₹2,400 ಕೋಟಿ ವಿಮೆ.. ಅತಿ ದೊಡ್ಡ ಇನ್ಶೂರೆನ್ಸ್ ಕ್ಲೇಮ್‌; ಏರ್​ ಇಂಡಿಯಾ ಸಂಸ್ಥೆ, ಪ್ರಯಾಣಿಕರಿಗೆ ಎಷ್ಟು?

author-image
admin
Updated On
ಅಹ್ಮದಾಬಾದ್ ವಿಮಾನ ದುರಂತದ 15 ಪುಟಗಳ ತನಿಖಾ ವರದಿ ಬಹಿರಂಗ.. ಪತನಕ್ಕೆ ಕಾರಣವಾದ ಅಸಲಿ ಸತ್ಯ ಏನು?
Advertisment
  • 275 ಮಂದಿ ಶವಗಳ ಗುರುತು ಪತ್ತೆ ಹಚ್ಚಿದ ಬಳಿಕ ಪರಿಹಾರ ಹಸ್ತಾಂತರ
  • ಮೃತ ಪ್ರಯಾಣಿಕರ ಸಂಬಂಧಿಕರಿಗೆ ತಲಾ 1 ಕೋಟಿ 80 ಲಕ್ಷ ರೂ.
  • ಇನ್ಶೂರೆನ್ಸ್ ಕಂಪನಿಯಿಂದ ಏರ್ ಇಂಡಿಯಾಗೆ ಸಿಗೋ ಹಣ ಎಷ್ಟು ಗೊತ್ತಾ?

ಅಹ್ಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 275ಕ್ಕೆ ಏರಿಕೆಯಾಗಿದೆ. 275 ಮಂದಿ ಶವಗಳ ಗುರುತು ಪತ್ತೆ ಹಚ್ಚುವ ಜೊತೆಗೆ ಅವರಿಗೆ ಪರಿಹಾರ ನೀಡುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಏರ್ ಇಂಡಿಯಾ ಮೃತರ ಸಂಬಂಧಿಕರಿಗೆ ತಲಾ 1 ಕೋಟಿ 80 ಲಕ್ಷ ರೂಪಾಯಿ ನೀಡುವ ಸಾಧ್ಯತೆ ಇದೆ. ಒಬ್ಬೊಬ್ಬರಿಗೂ 1 ಕೋಟಿ 80 ಲಕ್ಷ ರೂಪಾಯಿ ಅಂದ್ರೆ ಏರ್ ಇಂಡಿಯಾ 400 ಕೋಟಿಗೂ ಅಧಿಕ ಮೊತ್ತವನ್ನ ಪರಿಹಾರವಾಗಿ ನೀಡಬೇಕಾಗುತ್ತದೆ.

ದೇಶದ ಇತಿಹಾಸದಲ್ಲೇ ಇಲ್ಲಿಯವರೆಗಿನ ಅತಿ ದೊಡ್ಡ ಇನ್ಸೂರೆನ್ಸ್ ಕ್ಲೇಮ್ ಅನ್ನು ಏರ್ ಇಂಡಿಯಾ ಕಂಪನಿ ಮಾಡಲಿದೆ. ಏರ್ ಇಂಡಿಯಾಗೆ ಇನ್ಶೂರೆನ್ಸ್ ಕಂಪನಿಯಿಂದ ಬರೋಬ್ಬರಿ 1,000 ಕೋಟಿ ಇಂದ 2,400 ಕೋಟಿ ರೂಪಾಯಿ ಸಿಗುವ ಸಾಧ್ಯತೆ ಇದೆ.

publive-image

ಏರ್ ಇಂಡಿಯಾ ವಿಮಾನ ಪತನದ ಹಿನ್ನೆಲೆ ಕಂಪನಿಗೆ ಬರೋಬ್ಬರಿ 665 ರಿಂದ 965 ಕೋಟಿ ರೂಪಾಯಿ ಇನ್ಶೂರೆನ್ಸ್‌ ಸಿಗುವ ನಿರೀಕ್ಷೆ ಇದೆ. 241 ಜನ ಸಾವನ್ನಪ್ಪಿದ ಪ್ರಯಾಣಿಕರಿಗೆ 377 ಕೋಟಿ ರೂಪಾಯಿ ಇಂದ 434 ಕೋಟಿ ರೂಪಾಯಿವರೆಗೆ ಪರಿಹಾರ ಮತ್ತು 3ನೇ ವ್ಯಕ್ತಿಯ ಇನ್ಶೂರೆನ್ಸ್ ಹಣ ಕೂಡ ಕ್ಲೇಮ್ ಆಗುತ್ತದೆ.

ಇದನ್ನೂ  ಓದಿ: ವಿಮಾನ ಪತನದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆ; ಅಹಮದಾಬಾದ್‌ನಲ್ಲಿ ಸಾವಿನ ಸಂಖ್ಯೆ 275ಕ್ಕೆ ಏರಿಕೆ 

ಇದರ ಜೊತೆಗೆ ವಿಮಾನ ಪತನವಾದ B.J ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ದುರ್ಘಟನೆಗೂ ಇನ್ಶೂರೆನ್ಸ್ ಕ್ಲೇಮ್ ಆಗುತ್ತಿದೆ. ಹಾಸ್ಟೆಲ್‌ನಲ್ಲಿ ನಿಧನ ಹೊಂದಿದ 30 ವಿದ್ಯಾರ್ಥಿಗಳಿಗೆ ಪರಿಹಾರ, ಗಾಯಾಳುಗಳಿಗೆ ವೈದ್ಯಕೀಯ ವೆಚ್ಚ ಹಾಗೂ ಪರಿಹಾರ ಕೂಡ ಬರುತ್ತೆ. ಈ ಮೂಲಕ ಅಹ್ಮದಾಬಾದ್ ವಿಮಾನ ಪತನದ ದುರಂತ ಭಾರತ ಇತಿಹಾಸದಲ್ಲೇ ಅತಿ ದೊಡ್ಡ ವಿಮೆ ಅನ್ನೋ ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment