ವಿಡಿಯೋ ನೋಡಿ 5 ಪ್ರಶ್ನೆ ಎತ್ತಿದ ತಜ್ಞರು.. ಏರ್​ ಇಂಡಿಯಾ ವಿಮಾನ ಪತನ ಆಗಿದ್ದು ಏಕೆ..?

author-image
Ganesh
Updated On
ವಿಡಿಯೋ ನೋಡಿ 5 ಪ್ರಶ್ನೆ ಎತ್ತಿದ ತಜ್ಞರು.. ಏರ್​ ಇಂಡಿಯಾ ವಿಮಾನ ಪತನ ಆಗಿದ್ದು ಏಕೆ..?
Advertisment
  • ಅಹ್ಮದಾಬಾದ್​ನಲ್ಲಿ ವಿಮಾನ ಘೋರ ದುರಂತ
  • ಅಪಘಾತದ ಅಂತಿಮ ವರದಿ ಯಾವಾಗ ಬರುತ್ತದೆ?
  • 265 ಮಂದಿ ದುರಂತದಲ್ಲಿ ಜೀವ ಬಿಟ್ಟಿದ್ದಾರೆ

ಅಹ್ಮದಾಬಾದ್​ ವಿಮಾನ ಅಪಘಾತದಲ್ಲಿ 265 ಮಂದಿ ಜೀವ ಕಳೆದುಕೊಂಡಿದ್ದಾರೆ. ಬೆನ್ನಲ್ಲೇ ಏರ್ ಇಂಡಿಯಾದ AI-171 ದುರಂತಕ್ಕೆ ಸಂಬಂಧಿಸಿದ ಎರಡು ಕಿರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೆನ್ನಲ್ಲೇ ಕೆಲವು ಕಮರ್ಷಿಯಲ್ ವಿಮಾನವನ್ನು ಹಾರಿಸಿದ ತಜ್ಞರು ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ‘ಅಮ್ಮನಿಗೆ ಊಟ ಕೊಡಲು ಹೋಗಿದ್ದ’ ವಿಮಾನ ದುರಂತದಲ್ಲಿ ಮುಗ್ಧ ಬಾಲಕ ಬಲಿ

1. ಲ್ಯಾಂಡಿಂಗ್ ಗೇರ್ ಅನ್ನು ಏಕೆ ಹಿಂತೆಗೆದುಕೊಳ್ಳಲಿಲ್ಲ?
2. ವಿಮಾನದ ಎರಡೂ ಎಂಜಿನ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವೇ?
3. ಇಂಧನ ಮಾಲಿನ್ಯ ಅಥವಾ ಅಡಚಣೆಯಿಂದಾಗಿ ಎಂಜಿನ್‌ಗಳು ವಿಫಲವಾದವೇ?
4. ಟೇಕ್ ಆಫ್‌ಗಾಗಿ ರೆಕ್ಕೆ ಫ್ಲಾಪ್‌ಗಳನ್ನು ಕೆಳಕ್ಕೆ ಇಳಿಸಲಾಗಿದೆಯೇ?
5. ಹಕ್ಕಿ ಡಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆಯೇ?

ಅಪಘಾತದ ಅಂತಿಮ ವರದಿ ಯಾವಾಗ ಬರುತ್ತದೆ?

ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ (AI-171) ಅಪಘಾತದ ವಿವರವಾದ ತನಿಖಾ ವರದಿ ಮುಂದಿನ ವರ್ಷ ಜೂನ್ 12ಕ್ಕೂ ಮೊದಲು ಬರುವ ನಿರೀಕ್ಷೆ ಇದೆ. ಅಂತಿಮ ವರದಿ ಬಂದ ಬಳಿಕ ವಿಮಾನ ಅಪಘಾತಕ್ಕೆ ನಿಖರ ಕಾರಣಗಳು ಗೊತ್ತಾಗಲಿದೆ.

ವಾಯು ಸುರಕ್ಷತಾ ತಜ್ಞರು ಏನು ಹೇಳಿದರು?

ಏರ್​ ಸೇಫ್ಟಿ ಎಕ್ಸ್​ಪರ್ಟ್​ ಅಮಿತ್ ಸಿಂಗ್ (Aviation safety analyst Amit Singh) ಪ್ರಕಾರ.. ವಿಮಾನ ಟೇಕ್ ಆಫ್ ಆದ 5 ಸೆಕೆಂಡುಗಳ ಒಳಗೆ ಪೈಲಟ್‌ಗಳು ಸಾಮಾನ್ಯವಾಗಿ ಲ್ಯಾಂಡಿಂಗ್ ಗೇರ್ ಮೇಲಕ್ಕೆ ಎತ್ತುತ್ತಾರೆ. ಸಕರಾತ್ಮಕ ಹಾರಾಟ ಸಾಧಿಸಿದ ಕೂಡಲೇ ಲ್ಯಾಂಡಿಂಗ್ ಗೇರ್ ಅನ್ನು ರಿವರ್ಸ್​ ತೆಗೆದುಕೊಳ್ಳಲಾಗುತ್ತದೆ..

ಲ್ಯಾಂಡಿಂಗ್ ಗೇರ್ ಕಡಿಮೆ ಮಾಡೋದ್ರಿಂದ ಡ್ರ್ಯಾಗ್ ಮತ್ತು ಇಂಧನ ಬಳಕೆ ಹೆಚ್ಚಾಗುತ್ತದೆ. ಆದರೆ ವಿಮಾನವು ವೇಗವನ್ನು ಕಳೆದುಕೊಳ್ಳುತ್ತದೆ.. ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳುವುದರಿಂದ ವಿಮಾನವು ಗಾಳಿಯಲ್ಲಿ ವೈಜ್ಞಾನಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದರಿಂದ ವಿಮಾನವು ಗಾಳಿಯಲ್ಲಿ ಎತ್ತರಕ್ಕೆ ಏರಲು ಸಹಾಯ ಆಗಲಿದೆ. ಆದರೆ ವೈರಲ್ ವೀಡಿಯೊ ಕ್ಲಿಪ್ ಪ್ರಕಾರ, ವಿಮಾನವು ನೆಲದಿಂದ 400 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಏರಿದ ನಂತರವೂ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲಾಗಿಲ್ಲ ಎಂದು ವಾದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment