ನಗರದಲ್ಲಿ ಹೆಚ್ಚಾದ ವಾಯುಮಾಲಿನ್ಯ.. ವಿಮಾನ ಹಾರಾಟದ ಮೇಲೂ ಕರಿನೆರಳು, ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿ

author-image
Bheemappa
Updated On
ನಗರದಲ್ಲಿ ಹೆಚ್ಚಾದ ವಾಯುಮಾಲಿನ್ಯ.. ವಿಮಾನ ಹಾರಾಟದ ಮೇಲೂ ಕರಿನೆರಳು, ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿ
Advertisment
  • ಕಠಿಣ ನಿಯಮಗಳನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ
  • BS-III ಪೆಟ್ರೋಲ್, BS-IV ಡೀಸೆಲ್ ವಾಹನಗಳನ್ನ ನಿಷೇಧ?
  • ಸಿಟಿಯಲ್ಲಿನ ಕಲುಷಿತ ಗಾಳಿ ಬಗ್ಗೆ ಮಾಹಿತಿ ಹಂಚಿಕೊಂಡ ಸಿಎಂ

ಗ್ಯಾಸ್‌ ಚೇಂಬರ್‌ ಆಗಿ ಬದಲಾಗಿರೋ ರಾಷ್ಟ್ರ ರಾಜಧಾನಿ ದೆಹಲಿ ವಾಯುಮಾಲಿನ್ಯದ ಪರಮಾವಧಿಗೆ ತಲುಪಿದೆ. ಅತ್ತ ವಾಯುಮಾಲಿನ್ಯದ ಎಫೆಕ್ಟ್​ ಶಾಲಾ ಮಕ್ಕಳಿಗಳಿಗೆ ತಟ್ಟಿದ್ರೆ, ಇತ್ತ ಬಾನಂಚಿನಲ್ಲಿ ಹಾರಾಟ ನಡೆಸುವ ಲೋಹದ ಹಕ್ಕಿಗಳಿಗೂ ಬ್ರೇಕ್​ ಹಾಕಿದೆ. ವಿಪರೀತ ವಾಯುಮಾಲಿನ್ಯದ ಹಿನ್ನೆಲೆ ದೆಹಲಿಯಲ್ಲಿ ಟಫ್​ ರೂಲ್ಸ್​ ಸಹ ಜಾರಿಗೆ ಬರಲಿವೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿ ಗ್ಯಾಸ್‌ ಚೇಂಬರ್‌ ಆಗಿ ಬದಲಾಗಿದೆ. ಉಸಿರಾಡೋಕು ದೆಹಲಿ ಜನತೆ ಹಿಂದೆ ಮುಂದೆ ನೋಡಬೇಕಾದಂತ ಶೋಚನೀಯ ಸ್ಥಿತಿ ಬಂದೊದಗಿದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ವಾಯುಮಾಲಿನ್ಯ ದುಷ್ಪರಿಣಾಮ ಬಿರುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಕೋವಿಡ್​ ಸಮಯದ ಆನ್​ಲೈನ್​​ ಕ್ಲಾಸ್​ ಅಸ್ತ್ರವನ್ನ ಮತ್ತೆ ಪ್ರಯೋಗಿಸಿದೆ.

ಇದನ್ನೂ ಓದಿ:ಉಪಚುನಾವಣೆ ಬೆನ್ನಲ್ಲೇ ಚರಂಡಿಯಲ್ಲಿ ಬ್ಯಾಲೆಟ್ ಬಾಕ್ಸ್; ಶಿಗ್ಗಾಂವಿಯಲ್ಲಿ ಭಾರೀ ಅನುಮಾನ..!

publive-image

ದೆಹಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​ಲೈನ್​ ಕ್ಲಾಸ್!

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನೆಲೆ ಮಕ್ಕಳು ಹಾಗೂ ವೃದ್ಧರನ್ನ ಸೇಫ್​ ಮಾಡೋದೆ ಸವಾಲಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಗಾಳಿ ಗುಣಮಟ್ಟವು 418 AQIನೊಂದಿಗೆ ಅತ್ಯಂತ ಕಳಪೆ ಗುಣಮಟ್ಟ ದಾಖಲಾದ ಹಿನ್ನೆಲೆ ಸರ್ಕಾರ ಮಕ್ಕಳಿಗಾಗಿ ಅನ್​ಲೈನ್​​ ಕ್ಲಾಸ್​​ ಮೊರೆ ಹೋಗಿದೆ. ಈ ಕುರಿತು ದೆಹಲಿ ಸಿಎಂ ಅತಿಶಿ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಮಾನ ಹಾರಾಟದ ಮೇಲೂ ಮಾಲಿನ್ಯದ ಕರಿನೆರಳು!

ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆ ಆಗಿದ್ದು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ದೆಹಲಿ ವಾಯು ಮಾಲಿನ್ಯದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ. ವಯನಾಡ್‌ನಿಂದ ದೆಹಲಿಗೆ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದ ಅನುಭವವಾಯಿತು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಾಯು ಮಾಲಿನ್ಯದ ಹಿನ್ನೆಲೆ ದೆಹಲಿಯಲ್ಲಿ ಟಫ್​ ರೂಲ್ಸ್​!

ವಾಯುಮಾಲಿನ್ಯದ ಹಿನ್ನೆಲೆ ದೆಹಲಿ ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಟಫ್​ ರೂಲ್ಸ್​ಗಳನ್ನ ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದೆ. ಈ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆಯಿಂದಲೇ ದೆಹಲಿಯಲ್ಲಿ ಗ್ರಾಫ್​ 3 ಜಾರಿಯಾಗಲಿದೆ. ಗ್ರಾಫ್​ 3 ಎಂದ್ರೆ ಇದು ಮಾಲಿನ್ಯ-ವಿರೋಧಿ ಕ್ರಮಗಳ ಮೂರನೇ ಹಂತವಾಗಿದ್ದು, AQI ತೀವ್ರ ಹಂತಕ್ಕೆ ತಲುಪಿದಾಗ ಕಾರ್ಯಗತಗೊಳಿಸಲಾಗುತ್ತದೆ. ಹಾಗಿದ್ರೆ ಈ ಗ್ರಾಫ್​ 3ಯಲ್ಲಿ ಏನೆಲ್ಲ ನಿಯಮಗಳಿವೆ ಅಂತ ನೋಡೋದಾದ್ರೆ.

ಇದನ್ನೂ ಓದಿ: ಟಿಪ್ಪು ಸುಲ್ತಾನ್​ ಖಡ್ಗ ಕೋಟಿ ಕೋಟಿ ಬೆಲೆಗೆ ಹರಾಜು.. ಯುದ್ಧದ ಕತ್ತಿಗೆ ಎಷ್ಟು ವರ್ಷಗಳ ಇತಿಹಾಸ ಇದೆ?

publive-image

ಡೆಲ್ಲಿಯಲ್ಲಿ ಗ್ರಾಫ್​​​ 3 ಜಾರಿ!

  • ನಿಷೇಧ 1- ಕಟ್ಟಡ ನಿರ್ಮಾಣ ಹಾಗೂ ಡೆಮಾಲಿಷನ್ ಚಟುವಟಿಕೆ
  • ನಿಷೇಧ 2- BS-III ಪೆಟ್ರೋಲ್ & BS-IV ಡೀಸೆಲ್ 4 ಚಕ್ರಗಳ ವಾಹನ
  • ನಿಷೇಧ 3- ಡೀಸೆಲ್ ಜನರೇಟರ್ ಬಳಕೆ ನಿಷೇಧ, ರಸ್ತೆ ಗುಡಿಸುವ ಕೆಲಸ
  • ನಿಷೇಧ 4- ಪೇಂಟಿಂಗ್, ಪಾಲಿಶಿಂಗ್ ಮತ್ತು ವಾರ್ನಿಶಿಂಗ್ ಕೆಲಸಗಳು
  • ನಿಷೇಧ 5- ಬೃಹತ್​ ವೆಲ್ಡಿಂಗ್ ಮತ್ತು ಗ್ಯಾಸ್​ ವೆಲ್ಡಿಂಗ್ ಕೆಲಸಗಳು

ಗ್ಯಾಸ್‌ ಚೇಂಬರ್​ನಂತಾಗಿರೋ ದೆಹಲಿಯಲ್ಲಿ ಜನಸಮಾನ್ಯರ ಆರೋಗ್ಯವನ್ನ ದೇವರೇ ಕಾಪಾಡಬೇಕಿದೆ. ಆಹಾರ ಹಾಳಾದ್ರೆ ಬೇರೆ ಮಾಡಿಕೊಳ್ಳಬಹುದು, ನೀರು ಕಲುಷಿತಗೊಂಡ್ರೆ ಫಿಲ್ಟರ್​ ಮಾಡಿಕೊಳ್ಳಬಹುದು. ಆದ್ರೆ, ಗಾಳಿ ಕಲುಷಿತಗೊಂಡ್ರೆ ಹೇಗೆ ಉಸಿರಾಡೋದು ಅನ್ನೋದೆ ಸದ್ಯ ದೆಹಲಿ ಜನರ ಬಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment