newsfirstkannada.com

ಏರ್​​ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು

Share :

Published September 5, 2024 at 2:48pm

Update September 5, 2024 at 2:49pm

    ವಿಮಾನಯಾನದ ವೇಳೆ ವೈ_ಫೈ ಬಳಸುವ ಅವಕಾಶ

    ರತನ್​ ಟಾಟಾ ಒಡೆತನದ ಸಂಸ್ಥೆಯಿಂದ ಹೊಸ ಸೇವೆ

    ಅಸಾಧ್ಯವಾಗಿದ್ದನ್ನ ಸಾಧಿಸಿದ ಏರ್​ ಇಂಡಿಯಾ ಸಂಸ್ಥೆ

ವಾಯುಯಾನ ಸಾಕಷ್ಟು ಬದಲಾವಣೆಯನ್ನು ತರುತ್ತಿದೆ. ಪ್ರಯಾಣದ ವೇಳೆ ಮೊಬೈಲ್​ ಸ್ವಿಚ್​ ಆಫ್​ ಮಾಡುವ ಕಾಲವೊಂದಿತ್ತು. ಬಳಿಕ ಸ್ಮಾರ್ಟ್​ಫೋನ್​ನಲ್ಲಿ ಫೈಟ್​ ಮೋಡ್​ ಎಂಬ ಅವಕಾಶ ನೀಡಿತ್ತು. ಆದರೀಗ ವಿಮಾನ ಪ್ರಯಾಣದ ವೇಳೆ ವೈ-ಫೈ ಬಳಸುವ ಅವಕಾಶವನ್ನು ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆ ನೀಡಲು ಮುಂದಾಗಿದೆ. ಅದಕ್ಕೆ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಸಾಕ್ಷಿಯಾಗಿದೆ.

ಪ್ರಸ್ತುತ ಜಗತ್ತೇ ಇಂಟರ್​​ನೆಟ್​ ಇಲ್ಲದೆ ಮುನ್ನಡೆಯುವುದು ಅಸಾಧ್ಯ. ಇಂಟರ್​ನೆಟ್​ವೊಂದಿದ್ದರೆ ಆಕಾಶದಲ್ಲೂ ಪ್ರಯಾಣದ ವೇಳೆ ಕೆಲಸ ಮಾಡಬಹುದು ಎಂಬುದಕ್ಕೆ ಈಗ ಏರ್​ಇಂಡಿಯಾ ಸಂಸ್ಥೆ ವೈ-ಫೈ ಆಯ್ಕೆಯನ್ನು ನೀಡುತ್ತಿದೆ. ಈಗಾಗಲೇ ದೆಹಲಿಯಿಂದ ಲಂಡನ್​ಗೆ ಪ್ರಯಾಣಿಸುವ A350 ವಿಮಾನದಲ್ಲಿ ತನ್ನ ಪ್ರಯಾಣಿಕರಿಗೆ ವೈ-ಫೈ ಸೇವೆಯನ್ನು ನೀಡಿದೆ. ಆ ಮೂಲಕ ವೈ-ಫೈ ಸೇವೆ ಒದಗಿಸಿದ ಮೊದಲ ವಿಮಾನವಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ಎಚ್ಚರ! ನಿಮ್ಮ ಕರೆಯನ್ನು ಕದ್ದಾಲಿಸುತ್ತಿದ್ದಾರೆ.. ಕೊನೆಗೂ ತಪ್ಪೊಪ್ಪಿಕೊಂಡಿದೆ ಈ ಮಾರ್ಕೆಟಿಂಗ್​ ಸಂಸ್ಥೆ!

ಏರ್​ ಇಂಡಿಯಾ ದೆಹಲಿ ಮತ್ತು ಲಂಡನ್​ ವಿಮಾನ ನಿಲ್ದಾಣದ ನಡುವೆ ಸಂಚರಿಸುವ A350-900 ವಿಮಾನದಲ್ಲಿ ವೈ-ಫೈ ಸೇವೆ ಪ್ರಾರಂಭಿಸಿರುವುದಾಗಿ ತಿಳಿಸಿದೆ. ಇದೊಂದು ಮಹತ್ವಾಕಾಂಕ್ಷೆಯ ಪರಿವರ್ತನೆಯ ಪ್ರಯಾಣ ಎಂದು ಕರೆದಿದೆ. ಈ ಮಾರ್ಗದಲ್ಲಿ ದಿನಕ್ಕೆ ಎರಡು ಬಾರಿ ವಿಮಾನ ಸಂಚರಿಸುತ್ತದೆ.

ಇದನ್ನೂ ಓದಿ:  ಮಕ್ಕಳು ಬೆಳ್ಳಗೆ ಹುಟ್ಟಲು ಬಿಳಿ ನಾಯಿಯ ತಲೆ ಬರುಡೆ ತಿನ್ನುತ್ತಾರೆ ಇವರು! ಏನ್​ ವಿಚಿತ್ರ ಗುರೂ

ಅಂದಹಾಗೆಯೇ ಏರ್​ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್​ ಒಡೆತನಕ್ಕೆ ಸೇರಿದೆ. A350 ವಿಮಾನದಲ್ಲಿ 28 ಖಾಸಗಿ ಸೀಟ್​ ಹೊಂದಿವೆ. ಪ್ರೀಮಿಯಂ ಎಕಾನಮಿಯಲ್ಲಿ 24 ಸೀಟುಗಳಿವೆ. ಎಕಾನಮಿಯಲ್ಲೂ 24 ಸೀಟುಗಳಿವೆ.

ವೈ-ಫೈ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಏರ್​-ಟು-ಗ್ರೌಂಡ್​ ಮತ್ತು ಉಪಗೃಹಗಳ ವೈ-ಫೈ ಮೂಲಕ ಸ್ಮಾರ್ಟ್​ಫೋನ್​ ಕಾರ್ಯನಿರ್ವಹಿಸುತ್ತದೆ. ನೆಲದ ಮೇಲಿರುವ ಸೆಲ್​ ಟವರ್​​ಗಳಿಂದ ವಿಮಾನಗಳಿಗೆ ವೈ-ಫೈ ಸೇವೆ ಒದಗಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏರ್​​ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು

https://newsfirstlive.com/wp-content/uploads/2024/09/Air-india.jpg

Load More