ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್‌​​ ನೀಡದ ಏರ್​ ಇಂಡಿಯಾ ಯಡವಟ್ಟು.. ಕುಸಿದು ಬಿದ್ದ 82ರ ವೃದ್ಧೆ! ಆಮೇಲಾಗಿದ್ದೇನು?

author-image
Gopal Kulkarni
Updated On
ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್‌​​ ನೀಡದ ಏರ್​ ಇಂಡಿಯಾ ಯಡವಟ್ಟು.. ಕುಸಿದು ಬಿದ್ದ 82ರ ವೃದ್ಧೆ! ಆಮೇಲಾಗಿದ್ದೇನು?
Advertisment
  • ಮುಂಚಿತವಾಗಿ ಬುಕ್​ ಮಾಡಿದ್ದರೂ ಸಿಗಲಿಲ್ಲ ವ್ಹೀಲ್​ಚೇರ್!
  • ಅನಿವಾರ್ಯವಾಗಿ ನಡೆದುಕೊಂಡ ಹೊರಟರು 82 ವೃದ್ಧೆ
  • ಏರ್​ಪೋರ್ಟ್​ ಅಂಗಳದಲ್ಲಿ ಕುಸಿದು ಬಿದ್ದ ವೃದ್ಧೆ ಈಗ ಐಸಿಯುನಲ್ಲಿ

ಏರ್​ ಇಂಡಿಯಾ ಮಾಡಿದ ಒಂದು ಯಡಟ್ಟಿನಿಂದಾಗಿ 82 ವರ್ಷದ ವೃದ್ಧೆ ಈಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುವಂತಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಆಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ಸರಿಯಾದ ಸಮಯಕ್ಕೆ ವೃದ್ಧೆಗೆ ವ್ಹೀಲ್​ ಚೇರ್​ ನೀಡದೇ ಇದ್ದಿದ್ದು.

ಮುಂಚಿತವಾಗಿಯೇ ವೀಲ್ಹ್​ಚೇರ್​ ವ್ಯವಸ್ಥೆಗೆ ಕೇಳಿಕೊಂಡಿದ್ದರು ಕೂಡ ವೃದ್ಧೆಗೆ ಸರಿಯಾದ ಸಮಯಕ್ಕೆ ಅದರ ವ್ಯವಸ್ಥೆಯಾಗಲಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಕಾಯ್ದರು ಕೂಡ ಯಾವುದೇ ವ್ಯವಸ್ಥೆಯಾಗುವ ಸೂಚನೆ ಕಂಡು ಬರಲಿಲ್ಲ. ಕೊನೆಗೆ ವೃದ್ಧೆಯ ಕುಟುಂಬ ಬೇರೆ ದಾರಿಯಿಲ್ಲದೆ ಅವರನ್ನು ಕೈಹಿಡಿದುಕೊಂಡು ನಡೆಸಿಕೊಂಡು ಹೊರಟಿದ್ದಾರೆ. ಆದರೆ ಏರ್​​ಲೈನ್​ ಕೌಂಟರ್​ನಲ್ಲಿಯೇ ವೃದ್ಧೆ ಕುಸಿದು ಬಿದ್ದಿದ್ದು ಅವರನ್ನು ಬೆಂಗಳೂರಿಗೆ ತಲುಪಿದ ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ ತೀವ್ರ ನಿಗಾ ಘಟಕದಲ್ಲಿಟ್ಟು ಸದ್ಯ ವೃದ್ಧೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ದಿಢೀರ್‌ ಭಾರತದ ಜೊತೆ ಸ್ನೇಹ ಹಸ್ತ ಚಾಚಿದ ಚೀನಾ; ಡ್ರ್ಯಾಗನ್ ಬದಲಾಗಲು ಕಾರಣವೇನು?

82 ವೃದ್ಧೆಯ ಮೊಮ್ಮಗಳು ಪರೌಲ್​ ಕನ್ವರ್ ಹೇಳುವ ಪ್ರಕಾರ ನಮ್ಮ ಅಜ್ಜಿ ಕುಸಿದು ಬಿದ್ದರು ಕೂಡ ಏರ್​​ಪೋರ್ಟ್​​ ಆಡಳಿತ ಮಂಡಳಿಯಿಂದ ಪ್ರಥಮ ಚಿಕಿತ್ಸೆಯೂ ಕೂಡ ನೀಡಲಲಾಗಲಿಲ್ಲ. ತುಟಿಯಲ್ಲಿ ರಕ್ತ ಸೋರಿ ತಲೆಗೆ ಗಾಯವಾಗಿದೆ. ಸದ್ಯ ಅವರು ಐಸಿಯುನಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹ ಸಂಪೂರ್ಣವಾಗಿ ಬಳಲಿ ಹೋಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವಿಚಾರದ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಆಕ್ರೋಶ ಹೊರ ಹಾಕಿರುವ ವೃದ್ಧೆಯ ಮೊಮ್ಮಗಳು, ನನ್ನ ಅಜ್ಜಿಯನ್ನು ನೀವು ತುಂಬಾ ಕೀಳುಮಟ್ಟದಿಂದ ನಡೆಸಿಕೊಂಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ. ಇನ್ನು ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ನಮ್ಮ ಕುಟುಂಬ ಮುಂಚಿತವಾಗಿಯೇ ವ್ಹಿಲ್​ಚೇರ್​​ ಬುಕ್​ ಮಾಡಿದ್ದೇವು. ನಾವು ಮಾರ್ಚ್​ 4ನೇ ತಾರೀಖು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದೇವೆ. ಆದ್ರೆ ಏರ್​ಪೋರ್ಟ್ ತಲುಪಿದಾಗ ಅಲ್ಲಿ ಯಾವುದೇ ವ್ಹೀಲ್​ಚೇರ್​ ಸೌಲಭ್ಯಗಳು ಸಿಗಲಿಲ್ಲ. ಏರ್​ ಇಂಡಿಯಾ ಸಿಬ್ಬಂದಿಗೆ ಪದೇ ಪದೇ ಮನವಿ ಮಾಡದೆವು, ಏರ್​​ಪೋರ್ಟ್ ಹೆಲ್ಪ್​ ಡೆಸ್ಕ್​ನಲ್ಲಿ ಕೇಳಿಕೊಂಡೆವು. ಪರ್ಯಾಯ ಏರ್​ಲೈನ್ಸ್​ ಬಳಿಯೂ ಮನವಿ ಮಾಡಿದೆವು.ಆದರೂ ಕೂಡ ಯಾವುದೇ ರೀತಿಯ ಸಹಾಯ ನಮಗೆ ಸಿಗಲಿಲ್ಲ.

ಇದನ್ನೂ ಓದಿ:ನಿದ್ದೆಗಾಗಿ 70% ದಂಪತಿಗಳು ಡಿವೋರ್ಸ್​.. ಅದರಲ್ಲಿ ಭಾರತವೇ ಫಸ್ಟ್; ನಿಮಗೂ ಈ ಸಮಸ್ಯೆ ಇದ್ಯಾ?

ನಮಗೆ ಬೇರೆ ದಾರಿ ಕಾಣದೇ ನಮ್ಮ ಅಜ್ಜಿಯನ್ನು ನಿಧಾನವಾಗಿ ನಡೆಸುಕೊಂಡು ಕರೆದು ಹೊರೆಟೆವು. ಏರ್​​ಪೋರ್ಟ್ ಒಳಗೆ ಪ್ರವೇಶ ಪಡೆಯುವವರೆಗೂ ಅವರು ಸಹಕರಿಸಿದರು. ಅಲ್ಲಿಯವರೆಗೆ ನಡೆದುಕೊಂಡು ಬಂದರೂ ಕೂಡ ಯಾವುದೇ ವ್ಹೀಲ್​ ಚೇರ್ ವ್ಯವಸ್ಥೆಯಾಗಲಿಲ್ಲ. ಕೊನೆಗೆ ನಮ್ಮ ಅಜ್ಜಿ ಕಾಲು ಜಾರಿ ಕುಸಿದು ಬಿದ್ದಳು. ಆದರೂ ಕೂಡ ಸಹಾಯಕ್ಕೆ ಯಾರೊಬ್ಬರು ಕೂಡ ಬರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹತ್ವದ ನಿಯಮ ಬದಲಾವಣೆ.. ಪ್ರಯಾಣಿಕರಿಗೆ ಇದು ತಿಳಿದಿರಲೇಬೇಕು..!

ಮತ್ತಷ್ಟು ಆರೋಪಗಳನ್ನು ಮಾಡಿರುವ ಮೊಮ್ಮಗಳು, ಇಷ್ಟಾದ ಮೇಲೆ ವಿಮಾನ ನಿಲ್ದಾಣದಲ್ಲಿ ನಮ್ಮ ಅಜ್ಜಿಗೆ ಯಾವುದೇ ಪ್ರಥಮ ಚಿಕಿತ್ಸೆ ನೀಡುವ ಗೋಜಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಹೋಗಲಿಲ್ಲ. ಈ ಘಟನೆಯಾದ ನಂತರ ವ್ಹೀಲ್ ಚೇರ್​ ತರಲಾಯಿತು. ಬಿದ್ದ ಸ್ಥಿತಿಯಲ್ಲಿಯೇ ಅಜ್ಜಿಯನ್ನು ಫ್ಲೈಟ್​ನಲ್ಲಿ ಕೂರಿಸಿಕೊಂಡು ಬರಲಾಯ್ತು. ಬೆಂಗಳೂರಿಗೆ ಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯ್ತು. ಸದ್ಯ ಅಜ್ಜಿಗೆ ಎರಡು ಹೋಲಿಗೆಗಳು ಬಿದ್ದಿವೆ. ಇದೆಲ್ಲವನ್ನೂ ನಾನು ಐಸಿಯುನಲ್ಲಿ ಕುಳಿತುಕೊಂಡೇ ಬರೆಯುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನಮ್ಮ ಅಜ್ಜಿಯನ್ನು ಐಸಿಯುನಲ್ಲಿ ಆಬ್ಸ್​​ರ್ವೇಷನ್​ನಲ್ಲಿ ಇಟ್ಟಿದ್ದಾರೆ ಎಂದು ಕನ್ವರ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಆದ ಘಟನೆಯ ಬಗ್ಗೆ ಖೇದವಿದೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಬೇಗ ಗುಣಮುಖರಾಗಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಎಲ್ಲಿ ತಪ್ಪಾಯಿತು ಏಕಾಯಿತು ಮತ್ತು ಯಾರಿಂದಾಯಿತು ಎನ್ನುವುದರ ಬಗ್ಗೆ ಈಗಾಗಲೇ ತನಿಖೆ ಶುರು ಮಾಡಿದ್ದೇವೆ. ತದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದೇವೆ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment