/newsfirstlive-kannada/media/post_attachments/wp-content/uploads/2025/03/Gwadar-airport.jpg)
ಪಾಕಿಸ್ತಾನವೀಗ ಬಡತನವನ್ನೇ ಹಾಸಿ ಹೊದ್ದುಕೊಂಡು ಮಲಗು ವಿಶ್ವ ಹಣಕಾಸು ಸಂಸ್ಥೆಗಳ ಮುಂದೆ ದೇಹಿ ಅಂತ ನಿಂತಿರುವ ದೇಶ. ಹೊಟ್ಟೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿದುಕೊಳ್ಳುವುದನ್ನು ಪಾಕಿಸ್ತಾನ ಎಂದಿಗೂ ಕೂಡ ಮರೆತಿಲ್ಲ. ಅದಕ್ಕೆ ನಿದರ್ಶನವಾಗಿಯೇ ನಿಂತಿದೆ ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ನ ಯೋಜನೆಯಲ್ಲಿ ನಿರ್ಮಾಣವಾದ ಈ ಏರ್ಪೋರ್ಟ್
ಸುಮಾರು 19 ಕೋಟಿ ರೂಪಾಯಿ ಬಂಡವಾಳ ಹೂಡಿದ ಚೀನಾ ಬಲೂಚಿಸ್ತಾನದಲ್ಲಿ ಬರುವ ಗ್ವಾದರ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಿದದೆ. ಗ್ವಾದರ್ ಸಿಟಿಯನ್ನು ನವ ನಿರ್ಮಾಣ ಮಾಡುವ ಉದ್ದೇಶದಿಂದ ಈ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ನಗರದಿಂದ ಜಾಗತಿಕ ವಾಯು ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ, 90 ಸಾವಿರ ಜನಸಂಖ್ಯೆ ಇರುವ ಸಿಟಿಯಲ್ಲಿ 4 ಲಕ್ಷ ಜನರನ್ನು ಹಿಡಿಯುವಷ್ಟು ದೊಡ್ಡದಾದ ಏರ್ಪೋರ್ಟ್ನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ:14ನೇ ಮಗುವಿಗೆ ತಂದೆಯಾದ ಎಲಾನ್ ಮಸ್ಕ್.. ಯಾರು ಈ ಶಿವೋನ್ ಜಿಲಿಸ್? ತಾಯಿ, ಮಕ್ಕಳ ಮಾಹಿತಿ ಇಲ್ಲಿದೆ!
ಈ ಏರ್ಪೋರ್ಟ್ ಉದ್ಘಾಟನೆಯಾದಾಗ ಸುಮಾರು 2 ಸಾವಿರ ಸ್ಥಳೀಯರಿಗೆ ಉದ್ಯೋಗ ಸಿಗಲಿವೆ ಎಂದು ಪಾಕಿಸ್ತಾನ ಸರ್ಕಾರ ಎದೆ ಕೊಚ್ಚಿಕೊಂಡಿತ್ತು. ಆದ್ರೆ ಈಗ ಅದರ ಹಣೆಬರಹ ಏನಾಗಿದೆಯಂದರೆ. ಯಾವ ವಿಮಾನ ನಿಲ್ದಾಣದಿಂದ ನಿತ್ಯ ಹಲವಾರು ವಿಮಾನಗಳು ಹೊರಡಬೇಕಿತ್ತೊ, ಯಾವ ವಿಮಾನ ನಿಲ್ದಾಣದಿಂದ ನಿತ್ಯ ಸಾವಿರಾರು ಜನರು ವಿಮಾನಯಾನ ಮಾಡುತ್ತಾರೆ ಎಂದು ಕಲ್ಪಿಸಲಾಗಿತ್ತೋ ಆ ವಿಮಾನ ನಿಲ್ದಾಣದಲ್ಲಿ ಇಂದು ಒಂದೇ ಒಂದು ವಿಮಾನವೂ ಹಾರುವುದಿಲ್ಲ. ಒಬ್ಬನೇ ಒಬ್ಬ ಪ್ರಯಾಣಿಕನೂ ಇಲ್ಲ.
ಸ್ಮಶಾನ ಮೌನದಂತೆ ಇಂದು ಆ ವಿಮಾನ ನಿಲ್ದಾಣ ನಿಂತಿದೆ. ಉದ್ಘಾಟನೆಗೊಂಡ ದಿನದಿಂದಲೂ ಕೂಡ ಇಲ್ಲ ಒಂದೇ ಒಂದು ನರಪಿಳ್ಳೆಯೂ ಕೂಡ ಹಾದಿಲ್ಲ. ಮುರಕಲು ಗೂಡಿನಂತೆ. ಯಾವುದೋ ಪುರಾತನದ ಕಟ್ಟಡದಂತೆ ಜನರು ಇಲ್ಲದೇ. ವಿಮಾನಗಳ ಸಂಪರ್ಕವೂ ಇಲ್ಲದೇ ಬರೀ ಐಷಾರಾಮಿತನವನ್ನೊಂದನ್ನೇ ಬಾಹ್ಯವಾಗಿ ತೋರಿಸುತ್ತಾ ನಿಂತಿದೆ ಈ ವಿಮಾನ ನಿಲ್ದಾಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ