ ಮೂಲಕ 163 ಮಂದಿಯ ಗುರುತು ಪತ್ತೆಯಾಗಿದೆ
  • ಗಾಯಗೊಂಡಿದ್ದ 71 ಮಂದಿಯ ಪೈಕಿ ಇಬ್ಬರು ಆಸ್ಪತ್ರೆಯಲ್ಲಿ ಸಾವು

ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ನಡೆದು 6 ದಿನಗಳೇ ಕಳೆದಿದೆ. ಇದುವರೆಗೂ ಡಿಎನ್‌ಎ ಪರೀಕ್ಷೆ ಮೂಲಕ 163 ಮಂದಿಯ ಗುರುತು ಪತ್ತೆಯಾಗಿದೆ. ಒಟ್ಟು 270 ಮಂದಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದು, ಡಿಎನ್ಎ ಸ್ಯಾಂಪಲ್ ಮ್ಯಾಚಿಂಗ್ ಪ್ರಕ್ರಿಯೆ ಮುಂದುವರಿದಿದೆ.

ವಿಮಾನ ದುರಂತದಲ್ಲಿ ಮಡಿದವರ ಪೈಕಿ ನಿನ್ನೆ ಸಂಜೆಯವರೆಗೂ 163 ಮಂದಿ ಗುರುತು ಪತ್ತೆಯಾಗಲು ಸಾಧ್ಯವಾಗಿತ್ತು. ಇಲ್ಲಿಯವರೆಗೂ 124 ಮಂದಿಯ ಪಾರ್ಥೀವ ಶರೀರಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ.

publive-image

ಬಾಕಿ ಇರುವ 39 ಪಾರ್ಥೀವ ಶರೀರದ ಪೈಕಿ 21 ಅನ್ನು ಇಂದು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 71 ಮಂದಿಯ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ವಿಮಾನ ಪತನದ ದುರುಂತದಲ್ಲಿ ಗಾಯಗೊಂಡವರ ಪೈಕಿ ಇದುವರೆಗೂ 42 ಮಂದಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment