Advertisment

ವಿಮಾನ ದುರಂತದಿಂದ ಪಾರಾಗಿದ್ದ ವಿಶ್ವಾಸ್ ಕುಮಾರ್ ಡಿಸ್ಚಾರ್ಜ್.. ದುಃಖದಲ್ಲೇ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿ

author-image
Bheemappa
Updated On
ವಿಮಾನ ದುರಂತದಿಂದ ಪಾರಾಗಿದ್ದ ವಿಶ್ವಾಸ್ ಕುಮಾರ್ ಡಿಸ್ಚಾರ್ಜ್.. ದುಃಖದಲ್ಲೇ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿ
Advertisment
  • ದೊಡ್ಡ ದುರಂತದಿಂದ ಬದುಕಿ ಬಂದಿದ್ದ ವಿಶ್ವಾಸ್ ಕುಮಾರ್
  • ಜೂನ್ 12 ರಂದು ಏರ್​ ಇಂಡಿಯಾ ವಿಮಾನ ಪತನವಾಗಿತ್ತು
  • ತೀವ್ರ ದುಃಖದಲ್ಲೇ ತಮ್ಮನ ಅಂತ್ಯಕ್ರಿಯೆಯಲ್ಲಿ ಅಣ್ಣ ಭಾಗಿ

ನವದೆಹಲಿ: ಅಹಮದಾಬಾದ್ ವಿಮಾನ ಪತನಗೊಂಡ ವೇಳೆ 242 ಪ್ರಯಾಣಿಕರು ಜೀವ ಉಸಿರು ಚೆಲ್ಲಿದ್ದರು. ಈ ಪೈಕಿ ಓರ್ವ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಎನ್ನುವರು ಮಾತ್ರ ಬದುಕುಳಿದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಇದೀಗ ವಿಶ್ವಾಸ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

Advertisment

publive-image

ಏರ್​ ಇಂಡಿಯಾ ವಿಮಾನ ಬೆಂಕಿಯಿಂದ ಧಗಧಗಿಸುತ್ತಿದ್ದರೂ ಅದರಿಂದ ಪಾರಾಗಿದ್ದ ವಿಶ್ವಾಸ್ ಕುಮಾರ್ ಅವರು ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದರು. ಈ ವೇಳೆ ಅವರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದರಿಂದ ಆಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಪ್ರಧಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಶ್ವಾಸ್ ಅವರ ಆರೋಗ್ಯ ವಿಚಾರಣೆ ಮಾಡಿದ್ದರು. ಇದೀಗ ವಿಶ್ವಾಸ್ ಕುಮಾರ್ ರಮೇಶ್ ಅಹಮದಾಬಾದ್​​ನ ಸಿವಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಾಕ್ಟರ್ ರಾಕೇಶ್​ ಜೋಶಿ ತಿಳಿಸಿದ್ದಾರೆ.

ಮೂಲತಹ ಕೇಂದ್ರಾಡಳಿತ ಪ್ರದೇಶ ಡಿಯು ಮೂಲದ ವಿಶ್ವಾಸ್ ಕುಮಾರ್ ರಮೇಶ್ ಅವರು ವಿಮಾನದ ಸೀಟ್​ ನಂಬರ್ 11ಎ ನಲ್ಲಿ ಕುಳಿತ್ತಿದ್ರೆ ಇವರ ಜೊತೆ ಸಹೋದರ ಅಜಯ್ 11ಜೆರಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಆದರೆ ವಿಮಾನ ದುರಂತದಲ್ಲಿ ಅಜಯ್ ಪ್ರಾಣ ಬಿಟ್ಟಿದ್ದರು. ಮೃತದೇಹ ಗುರುತು ಪತ್ತೆ ಹಚ್ಚಲು ಡಿಎನ್​ಎ ಟೆಸ್ಟ್ ಮಾಡಲಾಗಿತ್ತು. ಬಳಿಕ ಇಂದು ಮಧ್ಯಾಹ್ನ 2 ಗಂಟೆ 10 ನಿಮಿಷಕ್ಕೆ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು. ಸಹೋದರ ಅಜಯ್ ಅಂತ್ಯಕ್ರಿಯೆ ವೇಳೆ ವಿಶ್ವಾಸ ಕುಮಾರ್ ಅವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಕೇದಾರನಾಥ ಯಾತ್ರಿಕರ ಮೇಲೆ ಉರುಳಿ ಬಿದ್ದ ಬಂಡೆಗಳು.. ಜೀವ ಬಿಟ್ಟ ಇಬ್ಬರು, ಮೂವರು ಗಂಭೀರ

Advertisment

publive-image

ಲಂಡನ್​ನ ಲೀಸೆಸ್ಟರ್‌ನ 40ರ ಹರೆಯದ ಬ್ರಿಟಿಷ್ ಉದ್ಯಮಿ ವಿಶ್ವಾಸ್ ಕುಮಾರ್ ಹಾಗೂ ಸಹೋದರ ಅಜಯ್ ಅವರು ಕೇಂದ್ರಾಡಳಿತ ಪ್ರದೇಶ ದಿಯುನಲ್ಲಿರುವ ತಮ್ಮ ಕುಟುಂಬಸ್ಥರನ್ನು ಮಾತಾಡಿಸಲು ಬಂದಿದ್ದರು. ಸ್ವಲ್ಪ ಸಮಯ ಅವರೊಂದಿಗೆ ಕಳೆದು ಮತ್ತೆ ಅಹಮದಾಬಾದ್​ನಿಂದ ಲಂಡನ್​ಗೆ ವಾಪಸ್ ಆಗುತ್ತಿದ್ದರು. ಇದೇ ಸಮಯದಲ್ಲಿ ವಿಮಾನ ಪತನಗೊಂಡು 242 ಪ್ರಯಾಣಿಕರ ಜೊತೆ ಅಜಯ್ ಕೂಡ ಪ್ರಾಣ ಬಿಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment