ಏರ್​​ಪೋರ್ಟ್​ನಲ್ಲಿ ಉದ್ಯೋಗಾವಕಾಶ.. ಕೆಲಸ ಬೇಕು ಎನ್ನುವವರಿಗೆ ಇದೊಂದು ಚಾನ್ಸ್​!

author-image
Bheemappa
Updated On
ಏರ್​​ಪೋರ್ಟ್​ನಲ್ಲಿ ಉದ್ಯೋಗಾವಕಾಶ.. ಕೆಲಸ ಬೇಕು ಎನ್ನುವವರಿಗೆ ಇದೊಂದು ಚಾನ್ಸ್​!
Advertisment
  • ಯಾವ ಯಾವ ಕೋರ್ಸ್ ಮಾಡಿದವರಿಗೆ ಇಲ್ಲಿ ಅವಕಾಶ ಇದೆ?
  • ಏರ್​ಪೋರ್ಟ್​ನಲ್ಲಿ ಕೆಲಸಕ್ಕೆ ಉತ್ಸುಕರಾಗಿದ್ದರೆ ಅಪ್ಲೇ ಮಾಡಿ
  • ಇವೆಲ್ಲಾ ಸರ್ಕಾರದಿಂದ ನೇಮಕ ಮಾಡಲಾಗುವ ಕೆಲಸ ಆಗಿವೆ

ವಿವಿಧ ಅಪ್ರೆಂಟಿಸ್ ಹುದ್ದೆಗಳಿಗಾಗಿ ಏರ್​ಪೋರ್ಟ್​ ಅಥಾರಿಟಿ ಆಫ್ ಇಂಡಿಯಾ (ಎಎಐ) ಅರ್ಜಿಗಳನ್ನು ಆಹ್ವಾನ ಮಾಡಿದೆ. ಏರ್​​ಪೋರ್ಟ್​​ನಿಂದಲೇ ತಮ್ಮ ವೃತ್ತಿ ಜೀವನ ಆರಂಭ ಮಾಡಬೇಕು ಎನ್ನುವವರಿಗೆ ಇದೊಂದು ಉತ್ತಮವಾದ ಅವಕಾಶ ಆಗಿದೆ. ಹೀಗಾಗಿ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬಾರದು.

ಏರ್​ಪೋರ್ಟ್​ ಅಥಾರಿಟಿ ಆಫ್ ಇಂಡಿಯಾ ಆಹ್ವಾನಿಸಿದ ಈ ಉದ್ಯೋಗಗಳಿಗೆ ಅರ್ಹತೆ, ಶೈಕ್ಷಣಿಕ ಅರ್ಹತೆ, ಶುಲ್ಕ, ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಇದನ್ನು ಸಂಪೂರ್ಣವಾಗಿ ಗಮನಿಸಬೇಕು. ಅರ್ಜಿ ಸಲ್ಲಿಸಬೇಕು ಎನ್ನುವವರು ಇಲ್ಲಿಗೆ ಭೇಟಿ ನೀಡಿ- apprenticeshipindia.gov.in.

ಉದ್ಯೋಗದ ಹೆಸರು

ಅಪ್ರೆಂಟಿಸ್ ಹುದ್ದೆಗಳು

ಒಟ್ಟು ಅಪ್ರೆಂಟಿಸ್ ಹುದ್ದೆಗಳು- 90

ಇದನ್ನೂ ಓದಿ:GATE 2025ರ ಪರೀಕ್ಷಾ ವೇಳಾಪಟ್ಟಿ ಐಐಟಿ ಇಂದ ಅಧಿಕೃತವಾಗಿ ರಿಲೀಸ್.. ಯಾವ ತಿಂಗಳಲ್ಲಿ ಎಕ್ಸಾಂ?

publive-image

ಮಾಸಿಕ ಸ್ಯಾಲರಿ ಎಷ್ಟು ಇರುತ್ತದೆ?

  • ಪದವಿ ಅಪ್ರೆಂಟಿಸ್ ಅಭ್ಯರ್ಥಿಗಳು- 15,000 ರೂಪಾಯಿ
  • ಟೆಕ್ನಿಕಲ್ ಅಪ್ರೆಂಟಿಸ್ ಅಭ್ಯರ್ಥಿಗಳು- 12,000 ರೂಪಾಯಿ
  • ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು- 9,000 ರೂಪಾಯಿ

ಸರ್ಕಾರದ ನಿಯಮದಂತೆ ಅಪ್ರೆಂಟಿಸ್‌ಗಳಿಗೆ ವಿಮಾನ ನಿಲ್ದಾಣಗಳು/ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಯಾವ ವಿಮಾನ ನಿಲ್ದಾಣ ನಿಗದಿ ಆಗಿರುತ್ತದೆಯೋ ಅದೇ ಅಂತಿಮ ಆಗಿರುತ್ತದೆ. ತರಬೇತಿ ಸ್ಥಳದಲ್ಲಿ ಯಾವುದೇ ಬದಲಾವಣೆ ನೀಡಲಾಗಲ್ಲ. ಈಗಾಗಲೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವವರಿಗೆ ಹಾಗೂ ಬೇರೆ ನಿಲ್ದಾಣಗಳಲ್ಲಿ ನೇಮಕ ಆಗಿರುವವರಿಗೆ ಇದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಅಪ್ರೆಂಟಿಸ್‌ಶಿಪ್ ಹುದ್ದೆಗಳ ಹಂಚಿಕೆ

  • ಸಿವಿಲ್ ಇಂಜಿನಿಯರಿಂಗ್- 17
  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್- 20
  • ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್- 15
  • ಮೆಕಾನಿಕಲ್ ಇಂಜಿನಿಯರಿಂಗ್- 8
  • ಐಟಿಐ ಫಿಟ್ಟರ್- 05
  • ಮೆಕಾನಿಕಲ್ ಮೋಟರ್ ವೆಹಿಕಲ್ ಸ್ಪೆಷಲಿಸ್ಟ್- 10
  • ಎಲೆಕ್ಟ್ರಾನಿಕ್ಸ್​- 10
  • ಡ್ರಾಫ್ಟ್​ಮೆನ್- 05

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಅರ್ಹತಾ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ನಿರ್ಧರಿಸಲಾಗುತ್ತದೆ. ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿ, ಕೊಟ್ಟಂತ ಇಮೇಲ್ ಐಡಿ ಮೂಲಕ ಮಾಹಿತಿ ತಿಳಿಸಲಾಗುತ್ತದೆ. ಇದಾದ ಬಳಿಕ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಗಳು ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಸಲ್ಲಿಸಬೇಕು.

ಅಪ್ಲೇ ಮಾಡಲು ಕೊನೆ ದಿನ?

ಕೊನೆಯ ದಿನಾಂಕ 20 ನವೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment