/newsfirstlive-kannada/media/post_attachments/wp-content/uploads/2025/06/Air_India_Flight_315.jpg)
ಅಹಮದಾಬಾದ್ ಏರ್ ಇಂಡಿಯಾನ AI 171 ವಿಮಾನ ಪತನದಿಂದ ಏರ್ ಇಂಡಿಯಾಗೆ ಏಕಕಾಲಕ್ಕೆ ಹತ್ತಾರು ಸಮಸ್ಯೆಗಳು ಎದುರಾಗಿವೆ. ಪ್ರಯಾಣಿಕರು ವಿಮಾನ ಹತ್ತಲು ಕೂಡ ಭಯಪಡುತ್ತಿದ್ದಾರೆ. ವಿಮಾನ ಪತನದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ವಿಮಾನ ಪ್ರಯಾಣವೇ ಸೇಫ್ ಅಲ್ಲವೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಇದರಿಂದಾಗಿ ಡಿಜಿಸಿಎ, ಏರ್ ಇಂಡಿಯಾದ ಬೋಯಿಂಗ್ ವಿಮಾನಗಳ ಸೇಫ್ಟಿ ಚೆಕ್ಗೆ ಆದೇಶ ನೀಡಿದ್ದಾರೆ.
ಇದರಿಂದ ಏರ್ ಇಂಡಿಯಾಗೆ ವಿಮಾನಗಳ ಕೊರತೆ ಎದುರಾಗಿದೆ. ಇದರ ಪರಿಣಾಮವಾಗಿಯೇ ಕಳೆದ 6 ದಿನಗಳಲ್ಲಿ 83 ಏರ್ ಇಂಡಿಯಾ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಯಾಣಿಕರಿಗೆ ಆಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಈಗ ಏರ್ ಇಂಡಿಯಾ ತೀರ್ಮಾನ ಕೈಗೊಂಡಿದೆ.
ಇದನ್ನೂ ಓದಿ: ಸುಟ್ಟು ಕರಕಲಾದ ದೇಹಗಳ ಗುರುತು ಪತ್ತೆ ಹಚ್ಚೋದೇ ಚಾಲೆಂಜ್.. ಡೆಂಟಲ್ ಫೋರೆನ್ಸಿಕ್ ಹೇಗೆ ಕೆಲಸ ಮಾಡುತ್ತೆ?
ಏರ್ ಇಂಡಿಯಾದಿಂದ ಶೇ.15 ರಷ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರ ಕಡಿತ ಮಾಡಲು ತೀರ್ಮಾನಿಸಿದೆ. ಜುಲೈ ಮಧ್ಯಭಾಗದವರೆಗೂ ಶೇ.15 ರಷ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರ ಕಡಿತ ಮಾಡಲು ತೀರ್ಮಾನಿಸಿದೆ. ಏರ್ ಇಂಡಿಯಾದ ವಿಮಾನಗಳ ಅಪರೇಷನ್ ಸ್ಥಿರತೆ, ದಕ್ಷತೆ ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದೊಂದು ತಾತ್ಕಾಲಿಕ ಕ್ರಮ ಎಂದು ಏರ್ ಇಂಡಿಯಾ ಹೇಳಿದೆ. ಕಳೆದ 6 ದಿನಗಳಲ್ಲಿ ಏರ್ ಇಂಡಿಯಾದ 83 ವಿಮಾನಗಳ ಸಂಚಾರ ರದ್ದಾಗಿದೆ. ಹೀಗಾಗಿ ವಿಮಾನ ಸಂಚಾರ ರದ್ದುಪಡಿಸುವ ಬದಲು ಅಂತಾರಾಷ್ಟ್ರೀಯ ವಿಮಾನ ಸಂಚಾರ ಕಡಿತಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮರಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಪ್ರಕರಣ.. ಕೊನೆಗೂ ಬದುಕಿ ಬರಲಿಲ್ಲ ಅಕ್ಷಯ್..
ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿಮಾನ ಸಂಚಾರ ಕಡಿತದ ತೀರ್ಮಾನವನ್ನು ಏರ್ ಇಂಡಿಯಾ ಕಂಪನಿ ತೆಗೆದುಕೊಂಡಿದೆ. ಜೊತೆಗೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಕಾರಣದಿಂದ ಕೆಲ ದೇಶಗಳಲ್ಲಿ ವಾಯುಪ್ರದೇಶ ಬಂದ್ ಆಗಿದೆ. ಇರಾನ್-ಇಸ್ರೇಲ್ ಸಂಘರ್ಷದಿಂದ ಕೆಲ ದೇಶಗಳ ವಾಯು ಪ್ರದೇಶ ಬಂದ್ ಆಗಿರುವುದರಿಂದ ಮಧ್ಯಪ್ರಾಚ್ಯ, ಯೂರೋಪ್ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಕೂಡ ಕಷ್ಟವಾಗಿದೆ. ಶೇ.15 ರಷ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರ ಕಡಿತದಿಂದ ವಿಮಾನಗಳ ಲಭ್ಯತೆ ಉಂಟಾಗುತ್ತೆ ಎಂದು ಏರ್ ಇಂಡಿಯಾ ಹೇಳಿದೆ.
ಇದನ್ನೂ ಓದಿ: 38 ವರ್ಷಗಳ ಬಳಿಕ ನನಸಾಗುತ್ತಿದೆ ಅಣ್ಣಾವ್ರ ಕನಸು.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ನಿರೀಕ್ಷೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ