/newsfirstlive-kannada/media/post_attachments/wp-content/uploads/2025/06/CYBER_ATTACK_NEW.jpg)
ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ( Boeing 787 Dreamliner) ಘೋರ ದುರಂತಕ್ಕೆ ಒಳಗಾಗಿದೆ. ಜೂನ್ 12ರ ಮಧ್ಯಾಹ್ನ 1.38ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮಘಾನಿನಗರ ಪ್ರದೇಶದ ಬಿಜೆ ಎಂಬಿಬಿಎಸ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿತು. ಪರಿಣಾಮ ವಿಮಾನದಲ್ಲಿದ್ದ 241 ಪ್ರಯಾಣಿಕರು ಹಾಗೂ ಹಾಸ್ಟೆಲ್ನಲ್ಲಿದ್ದ 24 ವೈದ್ಯ ವಿದ್ಯಾರ್ಥಿಗಳು ಜೀವಬಿಟ್ಟಿದ್ದಾರೆ. ಇದರಲ್ಲಿ ಓರ್ವ ಪ್ರಯಾಣಿಕ ಪವಾಡ ರೀತಿಯಲ್ಲಿ ಬದುಕಿ ಬಂದಿದ್ದಾರೆ.
265 ಜನರ ಜೀವ ಹೋದ ಬೆನ್ನಲ್ಲೇ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆಯೇ? ನಿರ್ಲಕ್ಷ್ಯದಿಂದಾಗಿ ಪತನವಾಗಿದೆಯೇ? ಅಥವಾ ದೇಶದ ವಿರುದ್ಧ ಪಿತೂರಿ ಹೊಂದಿರೋರು ಯಾರಾದರೂ ಸೈಬರ್ ದಾಳಿ ನಡೆಸಿ ಉರುಳಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.
ಟೇಕ್ ಆಫ್ ಆಗುವ ಮೊದಲೇ ತಾಂತ್ರಿಕ ದೋಷವಿತ್ತಾ? ಅದನ್ನು ಸರಿಪಡಿಸಲಿಲ್ಲವಾ? ಅಥವಾ ವಿಮಾನ ಇದ್ದಕ್ಕಿದ್ದಂತೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆಯೇ? ಪೈಲಟ್ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯವಿದೆಯೇ? ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಒಂದು ವರದಿಯ ಪ್ರಕಾರ ಟೇಕ್ ಆಫ್ ಸಮಯದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಶೇಕಡಾ 65 ರಷ್ಟು ಮಾನವ ನಿರ್ಮಿತ ದೋಷದಿಂದಾಗಿವೆ. ಹೀಗಾಗಿ ಪಿತೂರಿಯ ದೃಷ್ಟಿ ಕೋನದ ಸುತ್ತಲೂ ಅನುಮಾನ ಶುರುವಾಗಿದೆ.
ಸೈಬರ್ ದಾಳಿ ಶಂಕೆ ಮೇಲೆ ತನಿಖೆ..
ವಿಮಾನ ಅಪಘಾತದಲ್ಲಿ ಸೈಬರ್ ದಾಳಿ ಪಾತ್ರ ಇದೆಯಾ? ಈ ಪ್ರಶ್ನೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂತ್ರಸ್ತರಿಗೆ ಭಾರತ ಸಹಾಯ ಮಾಡಲು ಏಪ್ರಿಲ್ 2025ರಲ್ಲಿ ಆಪರೇಷನ್ ಬ್ರಹ್ಮ ಪ್ರಾರಂಭಿಸಿತ್ತು. ಈ ವೇಳೆ ವಾಯುಪಡೆ ವಿಮಾನದ ಮೇಲೆ ಸೈಬರ್ ದಾಳಿ ನಡೆದ ಪುರಾವೆಗಳು ಕಂಡು ಬಂದಿವೆ. ನಂತರ ಪೈಲಟ್‌ಗಳು ಬ್ಯಾಕಪ್ ವ್ಯವಸ್ಥೆಯೊಂದಿಗೆ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ ಅಳಿಯನ ಜೊತೆ IPL ತಂಡದ ಓನರ್ ಕಾವ್ಯಾ ಮಾರನ್ ಮದುವೆ ಫಿಕ್ಸ್..?
ಅದೇ ರೀತಿ ಸೆಪ್ಟೆಂಬರ್ 19, 2016 ರಂದು, ಅಟ್ಲಾಂಟಿಕ್ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 757 ವಿಮಾನದ ಆಪರೇಟಿಂಗ್ ಸಿಸ್ಟಮ್ ಹ್ಯಾಕ್ ಮಾಡಲಾಯಿತು. ಸ್ವಲ್ಪ ಸಮಯದ ನಂತರ ವಿಮಾನ ಕಂಟ್ರೂಲ್ಗೆ ಸಿಕ್ಕಿತು. ಹಾಗಾಗಿ ಅಹ್ಮದಾಬಾದ್ ವಿಮಾನ ಅಪಘಾತದಲ್ಲಿ ಸೈಬರ್ ದಾಳಿಯ ನಡೆದಿದೆಯೇ ಅನ್ನೋ ಆ್ಯಂಗಲ್ನಲ್ಲೂ ತನಿಖೆಯ ಅಗತ್ಯ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ